ಶುಭಾ ಪೂಂಜಾ 
ಸಿನಿಮಾ ಸುದ್ದಿ

'ಪ್ರಭಾವಿ ಪಾತ್ರಗಳ ಮೂಲಕ 100 ಚಿತ್ರಗಳ ಮೈಲಿಗಲ್ಲು ತಲುಪುವುದು ನನ್ನ ಗುರಿ'

ಮೊಗ್ಗಿನ ಮನಸ್ಸು ಚಿತ್ರದ ಖ್ಯಾತಿಯ ನಟಿ ಶುಭಾ ಪೂಂಜಾ ಅಭಿನಯದ 50ನೇ ಚಿತ್ರ ಅಂಬುಜಾ ಜುಲೈ 21 ರಂದು ತೆರೆಗೆ ಬರುತ್ತಿದ್ದು, ಇದರೊಂದಿಗೆ ತಮ್ಮ ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಸಾಧಿಸಲಿದ್ದಾರೆ.

ಮೊಗ್ಗಿನ ಮನಸ್ಸು ಚಿತ್ರದ ಖ್ಯಾತಿಯ ನಟಿ ಶುಭಾ ಪೂಂಜಾ ಅಭಿನಯದ 50ನೇ ಚಿತ್ರ, ಅಂಬುಜಾ ಜುಲೈ 21 ರಂದು ತೆರೆಗೆ ಬರುತ್ತಿದ್ದು, ಇದರೊಂದಿಗೆ ತಮ್ಮ ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಸಾಧಿಸಲಿದ್ದಾರೆ.

ಇಂದಿನ ಸ್ಪರ್ಧಾತ್ಮಕ ಚಿತ್ರೋದ್ಯಮದಲ್ಲಿ ನಟಿಯರು ಎದುರಿಸುತ್ತಿರುವ ಸವಾಲುಗಳನ್ನು ಗಮನಿಸಿದರೆ ನಟಿ ಶುಭಾ ಅವರು 50 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ನನ್ನ ಸಿನಿ ಪ್ರಯಾಣದುದ್ದಕ್ಕೂ ನಿರಂತರ ಬೆಂಬಲ ಸಿಕ್ಕಿದೆ. ಹೆಚ್ಚು ತೊಂದರೆ ಆಗಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಸ್ವಯಂ-ಅನುಮಾನ ಮತ್ತು ಅಭದ್ರತೆ ಕಾಡಿದೆ. ಆದಾಗ್ಯೂ, ಚಿತ್ರೋದ್ಯಮದಲ್ಲಿ ಮುಂದುವರಿಯಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಶುಭಾ ಹೇಳಿದ್ದಾರೆ.

ಅಂಬುಜಾ ಚಿತ್ರದ ಸ್ಟಿಲ್

ಅರ್ಥಪೂರ್ಣ ಪಾತ್ರಗಳನ್ನು ಮುಂದುವರಿಸಲು ಮತ್ತು ದೂರದರ್ಶನ ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೂ ತಮ್ಮ ಅಭಿನಯ ವಿಸ್ತರಿಸುವ ಬಗ್ಗೆ ಶುಭಾ ಪೂಂಜಾ ಅವರು ಮಾತನಾಡಿದ್ದಾರೆ.

ಶ್ರೀನಿ ಹನುಮಂತರಾಜು ನಿರ್ದೇಶನದ ಅಂಬುಜಾ ಚಿತ್ರದ ಬಗ್ಗೆ ಮಾತನಾಡುತ್ತಾ, ಇದು ಸತ್ಯ ಘಟನೆಗಳಿಂದ ಸ್ಫೂರ್ತಿ ಪಡೆಯುವ ಮತ್ತು ವಿಶಿಷ್ಟವಾದ ಹಾಗೂ ಪರಿಚಯವಿಲ್ಲದ ಅಪರಾಧ ಕಥಾಹಂದರವನ್ನು ಪ್ರಸ್ತುತಪಡಿಸುತ್ತದೆ ಎಂದು ಶುಭಾ ತಿಳಿಸಿದ್ದಾರೆ.

"ನನ್ನದು ಬಹುಮುಖಿ ಪಾತ್ರ. ಹಾಸ್ಯ, ಥ್ರಿಲ್ಲರ್ ಮತ್ತು ಸಾಂದರ್ಭಿಕ ಸೈಕೋಸಿಸ್ ಅನ್ನು ಹೊಂದಿರುವ ಈ ಚಿತ್ರದಲ್ಲಿ ಕ್ರೈಂ ರಿಪೋರ್ಟರ್ ಪಾತ್ರ ನಿರ್ವಹಿಸಿದ್ದೇನೆ" ಎಂದು ಶುಭಾ ಹೇಳಿದ್ದಾರೆ.

ಶುಭಾ ಪೂಂಜಾ

"ನಾನು ಇಲ್ಲಿಯವರೆಗೆ ನಿರ್ವಹಿಸಿದ ಮಹಿಳಾ ಕೇಂದ್ರಿತ ಪಾತ್ರಗಳನ್ನು ಹೆಚ್ಚು ಗೌರವಿಸುತ್ತೇನೆ. ಮೊಗ್ಗಿನ ಮನಸ್ಸು ಚಿತ್ರದಿಂದ ನನ್ನ ಸಿನಿಪಯಣ ಪ್ರಾರಂಭವಾಯಿತು ಎಂದಿದ್ದಾರೆ. 

ವಿಶೇಷವಾಗಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ನಂತರ ಮಹಿಳಾ ವೀಕ್ಷಕರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. "ನಾನು ಅತ್ಯಲ್ಪ ಅಥವಾ ಮನಮೋಹಕ ಪಾತ್ರಗಳಿಂದ ದೂರವಿರಲು ನಿರ್ಧರಿಸಿದೆ ಮತ್ತು ಅರ್ಥಪೂರ್ಣ ಕೆಲಸಗಳತ್ತ ಗಮನ ಹರಿಸುವ, ಪರಿಣಾಮಕಾರಿ ಪಾತ್ರಗಳನ್ನು ಮಾಡುವ ಗುರಿಯನ್ನು ಹೊಂದಿದ್ದೇನೆ. ಪ್ರಭಾವಿ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ 100 ಚಿತ್ರಗಳ ಮೈಲಿಗಲ್ಲನ್ನು ತಲುಪುವುದು ನನ್ನ ಅಂತಿಮ ಗುರಿಯಾಗಿದೆ" ಎಂದು ಶುಭಾ ಪೂಂಜಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT