ಮೇಘಾ ಶೆಟ್ಟಿ 
ಸಿನಿಮಾ ಸುದ್ದಿ

ಸಿನಿಮಾಗಳತ್ತ ಗಮನಹರಿಸಲು ಕಿರುತೆರೆಗೆ ಮೇಘಾ ಶೆಟ್ಟಿ ವಿದಾಯ: 'ಜೊತೆಜೊತೆ'ಯಲ್ಲಿ ಸೀರಿಯಲ್ ಗೆ ಗುಡ್ ಬೈ!

ಕಿರುತೆರೆಯ ಜನಪ್ರಿಯ ಟಿವಿ ಧಾರಾವಾಹಿಯಾದ ಜೊತೆ ಜೊತೆಯಲ್ಲಿ ಸೀರಿಯಲ್ ನ ಅಂತಿಮ ದೃಶ್ಯಗಳನ್ನು ಚಿತ್ರೀಕರಿಸಲು ತಯಾರಿ ನಡೆಯುತ್ತಿದೆ. ಜೊತೆಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ ಭಾವುಕರಾಗಿದ್ದಾರೆ.

ಕಿರುತೆರೆಯ ಜನಪ್ರಿಯ ಟಿವಿ ಧಾರಾವಾಹಿಯಾದ ಜೊತೆ ಜೊತೆಯಲ್ಲಿ ಸೀರಿಯಲ್ ನ ಅಂತಿಮ ದೃಶ್ಯಗಳನ್ನು ಚಿತ್ರೀಕರಿಸಲು ತಯಾರಿ ನಡೆಯುತ್ತಿದೆ. ಜೊತೆಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ ಭಾವುಕರಾಗಿದ್ದಾರೆ.

ಆರೂರ್ ಜಗದೀಶ್ ನಿರ್ದೇಶನದ ಈ ಕೌಟುಂಬಿಕ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟ ಕಿರುತೆರೆ ಧಾರಾವಾಹಿ ಮತ್ತು ಕಿರುತೆರೆಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ. ಜೊತೆ ಜೊತೆಯಲ್ಲಿ ನನ್ನ ನಾಲ್ಕು ವರ್ಷಗಳ ಪಯಣ ಮುಗಿಯುತ್ತಿದೆ. ನಾನು ಇಡೀ ಸಿಬ್ಬಂದಿಯೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ್ದೇನೆ. ಇದು ಎರಡನೇ ಕುಟುಂಬದಂತೆ ಇತ್ತು ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ತಮ್ಮ ಕಿರುತೆರೆ ಪ್ರಯಾಣವು ತನಗೆ ಬಹಳಷ್ಟು ಕಲಿಸಿದೆ, ಇದರಿಂದ ನನಗೆ ಸಿನಿಮಾಗಳಲ್ಲಿ ಬ್ರೇಕ್ ಸಿಕ್ಕಿದೆ. ಈ ಪ್ರಯಾಣದಲ್ಲಿ ಅಪಾರ ಬೆಂಬಲ ನೀಡಿದ ತನ್ನ ಅಭಿಮಾನಿಗಳಿಗೆ ಧನ್ಯವಾದವನ್ನೂ ತಿಳಿಸಿದ್ದಾರೆ. ಮೇಘಾ ತಮ್ಮ ಸಿನಿಮಾ ವೃತ್ತಿಜೀವನದತ್ತ ಗಮನ ಹರಿಸಲು ಕಿರುತೆರೆಗ ವಿದಾಯ ಹೇಳುತ್ತಿದ್ದಾರೆ.

ಗಣೇಶ್ ಜೊತೆ ಟ್ರಿಬಲ್ ರೈಡಿಂಗ್ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಮೇಘಾ ನಂತರ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು. ಈಗ, ಅವರು ಜಯತೀರ್ಥ ನಿರ್ದೇಶನದ ಧನ್ವೀರರ ಕೈವಾ ಬಿಡುಗಡೆಗೆ ಕಾಯುತ್ತಿದ್ದಾರೆ.  ಕವೀಶ್ ಶೆಟ್ಟಿ ನಾಯಕರಾಗಿ ಮತ್ತು ಶ್ರವಣ್ ರಾಘವೇಂದ್ರ ನಿರ್ದೇಶನದ ನಂತರ ಆಪರೇಷನ್ ಲಂಡನ್ ಕೆಫೆಯ ಅಂತಿಮ ಶೆಡ್ಯೂಲ್ ಪೂರ್ಣಗೊಳಿಸುತ್ತಿದ್ದಾರೆ.

ಇದಲ್ಲದೆ, ಮೇಘಾ ಅವರು ಪ್ರಸ್ತುತ ಹಲವು ನಿರ್ದೇಶಕರೊಂದಿಗೆ ಮುಂದಿನ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಈಗ ಧಾರಾವಾಹಿ ಮುಗಿದಿರುವುದರಿಂದ ಸಿನಿಮಾದತ್ತ ಮಾತ್ರ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ. ನನಗೆ ಸಾಕಷ್ಟು ಆಫರ್ ಗಳು ಬರುತ್ತಿದ್ದು, ಆಸಕ್ತಿದಾಯಕ ಸ್ಕ್ರಿಪ್ಟ್ ಅಂತಿಮಗೊಳಿಸಲು ಕಾಯುತ್ತಿದ್ದೇನೆ ಎಂದು ಮೇಘಾ ಶೆಟ್ಟಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT