ಊರ್ವಶಿ ರೌಟೇಲಾ-ರಿಷಬ್ ಪಂತ್ 
ಸಿನಿಮಾ ಸುದ್ದಿ

ರಿಷಬ್ ಪಂತ್‌ ಬಗ್ಗೆ ಪ್ರಶ್ನಿಸಿದ್ದಕ್ಕೆ ನಟಿ ಊರ್ವಶಿ ರೌಟೇಲಾ ಆಕ್ರೋಶ: ವಿಡಿಯೋ

ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸುದ್ದಿ ಸದಾ ಸುದ್ದಿಯಲ್ಲಿರುತ್ತದೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸುದ್ದಿ ಸದಾ ಸುದ್ದಿಯಲ್ಲಿರುತ್ತದೆ.

ಇನ್ನು ರಿಷಭ ಹೆಸರಿನ ಜೊತೆಗೆ ಊರ್ವಶಿ ರೌಟೇಲಾ ಹೆಸರು ತಳುಕು ಹಾಕಲಾಗುತ್ತಿತ್ತು. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ನಡುವೆ ವಾಗ್ವಾದವೂ ನಡೆದಿತ್ತು. ಗಮನಾರ್ಹವೆಂದರೆ ರಿಷಬ್ ಪಂತ್ ಅಪಘಾತದ ನಂತರ ಇಬ್ಬರ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಆದಾಗ್ಯೂ, ಈಗ ಮತ್ತೊಮ್ಮೆ ಊರ್ವಶಿ ರೌಟೇಲಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆ ವೀಡಿಯೋದಲ್ಲಿ ಊರ್ವಶಿ ಪಂತ್ ಹೆಸರಿನಿಂದ ತಪ್ಪಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

ವಾಸ್ತವವಾಗಿ, ಊರ್ವಶಿ ರೌಟೇಲಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಪತ್ರಕರ್ತರೊಬ್ಬರು ರಿಷಬ್ ಪಂತ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ರಿಷಭ್ ಹೆಸರು ಕೇಳುತ್ತಿದ್ದಂತೆ ಊರ್ವಶಿಯ ಮುಖ ಕಳೆಗುಂದುತ್ತದೆ. ಪಂತ್ ಗೆ ಸಂಬಂಧಿಸಿದ ಪ್ರಶ್ನೆಗೆ ಪತ್ರಕರ್ತ ಊರ್ವಶಿಗೆ ಉತ್ತರ ಕೊಡಿ ಎಂದು ಕೇಳಿದಾಗ ಸಿಟ್ಟಿಗೆದ್ದ ಆಕೆ ಟಿಆರ್ ಪಿ ಗಾಗಿ ಇದನ್ನೆಲ್ಲಾ ಮಾಡುತ್ತಿದ್ದೀರಿ ಎಂದು ಹರಿಹಾಯುತ್ತಾರೆ. ಪಂತ್ ಹೆಸರನ್ನು ತಪ್ಪಿಸಲು ರೌಟೇಲಾ ಬಯಸಿದ್ದಾರೆಂದು ವೀಡಿಯೊದಲ್ಲಿ ತೋರುತ್ತಿದೆ.

2022ರ ಡಿಸೆಂಬರ್ ನಲ್ಲಿ ರಿಷಬ್ ಪಂತ್ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಇದರಿಂದಾಗಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅವರ ಬೆನ್ನು, ಕೈ, ಮೊಣಕಾಲು, ಕಾಲುಗಳಲ್ಲಿ ಸಾಕಷ್ಟು ಗಾಯವಾಗಿತ್ತು. ಅಂದಿನಿಂದ ಅವರು ಕ್ರಿಕೆಟ್ ನಿಂದ ದೂರ ಸರಿದಿದ್ದಾರೆ. ಪಂತ್ ತನ್ನ ಗಾಯಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರೂ, ಅವರ ಆಟವನ್ನು ನೋಡಲು ಇನ್ನು ಕಾಯಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?