ಅಲ್ಲು ಅರ್ಜುನ್ 
ಸಿನಿಮಾ ಸುದ್ದಿ

ನಟಿಯನ್ನು ಬ್ಲಾಕ್ ಮಾಡಿದ ಅಲ್ಲು ಅರ್ಜುನ್: ಸ್ಕ್ರೀನ್​ಶಾಟ್ ಹಂಚಿಕೊಂಡ 'ವರುಡು' ನಾಯಕಿ ಭಾನುಶ್ರೀ ಮೆಹ್ರಾ!

2010ರಲ್ಲಿ ತೆರೆಗೆ ಬಂದ `ವರುಡು’ ಚಿತ್ರದಲ್ಲಿ ನಟಿ ಭಾನುಶ್ರೀ ಮೆಹ್ರಾ ಅವರು ಅಲ್ಲು ಅರ್ಜುನ್ ಜತೆ ನಟಿಸಿದ್ದರು. ಇದಾದ ನಂತರ ಭಾನುಶ್ರೀ ಕೆಲವು ಚಲನಚಿತ್ರಗಳಲ್ಲಿ ನಟಿಸಿದರು.

ಹೈದರಾಬಾದ್: 2010ರಲ್ಲಿ ತೆರೆಗೆ ಬಂದ `ವರುಡು’ ಚಿತ್ರದಲ್ಲಿ ನಟಿ ಭಾನುಶ್ರೀ ಮೆಹ್ರಾ ಅವರು ಅಲ್ಲು ಅರ್ಜುನ್ ಜತೆ ನಟಿಸಿದ್ದರು. ಇದಾದ ನಂತರ ಭಾನುಶ್ರೀ ಕೆಲವು ಚಲನಚಿತ್ರಗಳಲ್ಲಿ ನಟಿಸಿದರು.

ಆದರೆ ಅಷ್ಟಾಗಿ ಸಿನಿಮಾದಲ್ಲಿ ಯಶಸ್ಸು ಪಡೆದುಕೊಂಡಿಲ್ಲ. ಭಾನುಶ್ರೀ ಕನ್ನಡದಲ್ಲಿ ಕೋಮಲಕುಮಾರ್ ಅಭಿನಯದ `ಡೀಲ್ ರಾಜ’ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ನಟಿ, ಅಲ್ಲು ಅರ್ಜುನ್‌ ವಿಚಾರವಾಗಿ ಸಖತ್‌ ಸುದ್ದಿಯಲ್ಲಿದ್ದಾರೆ. ಅಲ್ಲು ಅರ್ಜುನ್‌ ತಮ್ಮನ್ನು ಬ್ಲಾಕ್‌ ಮಾಡಿದ್ದಾರೆ ಎಂದು ನಟಿ ಬಹಿರಂಗಪಡಿಸಿದ್ದಾರೆ.

ಭಾನುಶ್ರೀ ನಂತರ ತೆಲುಗಿನಲ್ಲೇ ‘ಡಿಂಗ್ ಡಾಂಗ್ ಬೆಲ್’, ‘ಅಲಾ ಎಲಾ’ ರಾಮ್ ಚರಣ್ ಸಿನಿಮಾ ‘ಗೋವಿಂದುಡು ಅಂದರಿವಾಡೆಲೆ’, ‘ರನ್’ ಮತ್ತು ‘ಮಿಸ್ ಇಂಡಿಯಾ’ದಲ್ಲಿ ಕೀರ್ತಿ ಸುರೇಶ್ ಜತೆ ಚಿಕ್ಕ ಪಾತ್ರದಲ್ಲಿ ನಟಿಸಿದರು.

ಮಾರ್ಚ್ 18ರಂದು ಭಾನುಶ್ರೀ ಟ್ವಿಟ್ಟರ್‌ನಲ್ಲಿ ಅಲ್ಲು ಅರ್ಜುನ್ ತನ್ನನ್ನು ಬ್ಲಾಕ್ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ನಟಿ ಟ್ವೀಟ್‌ ಸ್ಕ್ರೀನ್‌ಶಾಟ್‌ ಹಂಚಿಕೊಂಡು ನೀವು ಯಾವಾಗಲಾದರೂ ಹಳಿಯಲ್ಲಿ ಸಿಕ್ಕಿಕೊಂಡಿದ್ದೀರಿ ಎಂದು ಭಾಸವಾಗಿದೆಯೆ? ಆದರೆ ಆ ಅನುಭವ ನನಗಾಗಿದೆ. ನಾನು ಅಲ್ಲು ಅರ್ಜುನ್ ಜತೆ ವರುಡು ಚಿತ್ರದಲ್ಲಿ ನಟಿಸಿದ್ದೇನೆ.

ಆದರೂ ಇನ್ನೂ ಯಾವುದೇ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ನೆನಪಿಡಿ. ಕೆಲಸ ಸಿಗುತ್ತಿಲ್ಲ ಎಂದು ನೆನಪು ಮಾಡಿಕೊಂಡಿದ್ದೇನೆ. ಆದರೆ, ನನ್ನ ಕಷ್ಟಗಳಿಂದಲೇ ಖುಷಿಯನ್ನು ಕಂಡುಕೊಳ್ಳಲು ಕಲಿತಿದ್ದೇನೆ. ಅದರಲ್ಲೂ ಅಲ್ಲು ಅರ್ಜುನ್ ಟ್ವಿಟರ್‌ನಲ್ಲಿ ನನ್ನನ್ನು ಬ್ಲಾಕ್ ಮಾಡಿದ್ದ ಮೇಲೆ ಕಲಿತುಕೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಭಾನುಶ್ರೀ ಈ ಟ್ವೀಟ್‌ ನಂತರದಲ್ಲಿ ಮತ್ತೊಂದು ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ, ತನ್ನ ವೃತ್ತಿಜೀವನದ ಹಿನ್ನಡೆಗೆ ಅಲ್ಲು ಅರ್ಜುನ್‌ ಕಾರಣರಲ್ಲ ಎಂತಲೂ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕೊನೆಗೂ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ; ಜುಲೈ 1 ರಿಂದ ಜಾರಿ

IPL 2026: 82 ರನ್‌ಗಳಿಂದ SRH ಮಣಿಸಿದ Gujarat Titans; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!

ಬಂಗಾಳದಲ್ಲಿ ಶುದ್ಧೀಕರಣ ಶುರು ಮಾಡಿದ ಸಿಎಂ ಸುವೇಂದು: TMC ನೇಮಕ ಮಾಡಿದ್ದ ಗ್ರೂಪ್ ಎ ಶ್ರೇಣಿಯ 232 ಅಧಿಕಾರಿಗಳ ವಜಾ!

ಒಂದೇ ಒಂದು ದಾಳಿ ನಡೆದರೂ ಯುರೇನಿಯಂ ದಾಸ್ತಾನು ಶಸ್ತ್ರಾಸ್ತ್ರ ದರ್ಜೆಗೆ ಸಂವರ್ಧನೆ- ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ!

Gruha Lakshmi | ದಕ್ಷಿಣ ಕನ್ನಡದಲ್ಲಿ ಮೃತ ಫಲಾನುಭವಿಗಳ ಖಾತೆಗೆ 22 ಕೋಟಿ ರೂ ಗೃಹಲಕ್ಷ್ಮಿ ಹಣ ಜಮೆ!

SCROLL FOR NEXT