ಮನೋಜ್​ ಮುಂತಾಶಿರ್​ ಶುಕ್ಲಾ 
ಸಿನಿಮಾ ಸುದ್ದಿ

ಜನರ ಭಾವನೆಗಳಿಗೆ ನೋವಾಗಿದೆ, ಬೇಷರತ್ ಕ್ಷಮೆಯಾಚಿಸುತ್ತೇನೆ: 'ಆದಿ ಪುರುಷ್' ಚಿತ್ರ ಸಂಭಾಷಣೆಕಾರ ಮನೋಜ್

ಆದಿಪುರುಷ್ ಸಿನಿಮಾದಲ್ಲಿರುವ ತಪ್ಪನ್ನು ಒಪ್ಪಿಕೊಂಡಿರುವ ಚಿತ್ರದ ಸಂಭಾಷಣೆಕಾರ ಮನೋಜ್​ ಮುಂತಾಶಿರ್​ ಶುಕ್ಲಾ ಅವರು, ವಿವಾದಾತ್ಮಕ ಡೈಲಾಗ್​ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.

ಮುಂಬೈ: ಆದಿಪುರುಷ್ ಸಿನಿಮಾದಲ್ಲಿರುವ ತಪ್ಪನ್ನು ಒಪ್ಪಿಕೊಂಡಿರುವ ಚಿತ್ರದ ಸಂಭಾಷಣೆಕಾರ ಮನೋಜ್​ ಮುಂತಾಶಿರ್​ ಶುಕ್ಲಾ ಅವರು, ವಿವಾದಾತ್ಮಕ ಡೈಲಾಗ್​ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಆದಿಪುರುಷ ಸಿನಿಮಾದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಎರಡೂ ಕೈಗಳನ್ನು ಮುಗಿದು ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಹಾಗೂ ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ ಎಂದು ಹೇಳಿದ್ದಾರೆ.

ಮನೋಜ್ ಅವರು ಕ್ಷಮೆಯಾಚಿದ್ದನ್ನು ನೆಟ್ಟಿಗರು ಒಪ್ಪಿಕೊಂಡಿಲ್ಲ. ಈಗಲೂ ಅವರ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿದ್ದಾರೆ.

ಕ್ಷಮೆ ಕೇಳಲು ತುಂಬಾ ತಡವಾಯಿತು ಎಂದಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಅದರ ಪ್ರಭಾವ ಕಡಿಮೆಯಾದ ಬಳಿಕ ಕ್ಷಮೆಯಾಚಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಮಂದಿಯ ಭಾವನೆಗಳಿಗೆ ನೋವಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಆದಿಪುರುಷ ಸಿನಿಮಾವನ್ನು ಓಂ ರಾವರ್​ ಅವರು ನಿರ್ದೇಶನ ಮಾಡಿದ್ದಾರೆ. ಮಹಾಕಾವ್ಯ ರಾಮಾಯಣ ಆಧಾರಿತ ಸಿನಿಮಾ ಆಗಿದ್ದು, ಭಾರೀ ಬಜೆಟ್​ನೊಂದಿಗೆ ಸಿನಿಮಾವನ್ನು ಯುವಿ ಕ್ರಿಯೇಷನ್ಸ್, ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡಿದೆ.

ಪ್ಯಾನ್​ ಇಂಡಿಯಾ ಸೂಪರ್​ಸ್ಟಾರ್​ ಪ್ರಭಾಸ್​ ರಾಮನ ಪಾತ್ರದಲ್ಲಿ, ನಟಿ ಕೃತಿ ಸನೋನ್​ ಸೀತೆಯ ಪಾತ್ರದಲ್ಲಿ, ಸನ್ನಿ ಸಿಂಗ್​ ಲಕ್ಷ್ಮಣನ ಪಾತ್ರದಲ್ಲಿ ಹಾಗೂ ಸೈಫ್​ ಅಲಿಖಾನ್​ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.

ವಿವಾದಾತ್ಮಕ ಡೈಲಾಗ್ಸ್​, ತಿರುಚಿದ ಚಿತ್ರಕತೆ ಮತ್ತು ಕಳಪೆ ಗ್ರಾಫಿಕ್ಸ್​ ಕಾರಣದಿಂದಾಗಿ ಈ ಸಿನಿಮಾ ಭಾರೀ ಟೀಕೆಗೆ ಗುರಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮಧ್ಯಾಹ್ನ 2.30ಕ್ಕೆ ಸಿದ್ದರಾಮಯ್ಯ ರಾಜೀನಾಮೆ; 3 ಗಂಟೆಗೆ ಪತ್ರಿಕಾಗೋಷ್ಠಿ; ಮುಂದಿನ CM ಡಿ.ಕೆ ಶಿವಕುಮಾರ್

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT