ಸಿನಿಮಾ ಸುದ್ದಿ

8 ವರ್ಷದವಳಿದ್ದಾಗ ತಂದೆಯಿಂದಲೇ ಲೈಂಗಿಕ ದೌರ್ಜನ್ಯ, ಎಷ್ಟು ಹೇಳಿದರೂ ನನ್ನ ತಾಯಿ ನಂಬುತ್ತಿರಲಿಲ್ಲ: ಖುಷ್ಬೂ ಸುಂದರ್

Shilpa D

ನಟಿ ಖುಷ್ಬೂ ಸುಂದರ್ ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಆಗಿ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಅವರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆ ಅನೇಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

8ನೇ ವಯಸ್ಸಿಗೆ ತಂದೆ ಮಾಡಿದ ಕೃತ್ಯದ ಬಗ್ಗೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಾಲ್ಯದಲ್ಲಿ ಏನಾದರೂ ದೌರ್ಜನ್ಯ ನಡೆದರೆ ಮಕ್ಕಳು ಅದನ್ನು ಜೀವನಪರ್ಯಂತ ನೆನಪಿಟ್ಟುಕೊಳ್ಳುತ್ತಾರೆ. ಅದು ಹುಡುಗ ಆಗಿರಬಹುದು, ಹುಡುಗಿ ಆಗಿರಬಹುದು.

ನನ್ನ ತಾಯಿ ಮದುವೆ ಜೀವನ ತುಂಬ ಕೆಟ್ಟದಾಗಿತ್ತು. ಬಹುಶಃ ಪುರುಷ ತನ್ನ ಪತ್ನಿ, ಮಗಳಿಗೆ ಹೊಡೆಯೋದು ಜನ್ಮಸಿದ್ಧ ಹಕ್ಕು ಎಂದುಕೊಂಡಿರಬಹುದು. ನನಗೆ 8ನೇ ವಯಸ್ಸಿದ್ದಾಗ ದೌರ್ಜನ್ಯ ಶುರುವಾಗಿದ್ದು, ನಾನು 15ನೇ ವಯಸ್ಸಿಗೆ ಅದರ ವಿರುದ್ಧ ಮಾತನಾಡಲು ಆರಂಭಿಸಿದೆ ಎಂದು ಖುಷ್ಬೂ ಸುಂದರ್ ಹೇಳಿದ್ದಾರೆ.

ನಾನು ನನ್ನ ಮೇಲೆ, ತಾಯಿ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುವ ಸಮಯ ಬಂದಿತ್ತು, ಆದರೆ ಇದರಿಂದ ಇನ್ನೊಂದಿಷ್ಟು ಸಮಸ್ಯೆ ಆಗತ್ತೆ ಅಂತ ಕುಟುಂಬಸ್ಥರು ನನ್ನ ಬಾಯಿ ಮುಚ್ಚಿಸಿದರು ಎಂದಿರುವ ಖುಷ್ಬೂ ಸುಂದರ್ ಅವರು, "ನನ್ನ ಪತಿಯೇ ದೇವರು ಎಂದು ನಂಬಿಕೊಂಡಿದ್ದ ನನ್ನ ತಾಯಿ, ನನ್ನ ಮೇಲಿನ ಲೈಂಗಿಕ ದೌರ್ಜನ್ಯವನ್ನು ನಂಬೋದಿಲ್ಲ ಎನ್ನುವ ಭಯ ಎದ್ದಿತ್ತು.

ಆದರೆ 15ನೇ ವಯಸ್ಸಿಗೆ ಸಾಕು ಇದು, ಮಾತನಾಡೋಣ ಅಂತ ನಾನು ಫಿಕ್ಸ್ ಆಗಿದ್ದೆ. ನನಗೆ 16 ತುಂಬಿರಲಿಲ್ಲ, ಆಗಲೇ ನನ್ನ ತಂದೆ ನಮ್ಮ ಬಳಿ ಇರೋದನ್ನೆಲ್ಲ ತೆಗೆದುಕೊಂಡು ಮನೆ ಬಿಟ್ಟು ಹೋದರು. ನಮ್ಮ ಮುಂದಿನ ಊಟ ಎಲ್ಲಿಂದ ಬರುತ್ತದೆ ಅಂತ ಕೂಡ ಗೊತ್ತಿರಲಿಲ್ಲ,  ನಂತರದ ದಿನಗಳಲ್ಲಿ ಹೆಚ್ಚು ಧೈರ್ಯ ಬಂತು. ತಪ್ಪಿನ ವಿರುದ್ಧ ಅವರು ಸಿಡಿದೆದ್ದರು. ಖುಷ್ಬೂ ಅವರು ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ಸು ಪಡೆದರು.

SCROLL FOR NEXT