45 ಸಿನಿಮಾದ ಸ್ಟಿಲ್ 
ಸಿನಿಮಾ ಸುದ್ದಿ

'45' ಸಿನಿಮಾದಲ್ಲಿನ ನನ್ನ ಲುಕ್ ಬಗ್ಗೆ ರಾಜ್ ಬಿ ಶೆಟ್ಟಿ ಮೆಚ್ಚುಗೆ: ನಟ ಶಿವರಾಜ್‌ಕುಮಾರ್

45 ಸಿನಿಮಾದಲ್ಲಿನ ತಮ್ಮ ಲುಕ್ ಬಗ್ಗೆ ಮಾತನಾಡುವ ನಟ, 'ಸಿನಿಮಾದಲ್ಲಿನ ನನ್ನ ಲುಕ್ ಅನ್ನು ಕಂಡು ಬೆರಗಾದ ರಾಜ್ ಬಿ ಶೆಟ್ಟಿ ಅವರು ಕನಿಷ್ಠ 5 ಬಾರಿ ಬಂದು ನನ್ನನ್ನು ತಬ್ಬಿಕೊಂಡಿದ್ದಾರೆ. ಅವರಂತಹ ಯುವ ಚಿತ್ರ ನಿರ್ದೇಶಕರಿಂದ ದೊರೆಯುವ ಈ ಪ್ರಶಂಸೆಯು ಅಭಿನಂದನೆ ಎಂದು ಭಾವಿಸುತ್ತೇನೆ' ಎನ್ನುತ್ತಾರೆ ಶಿವಣ್ಣ.

ಶ್ರೀನಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಘೋಸ್ಟ್' ಬಿಡುಗಡೆಗಾಗಿ ನಟ ಶಿವರಾಜಕುಮಾರ್ ಕಾತರದಿಂದ ಕಾಯುತ್ತಿದ್ದಾರೆ. ಇದೇ ವೇಳೆ, ಅವರು ತಮ್ಮದೇ ಬ್ಯಾನರ್ ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಲಾದ ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಇದೀಗ ಶಿವರಾಜ್‌ಕುಮಾರ್ ಅವರು ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ '45'ರ ಸೆಟ್‌ಗೆ ಸೇರಿಕೊಂಡಿದ್ದಾರೆ. ಇದೇ ವೇಳೆ ರಾಜ್ ಬಿ ಶೆಟ್ಟಿ ಕೂಡ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ.

45 ಸಿನಿಮಾದಲ್ಲಿನ ತಮ್ಮ ಲುಕ್ ಬಗ್ಗೆ ಮಾತನಾಡುವ ನಟ, 'ಸಿನಿಮಾದಲ್ಲಿನ ನನ್ನ ಲುಕ್ ಅನ್ನು ಕಂಡು ಬೆರಗಾದ ರಾಜ್ ಬಿ ಶೆಟ್ಟಿ ಅವರು ಕನಿಷ್ಠ 5 ಬಾರಿ ಬಂದು ನನ್ನನ್ನು ತಬ್ಬಿಕೊಂಡಿದ್ದಾರೆ. ಅವರಂತಹ ಯುವ ಚಿತ್ರ ನಿರ್ದೇಶಕರಿಂದ ದೊರೆಯುವ ಈ ಪ್ರಶಂಸೆಯು ಅಭಿನಂದನೆ ಎಂದು ಭಾವಿಸುತ್ತೇನೆ' ಎನ್ನುತ್ತಾರೆ ಶಿವಣ್ಣ.

45 ಸಿನಿಮಾವನ್ನು ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಶಿವರಾಜಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಅವರಲ್ಲದೆ ನಟ ಉಪೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವರಾಜ್‌ಕುಮಾರ್

ಈಮಧ್ಯೆ, ಜುಲೈ 12ರ ತಮ್ಮ ಹುಟ್ಟುಹಬ್ಬದಂದು ಘೋಸ್ಟ್‌ನ ಬಿಗ್ ಡ್ಯಾಡಿ ಟೀಸರ್ ಬಿಡುಗಡೆಗಾಗಿ ಶಿವರಾಜ್‌ಕುಮಾರ್ ಕಾತುರದಿಂದ ಕಾಯುತ್ತಿದ್ದಾರೆ. 'ಹೊಸ ನಿರ್ದೇಶಕರ ಜೊತೆ ಕೆಲಸ ಮಾಡುವುದರಿಂದ ನನ್ನ ಪ್ರತಿಭೆಯ ವಿಭಿನ್ನ ಅಂಶಗಳನ್ನು ಪ್ರದರ್ಶಿಸಲು ನನಗೆ ಅನುವು ಮಾಡಿಕೊಡುತ್ತದೆ. ಸೆಟ್‌ನಲ್ಲಿ ಪ್ರತಿ ದಿನವೂ ವಿಶಿಷ್ಟ ಅನುಭವವಾಗುತ್ತದೆ' ಎನ್ನುವ ನಟ ಶಿವರಾಜಕುಮಾರ್, ನಟ ಧನುಷ್ ಜೊತೆಗಿನ ತಮಿಳು ಚಿತ್ರ 'ಕ್ಯಾಪ್ಟನ್ ಮಿಲ್ಲರ್' ಬಗ್ಗೆಯೂ ಉತ್ಸುಕರಾಗಿದ್ದಾರೆ.

ಜೈಲರ್‌ನಲ್ಲಿ ರಜನಿಕಾಂತ್

'ಜೈಲರ್‌ನಲ್ಲಿ ನೆಲ್ಸನ್ ನನ್ನ ಪಾತ್ರವನ್ನು ಚಿತ್ರಿಸಿದ ರೀತಿ ನನಗೆ ಇಷ್ಟ'

ರಜನಿಕಾಂತ್ ಜೊತೆಗೆ ಜೈಲರ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಶಿವಣ್ಣ, ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ. 'ಸೂಪರ್‌ಸ್ಟಾರ್ ಜೊತೆಗೆ ಕಾಣಿಸಿಕೊಂಡಿರುವುದು ಒಂದು ರೋಮಾಂಚನಕಾರಿ ಅನುಭವ' ಎನ್ನುವ ಅವರು, ಚಿತ್ರದಲ್ಲಿನ ತಮ್ಮ ಲುಕ್ ಬಗ್ಗೆ ಸಂತಸವ್ಯಕ್ತಪಡಿಸುತ್ತಾರೆ.

ಗುರುವಾರ ಜೈಲರ್‌ನ ಲಿರಿಕಲ್ ಹಾಡಿನ ಬಿಡುಗಡೆಯಾಗಿದೆ. ರಜನಿಕಾಂತ್ ಅವರ ಅದ್ಭುತ ಸ್ಟೈಲ್ ಅನ್ನು ಕಂಡು ಅವರಿಂದ ನಾನು ರೆಪ್ಪೆ ಅಲುಗಾಡಿಸಲು ಸಾಧ್ಯವಾಗಲಿಲ್ಲ. ನಾನು ನೆಲ್ಸನ್‌ಗೆ ಸಂದೇಶ ಕಳುಹಿಸಿದ್ದೇನೆ ಮತ್ತು ಹಾಡಿನ ಬಗ್ಗೆ ನನ್ನ ಆಲೋಚನೆಗಳನ್ನು ಹಂಚಿಕೊಂಡಿದ್ದೇನೆ' ಎಂದು ಅವರು ಹೇಳುತ್ತಾರೆ.

ಜೈಲರ್ ಆಗಸ್ಟ್ 10 ರಂದು ಬಿಡುಗಡೆಗೆ ಸಿದ್ಧವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT