ಕುಮಾರ್ ಗೋವಿಂದ್ - ದರ್ಶನ್ 
ಸಿನಿಮಾ ಸುದ್ದಿ

ದರ್ಶನ್ ಅಭಿನಯದ ಕಾಟೇರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕುಮಾರ್ ಗೋವಿಂದ್ ರೀಎಂಟ್ರಿ

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂಬರುವ ಚಿತ್ರ ಕಾಟೇರ, 1970ರ ದಶಕದಲ್ಲಿನ ಹಳ್ಳಿಯ ಹಿನ್ನೆಲೆಯನ್ನು ಹೊಂದಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಯೋಜನೆಗೆ ಹಿಂದಿನ ನಟ ಕುಮಾರ್ ಗೋವಿಂದ್ ಅವರನ್ನು ಆಯ್ಕೆ ಮಾಡಲಾಗಿದೆ. ನಟನ ಹುಟ್ಟುಹಬ್ಬದಂದು ಈ ಘೋಷಣೆ ಮಾಡಲಾಗಿದೆ.

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂಬರುವ ಚಿತ್ರ ಕಾಟೇರ, 1970ರ ದಶಕದಲ್ಲಿನ ಹಳ್ಳಿಯ ಹಿನ್ನೆಲೆಯನ್ನು ಹೊಂದಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಯೋಜನೆಗೆ ಹಿಂದಿನ ನಟ ಕುಮಾರ್ ಗೋವಿಂದ್ ಅವರನ್ನು ಆಯ್ಕೆ ಮಾಡಲಾಗಿದೆ. ನಟನ ಹುಟ್ಟುಹಬ್ಬದಂದು ಈ ಘೋಷಣೆ ಮಾಡಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ತರುಣ್ ಸುಧೀರ್, 'ಪ್ರೀತಿಯ ಕುಮಾರ್ ಗೋವಿಂದ್ ರವರಿಗೆ ನಮ್ಮ ಕಾಟೇರ ಚಿತ್ರತಂಡದಿಂದ ಹುಟ್ಟುಹಬ್ಬದ ಶುಭಾಶಯಗಳು. ಸಹಾನುಭೂತಿ, ಸಹೋದರ ಆತ್ಮ 'ಮಹದೇವಣ್ಣ'ನಾದ ಕುಮಾರ್ ಗೋವಿಂದ್ ಅವರನ್ನು ಈ ವಿಶೇಷ ದಿನದಂದು ಸ್ವಾಗತಿಸುತ್ತೇನೆ. ಕಾಟೇರ ತಂಡ ಅವರಿಗೆ ಯಶಸ್ಸು ಮತ್ತು ಆರೋಗ್ಯವನ್ನು ಬಯಸುತ್ತದೆ' ಎಂದಿದ್ದಾರೆ.

ಕುಮಾರ್ ಗೋವಿಂದ್ ಮಾತನಾಡಿ, ತಾವು ಚಿತ್ರದಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದು, ಸಹೋದರನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಈಗಾಗಲೇ 30 ರಿಂದ 40 ದಿನಗಳ ಶೂಟಿಂಗ್‌ನಲ್ಲಿ ಭಾಗವಹಿಸಿರುವುದಾಗಿ ತಿಳಿಸಿದ್ದಾರೆ.

ಸಾಕಷ್ಟು ಸಮಯದಿಂದ ಬೆಳ್ಳಿತೆರೆಯಿಂದ ದೂರವಿದ್ದ ಕುಮಾರ್ ಗೋವಿಂದ್ ಅವರನ್ನು ತರುಣ್ ಆಯ್ಕೆ ಮಾಡಿದ್ದು, ಅವರ ಈ ನಿರ್ಧಾರದ ಬಗ್ಗೆ ಕೇಳಿದಾಗ, 'ನಾನು ದರ್ಶನ್‌ಗಿಂತ ಹಿರಿಯರಾದ ಮತ್ತು ಸ್ವತಃ ನಾಯಕನಾಗಿರುವ ನಟನನ್ನು ಹುಡುಕುತ್ತಿದ್ದೆ. ನಾನು ಕುಮಾರ್ ಗೋವಿಂದ್ ಅವರ ನಟನೆಯನ್ನು ಮೆಚ್ಚಿದ್ದೇನೆ. ಅನುರಾಗ ಸಂಗಮ ಮತ್ತು ಚಿಕ್ಕ ಸೇರಿದಂತೆ ಹಳ್ಳಿಯ ಹಿನ್ನೆಲೆಯಲ್ಲಿ ಅವರು ನಟಿಸಿದ ಅನೇಕ ಚಿತ್ರಗಳು ಬ್ಲಾಕ್‌ಬಸ್ಟರ್ ಆಗಿವೆ. ಪಾತ್ರಕ್ಕೆ ಪ್ರಬುದ್ಧತೆಯ ಅಗತ್ಯವಿತ್ತು ಮತ್ತು ಅವರು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತಿದ್ದರು' ಎಂದಿದ್ದಾರೆ.

'ಈ ಹಿಂದೆ ಚೌಕ ಚಿತ್ರಕ್ಕಾಗಿ ಕಾಶಿನಾಥ್ ಮತ್ತು ಈಗ ಕುಮಾರ್ ಗೋವಿಂದ್ ಅವರನ್ನು ಕರೆತಂದಿರುವ ತರುಣ್, 90ರ ದಶಕದ ನಟರು ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುವುದು ಸುಂದರವಾಗಿರುತ್ತದೆ. ದರ್ಶನ್ ಅವರೊಂದಿಗೆ ಹೊಸ ಮುಖದ ಜೊತೆಗೆ ಕನ್ನಡದ ಹಿರಿಯ ನಟರಾಗಿದ್ದವರನ್ನು ಆಯ್ಕೆ ಮಾಡಲು ನಾನು ಬಯಸಿದ್ದೆ. ಕುಮಾರ್ ಗೋವಿಂದ್ ಈ ಯೋಜನೆಯ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ವಾಸ್ತವವಾಗಿ, ಕುಮಾರ್ ಅವರು ತಮ್ಮದೇ ಆದ ಯೋಜನೆಗಳನ್ನು ಹೊಂದಿದ್ದರು ಮತ್ತು ಚಲನಚಿತ್ರವನ್ನು ನಿರ್ದೇಶಿಸುವ ಕೆಲಸದಲ್ಲಿದ್ದರು. ಆದರೆ, ನಾನು ಅವರಿಗೆ ಕಥೆ ಮತ್ತು ಅವರ ಪಾತ್ರವನ್ನು ವಿವರಿಸಿದಾಗ, ಅವರು ನಮ್ಮ ಚಿತ್ರಕ್ಕೆ ಆದ್ಯತೆ ನೀಡಲು ನಿರ್ಧರಿಸಿದರು. ಕಾಟೇರ ತಂಡಕ್ಕೆ ಸೇರಲು ತಮ್ಮದೇ ಯೋಜನೆಗಳನ್ನು ತಡೆಹಿಡಿಯಲು ನಿರ್ಧರಿಸಿದರು' ಎಂದರು.

ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಕಾಟೇರ ಸಿನಿಮಾದಲ್ಲಿ ರಾಧನಾ ರಾಮ್ (ನಟಿ ಮಾಲಾಶ್ರೀ ಅವರ ಪುತ್ರಿ) ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ನಟ ಜಗಪತಿ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ವಾರದಲ್ಲಿ ಚಿತ್ರೀಕರಣ ಪುನರಾರಂಭಗೊಳ್ಳಲಿರುವ ಈ ಮಾಸ್ ಆಕ್ಷನ್ ಎಂಟರ್‌ಟೈನರ್‌ಗೆ ವಿ ಹರಿಕೃಷ್ಣ ಅವರ ಸಂಗೀತ ಮತ್ತು ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT