ಸಿನಿಮಾ ಸುದ್ದಿ

‘19.20.21’ ಸಿನಿಮಾದಲ್ಲಿನ ನನ್ನ ಪಾತ್ರ ಧ್ವನಿ ಇಲ್ಲದವರ ಕಥೆ ಹೇಳುತ್ತದೆ: ಶೃಂಗ ವಾಸುದೇವನ್

Ramyashree GN

ರಿಂಗ್ ಮಾಸ್ಟರ್, ರಿಂಗ್ ರೋಡ್ ಮತ್ತು ಕ್ರಾನಿಕಲ್ಸ್ ಆಫ್ ಹರಿ ಸಿನಿಮಾದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ನಟ ಶೃಂಗ ವಾಸುದೇವನ್ ಅವರು ಮಂಸೋರೆ ಅವರ ಮುಂಬರುವ ಚಿತ್ರ 19.20.21 ರಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 'ಈ ಪಾತ್ರವನ್ನು ನಾನು ಮಾಡಬಹುದು ಎಂದು ನಂಬಿರುವುದೇ ನನಗೆ ಸಿಕ್ಕ ದೊಡ್ಡ ಗೌರವ' ಎಂದು ಶೃಂಗಾ ಹೇಳುತ್ತಾರೆ. 

'ನಾನು ಆದಿವಾಸಿ ಸಮುದಾಯದ ಮಂಜು ಎಂಬ ಕಾಲೇಜು ವಿದ್ಯಾರ್ಥಿಯ ಪಾತ್ರವನ್ನು ನಿರ್ವಹಿಸುತ್ತೇನೆ. ಆತ ತಮ್ಮ ಸಮುದಾಯದಿಂದ ಕಾಲೇಜಿಗೆ ಹೋದ ಮೊದಲ ವ್ಯಕ್ತಿ. ಘೋರ ಅಪರಾಧವೊಂದರಲ್ಲಿ ತಪ್ಪು ಆರೋಪಗಳನ್ನು ಹೊರಿಸಿದ್ದಕ್ಕಾಗಿ ಆತ ಸುದೀರ್ಘ ಕಾನೂನು ಹೋರಾಟದ ಮೂಲಕ ಹೋಗುವ ಅನಿವಾರ್ಯತೆ ಎದುರಾಗುತ್ತದೆ' ಎನ್ನುತ್ತಾರೆ.

19.20.21 ಒಂದು ನೈಜ ಘಟನೆಯನ್ನು ಆಧರಿಸಿದೆ, ಮತ್ತು ಶೃಂಗ ಅವರ ಪ್ರಕಾರ, ಮಂಸೋರೆ ಅವರು ಕಥೆ ಮತ್ತು ಸನ್ನಿವೇಶದ ಬಗ್ಗೆ ಚೆನ್ನಾಗಿ ಸಂಶೋಧನೆ ಮತ್ತು ಸಮಗ್ರ ತಿಳುವಳಿಕೆಯನ್ನು ಹೊಂದಿದ್ದಾರೆ. ಅಲ್ಲದೆ, ACT 1978 ಮತ್ತು 19.20.21 ಎರಡರಲ್ಲೂ ಮಾಡಲಾದ ಕಾನೂನು ಅಂಶಗಳು ಬಹಳ ತಿಳಿವಳಿಕೆ ಮತ್ತು ನಿಖರವಾಗಿದೆ. ಸ್ಕ್ರಿಪ್ಟ್‌ಗಾಗಿ ತುಂಬಾ ಶ್ರಮ ಪಡುವ ನಿರ್ದೇಶಕರೊಂದಿಗೆ ಕೆಲಸ ಮಾಡುವುದು ಒಂದು ಗೌರವ ಎಂದು ಅವರು ಹೇಳುತ್ತಾರೆ.

19.20.21 ಸಿನಿಮಾ ಮೂಲಕ ನೀಡಲಾದ ಉದ್ದೇಶಿತ ಸಂದೇಶವೇನು? 'ಅಸಮಾನತೆಯನ್ನು ಲೆಕ್ಕಿಸದೆ, ಸಂವಿಧಾನವನ್ನು ಅನ್ಯಾಯದ ವಿರುದ್ಧ ಹೋರಾಡಲು ಬಳಸಬಹುದು. ಯಾವುದೇ ಅನಗತ್ಯ ಬಿಲ್ಡಪ್ ಇಲ್ಲದೆ ಅತ್ಯಂತ ನೈಜವಾಗಿ, ಈ ಚಿತ್ರವು ಧ್ವನಿ ಇಲ್ಲದ ಜನರ ಕಥೆಯನ್ನು ಹೇಳುತ್ತದೆ' ಎಂದು ಶೃಂಗ ಹೇಳುತ್ತಾರೆ.

ದೇವರಾಜ್ ಆರ್ ನಿರ್ಮಾಣದ ಈ ಚಿತ್ರವು ಮಾರ್ಚ್ 3 ರಂದು ಬಿಡುಗಡೆಯಾಗಲಿದೆ ಮತ್ತು ಬಾಲಾಜಿ ಮನೋಹರ್, ಎಂಡಿ ಪಲ್ಲವಿ, ರಾಜೇಶ್ ನಟರಂಗ, ಅವಿನಾಶ್, ಮಹದೇವ್ ಹಡಪದ್, ವಿಶ್ವ ಕರ್ಣ ಮತ್ತು ವೆಂಕಟೇಶ್ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

SCROLL FOR NEXT