ನಗ್ಮಾ 
ಸಿನಿಮಾ ಸುದ್ದಿ

ಒಂದೇ ಒಂದು ಲಿಂಕ್ ಕ್ಲಿಕ್ ಮಾಡಿ ಲಕ್ಷ ಕಳೆದುಕೊಂಡ 'ಕುರುಬನ ರಾಣಿ': ಆನ್ ಲೈನ್ ವಂಚನೆಗೆ ಸಿಲುಕಿದ ನಟಿ ನಗ್ಮಾ!

ಬಹುಭಾಷಾ ನಟಿ ನಗ್ಮಾ ತಮ್ಮ ಮೊಬೈಲ್‌ಗೆ ಬಂದ ಲಿಂಕ್‌ವೊಂದನ್ನು ಕ್ಲಿಕ್‌ ಮಾಡಿ ಒಂದು ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ನಟಿ ಹಾಗೂ ರಾಜಕಾರಣಿ, ಕನ್ನಡದಲ್ಲಿ ಕುರುಬನ ರಾಣಿ ಚಿತ್ರದಲ್ಲಿ ನಟಿಸಿದ್ದ ನಟಿ ನಗ್ಮಾ ಮೊರಾರ್ಜಿಗೆ ಸೈಬರ್ ವಂಚನೆ ಆಗಿದೆ.  ಬಹುಭಾಷಾ ನಟಿ ನಗ್ಮಾ ತಮ್ಮ ಮೊಬೈಲ್‌ಗೆ ಬಂದ ಲಿಂಕ್‌ವೊಂದನ್ನು ಕ್ಲಿಕ್‌ ಮಾಡಿ ಒಂದು ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಕೆವೈಸಿ ವಂಚನೆಯಿಂದಾಗಿ ನಟಿ ನಗ್ಮಾ ಮೊರಾರ್ಜಿ ಅವರು 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕೇವಲ ಒಂದು ಲಕ್ಷ ಕಳೆದುಕೊಂಡಿದ್ದಕ್ಕೆ ಖುಷಿ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಟಿ ನಗ್ಮಾ ಫೋನ್ ಗೆ ಥೇಟ್ ಬ್ಯಾಂಕ್ ರೀತಿಯ ಮೆಸೇಜ್ (ಸಂದೇಶ) ಬಂದಿತ್ತು. ತಮ್ಮ ಮೊಬೈಲ್‌ಗೆ ಬಂದ ಸ್ಪಾಮ್‌ ಲಿಂಕ್‌ನ ಮೇಲೆ ಕ್ಲಿಕ್‌ ಮಾಡಿದ್ದರಿಂದ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ವರದಿಯ ಪ್ರಕಾರ, ಫೆಬ್ರವರಿ 28 ರಂದು ನಟಿ ನಗ್ಮಾ 99,998 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್‌ಗಳು ಕಳಿಸುವಂಥದ್ದೇ ನಂಬರ್‌ನಿಂದ ನಗ್ಮಾ ಅವರು ಸಂದೇಶವನ್ನು ಸ್ವೀಕರಿಸಿದ್ದರು.

ಇತ್ತೀಚೆಗೆ ನಗ್ಮಾ ಮೊಬೈಲ್‌ಗೆ ಒಂದು ಲಿಂಕ್‌ ಮೆಸೇಜ್‌ ಬಂದಿದೆ. ನಗ್ಮಾ, ಕೂಡಲೇ ಆ ಲಿಂಕ್‌ ಕ್ಲಿಕ್‌ ಮಾಡಿದ್ದಾರೆ. ನಂತರ ಆ ಕಡೆಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ನಗ್ಮಾಗೆ ಕೆವೈಸಿ ಕಂಪ್ಲೀಟ್‌ ಮಾಡುವಂತೆ ಹೇಳಿದ್ದಾನೆ. ವಂಚಕ ಬೆನಿಫಿಷರಿ ಅಕೌಂಟ್‌ ಸೃಷ್ಟಿ ಮಾಡಿ ತನ್ನ ಖಾತೆಗೆ 1 ಲಕ್ಷ ರೂಪಾಯಿ ಹಣ ಟ್ರಾನ್ಸ್‌ಫರ್‌ ಮಾಡಿಕೊಂಡಿದ್ದಾನೆ. ಹಣ ಕಳೆದುಕೊಂಡಿರುವುದು ತಿಳಿಯುತ್ತಿದ್ದಂತೆ ನಗ್ಮಾ, ಕೂಡಲೇ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ. ಹಣ ಕಳೆದುಕೊಂಡಿರುವುದಕ್ಕೆ ನಗ್ಮಾ ಬೇಸರ ವ್ಯಕ್ತಪಡಿಸಿದರೂ, ಮತ್ತೊಂದೆಡೆ ಸದ್ಯಕ್ಕೆ 1 ಲಕ್ಷ ಮಾತ್ರ ಕಳೆದುಕೊಂಡಿರುವ ನೆಮ್ಮದಿಯಲ್ಲಿದ್ದಾರಂತೆ. ಅದಲ್ಲದೆ, ಇದು ಯಾವುದೇ ಪ್ರೈವೇಟ್‌ ನಂಬರ್‌ ಕೂಡ ಆಗಿರಲಿಲ್ಲ ಎಂದು ನಗ್ಮಾ ಹೇಳಿದ್ದಾರೆ.

ಬ್ಯಾಂಕ್ ಖಾತೆ ವಂಚನೆಯ ಮೂಲಕ ಕೆಲವೇ ದಿನಗಳಲ್ಲಿ ಹಲವಾರು ಲಕ್ಷ ರೂಪಾಯಿಗಳನ್ನು ವಂಚಿಸಿದ ಇತರ 80 ಸಂತ್ರಸ್ತರಲ್ಲಿ ನಗ್ಮಾ ಕೂಡ ಸೇರಿದ್ದಾರೆ. ಈ ಎಲ್ಲಾ ವ್ಯಕ್ತಿಗಳು ಒಂದೇ ಖಾಸಗಿ ಬ್ಯಾಂಕ್‌ನಲ್ಲಿ ಅಕೌಂಟ್‌ ಹೊಂದಿರುವವರಾಗಿದ್ದಾರೆ. ಅಲ್ಲದೆ, ನಟಿ ನಗ್ಮಾ, ಸೈಬರ್‌ ಮೋಸದ ಮಾಹಿತಿಯನ್ನೂ ಕೂಡ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT