ಪೃಥ್ವಿ ಅಂಬರ್ 
ಸಿನಿಮಾ ಸುದ್ದಿ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ತ್ರಿಕೋನ ಪ್ರೇಮಕಥೆಯಲ್ಲಿ ಪೃಥ್ವಿ ಅಂಬರ್!

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ತ್ರಿಕೋನ ಪ್ರೇಮಕಥೆಯಲ್ಲಿ ನಿರೂಪ್ ಭಂಡಾರಿ ಮತ್ತು ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಚಿತ್ರತಂಡಕ್ಕೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡ ಸೇರಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ತ್ರಿಕೋನ ಪ್ರೇಮಕಥೆಯಲ್ಲಿ ನಿರೂಪ್ ಭಂಡಾರಿ ಮತ್ತು ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಚಿತ್ರತಂಡಕ್ಕೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡ ಸೇರಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಅವರ ಮುಂದಿನ ಚಿತ್ರವು ರೊಮ್ಯಾಂಟಿಕ್ ಕಥೆಯಾಗಿದ್ದು,  ಅವರ ಹಿಂದಿನ ಹಿಟ್ ಚಿತ್ರವಾದ ಅಮೇರಿಕಾ ಅಮೇರಿಕಾಗೆ ಸಲ್ಲಿಸುತ್ತಿರುವ ಗೌರವವಾಗಿದೆ ಎಂದು ಹೇಳಲಾಗುತ್ತದೆ.

ನಿರೂಪ್ ಭಂಡಾರಿ ಮತ್ತು ಶಾನ್ವಿ ಶ್ರೀವಾಸ್ತವ ನಟಿಸಿರುವ ಈ ಚಿತ್ರ ಫೆಬ್ರವರಿಯಲ್ಲಿ ಆರಂಭವಾಗಿದ್ದು, ಮೊದಲ ಶೆಡ್ಯೂಲ್ ಮುಗಿದಿದೆ. ತ್ರಿಕೋನ ಪ್ರೇಮಕಥೆ ಎಂದು ಬಿಂಬಿಸಲಾಗಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಮೂರನೇ  ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು  ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

ಶಾನ್ವಿ ಶ್ರೀವಾಸ್ತವ್ ಅವರು ನಾಯಕಿಯಾಗಿರುವ ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಹಿಂದೆಂದೂ ನೋಡಿರದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅಂತೆಯೇ, ಪೃಥ್ವಿ ಕೂಡ ಪಾತ್ರಕ್ಕಾಗಿ ಮೇಕ್ ಓವರ್ ಆಗಲಿದ್ದಾರೆ. ಬದಲಾವಣೆಗಾಗಿ ಸಮಯ ತೆಗೆದುಕೊಂಡಿರುವ ನಟ, ಮುಂದಿನ ಶೆಡ್ಯೂಲ್ ನಲ್ಲಿ ಸೆಟ್‌ಗೆ ಸೇರುವ ನಿರೀಕ್ಷೆಯಿದೆ.

ನಿರ್ದೇಶಕರು ಅಮೆರಿಕಾದಲ್ಲಿ ಶೇ. 60ರಷ್ಟು ಚಿತ್ರೀಕರಣ ನಡೆಸಲು ಯೋಜಿಸಿದ್ದಾರೆ . ಈ ಪ್ರಾಜೆಕ್ಟ್ ಗಾಗಿ  ಸಿಯಾಟಲ್‌ನ ಸ್ಥಳ ಆಯ್ಕೆ ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರತಂಡ ಅಮೆರಿಕಕ್ಕೆ ತೆರಳಲಿದೆ. ಮನೋ ಮೂರ್ತಿ ಸಂಗೀತವಿರುವ ಈ ಚಿತ್ರಕ್ಕೆ ಎಸ್ ಕೆ ರಾವ್ ಅವರ ಛಾಯಾಗ್ರಹಣವಿದೆ.

ದೂರದರ್ಶನದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿರುವ ಪೃಥ್ವಿ ಅಂಬರ್, ಸದ್ಯ ಮತ್ಸ್ಯಗಂಧದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT