ಆರ ಸಿನಿಮಾದ ಪೋಸ್ಟರ್ 
ಸಿನಿಮಾ ಸುದ್ದಿ

ಅಶ್ವಿನ್ ವಿಜಯಮೂರ್ತಿ ನಿರ್ದೇಶನದ 'ಆರ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

ನಿರ್ದೇಶಕರಾಗಿ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ಅಶ್ವಿನ್ ವಿಜಯಮೂರ್ತಿ ಅವರ ಚಿತ್ರ 'ಆರ' ಜುಲೈ 28 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ನಿರ್ದೇಶಕರಾಗಿ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ಅಶ್ವಿನ್ ವಿಜಯಮೂರ್ತಿ ಅವರ ಚಿತ್ರ 'ಆರ' ಜುಲೈ 28 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಂಡವು ಪ್ರಚಾರದ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು, ಪ್ರೀತಿಯ ಆಮಂತ್ರಣ ಶೀರ್ಷಿಕೆಯ ಮೊದಲ ವಿಡಿಯೋ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿದ್ದು, ಸಿನಿಮಾ ಬಿಡುಗಡೆಯ ಸಮೀಪವೇ ಅವುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

'ಪ್ರಧಾನವಾಗಿ ಉಡುಪಿಯಲ್ಲಿ ಚಿತ್ರೀಕರಿಸಲಾದ ಆರ ಸಿನಿಮಾವ ಸಸ್ಪೆನ್ಸ್, ಪ್ರಣಯ, ಥ್ರಿಲ್ಲರ್ ಮತ್ತು ಕಮರ್ಷಿಯಲ್ ಅಂಶಗಳ ಮಿಶ್ರಣವಾಗಿದೆ. ಎಆರ್ ರೋಹಿತ್ ನಾಯಕನಾಗಿ ನಟಿಸಿದ್ದು, ನರಸಿಂಹ ಮತ್ತು ಆಂಜನೇಯನಂತಹ ದೈವಿಕ ಅಂಶಗಳನ್ನು ಒಳಗೊಂಡ ಆರು ವಿಭಿನ್ನ ಛಾಯೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಆರಾಧ್ಯ ನಾಯಕಿಯಾಗಿ ನಟಿಸಿದ್ದು, ಆಧ್ಯಾತ್ಮಿಕ ಮತ್ತು ನಾಟಕೀಯ ಪ್ರಯಾಣವನ್ನು ಪ್ರಸ್ತುತಪಡಿಸುವ ಆರದ ಅತೀಂದ್ರಿಯ ಪುಸ್ತಕವನ್ನು ಬಿಚ್ಚಿಡುತ್ತಾರೆ' ಎಂದು ನಿರ್ದೇಶಕ ವಿವರಿಸುತ್ತಾರೆ.

ಚಿತ್ರದ ಪಾತ್ರವರ್ಗದಲ್ಲಿ ಸತ್ಯರಾಜ್ ಮತ್ತು ಆನಂದ್ ನೀನಾಸಂ ಸೇರಿದಂತೆ ಪ್ರಮುಖ ಇತರರು ನಟಿಸಿದ್ದಾರೆ. ಆರವನ್ನು ಚಂದ್ರಶೇಖರ ಸಿ ಜಂಬಿಗಿ ಅವರು ಸುಜಾತಾ ಚಡಗ ಅವರ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ. ಎಆರ್ ರೋಹಿತ್ ಚಿತ್ರದ ಬರಹಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಶ್ರೀ ಹರಿ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಸಂಗೀತವನ್ನು ಗಿರೀಶ್ ಹೊಸೂರು ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT