ಕಲರ್ಸ್ ಆಪ್ ಲವ್ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಬ್ಯಾಂಕ್ ಉದ್ಯೋಗ ತೊರೆದು ಚಿತ್ರರಂಗದತ್ತ ಒಲವು; ಗಮನ ಸೆಳೆಯುತ್ತಿದೆ ಹರಿ ಶೌರ್ಯ ನಿರ್ದೇಶನದ 'ಲಗೋರಿ' 

ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಾದ ಹರಿ ಶೌರ್ಯ ಅವರು ತಮ್ಮ ಕಿರುಚಿತ್ರಗಳು ಮತ್ತು ಟೆಲಿಫಿಲ್ಮ್‌ಗಳ ಮೂಲಕ ಚಿತ್ರರಂಗದಲ್ಲಿ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ಅವರ ಚೊಚ್ಚಲ ಕಿರುಚಿತ್ರ 'ಕ್ರಶ್' ಮತ್ತು ಟೆಲಿಫಿಲ್ಮ್ 'ಲಗೋರಿ' ಕ್ರಮವಾಗಿ 2.5 ಮಿಲಿಯನ್ ಮತ್ತು 8.5 ಮಿಲಿಯನ್ ವೀಕ್ಷಣೆಗಳನ್ನು ಕಂಡಿವೆ.

ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಾದ ಹರಿ ಶೌರ್ಯ ಅವರು ತಮ್ಮ ಕಿರುಚಿತ್ರಗಳು ಮತ್ತು ಟೆಲಿಫಿಲ್ಮ್‌ಗಳ ಮೂಲಕ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ದರಾಗುತ್ತಿದ್ದಾರೆ. ಅವರ ಚೊಚ್ಚಲ ಕಿರುಚಿತ್ರ 'ಕ್ರಶ್' ಮತ್ತು ಟೆಲಿಫಿಲ್ಮ್ 'ಲಗೋರಿ' ಕ್ರಮವಾಗಿ 2.5 ಮಿಲಿಯನ್ ಮತ್ತು 8.5 ಮಿಲಿಯನ್ ವೀಕ್ಷಣೆಗಳನ್ನು ಕಂಡಿವೆ.

ಅವರ ಇತ್ತೀಚಿನ 'ಕಲರ್ಸ್ ಆಫ್ ಲವ್' ಎಂಬ 50 ನಿಮಿಷಗಳ ಟೆಲಿಫಿಲ್ಮ್ ಕಮರ್ಷಿಯಲ್ ಚಿತ್ರವಾಗಿದೆ. ಈ ಸಿನಿಮಾ ಆಳವಾದ ಭಾವನೆಗಳು ಮತ್ತು ಜೀವನ ಮೌಲ್ಯಗಳಿಂದ ತುಂಬಿದ ಕಥೆಯನ್ನು ಹೊಂದಿದೆ. 'ಇದು ನಿಜ ಜೀವನದ ಕಥೆಯಾಗಿದ್ದು ಬರಹಗಾರ ಮತ್ತು ಆತನ ಜೀವನ ಮತ್ತು ಪ್ರೀತಿಯಲ್ಲಿನ ಹೋರಾಟಗಳ ಸುತ್ತ ಸುತ್ತುತ್ತದೆ' ಎಂದು ಹರಿ ಶೌರ್ಯ ವಿವರಿಸುತ್ತಾರೆ.

ಗ್ಯಾಂಗ್‌ಬ್ಯಾಂಗ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚೇತನ್‌ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಮನೀಶ್ ಕೋಟ್ಯಾನ್, ಅನುಷಾ ರಾಜ್, ಪ್ರಣುಪಾ ಗೌಡ, ರವಿ, ರಂಜಿತ್ ಮತ್ತು ಅಭಿಷೇಕ್ ನಟಿಸಿದ್ದಾರೆ. ಅದ್ಯಾ ಎಂಟರ್‌ಟೈನ್‌ಮೆಂಟ್ ಚಾನೆಲ್‌ನಲ್ಲಿ ಈ ತಿಂಗಳ ಕೊನೆಯಲ್ಲಿ ಟೆಲಿಫಿಲ್ಮ್ ಬಿಡುಗಡೆಯಾಗಲಿದೆ.

ಹರಿಶೌರ್ಯ ಅವರು ಚಲನಚಿತ್ರ ನಿರ್ಮಾಣದ ಉತ್ಸಾಹವನ್ನು ಮುಂದುವರಿಸಲು ತಮ್ಮ ಬ್ಯಾಂಕ್ ಕೆಲಸವನ್ನು ತೊರೆದಿದ್ದಾರೆ. ತಾವು ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನ ಮಾಡುವುದು ಅವರ ಕನಸು. 

'ರೊಮ್ಯಾಂಟಿಕ್ ಎಂಟರ್‌ಟೈನರ್‌ ಸಿನಿಮಾಗೆ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಸ್ಟೋರಿಬೋರ್ಡ್ ಪೂರ್ಣಗೊಂಡಿದೆ ಮತ್ತು ನಿರ್ಮಾಪಕರನ್ನು ಅಂತಿಮಗೊಳಿಸಲಾಗಿದೆ. ಸದ್ಯ ಇತರೆ ಕಲಾವಿದರ ಹುಡುಕಾಟದಲ್ಲಿದ್ದೇನೆ’ ಎನ್ನುತ್ತಾರೆ ಹರಿ ಶೌರ್ಯ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT