ಸಿನಿಮಾ ಸುದ್ದಿ

ಮೊಟ್ಟ ಮೊದಲ ಬಾರಿಗೆ ಭಕ್ತಿ ಪ್ರಧಾನ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್!

Shilpa D

ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಕ್ರೇಜಿ ಸ್ಟಾರ್ ಎಂದು ಪ್ರಸಿದ್ಧವಾಗಿರುವ ರವಿಚಂದ್ರನ್ ಸದ್ಯ ಭಕ್ತಿ ಪ್ರಧಾನ ಸಿನಿಮಾ ಬಗ್ಗೆ ಆಸಕ್ತಿ ವಹಿಸಿದ್ದಾರೆ.

ನಿರ್ಮಾಪಕ ಎನ್‌ಎಸ್ ರಾಜ್‌ಕುಮಾರ್ ಅವರೊಂದಿಗೆ ಗೆ ರವಿಚಂದ್ರನ್ ಅವರ ನಾಲ್ಕನೇ ಬಾರಿ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದೆ ಕ್ರೇಜಿ ಸ್ಟಾರ್, ಕನ್ನಡಿಗ ಮತ್ತು ಗೌರಿ ಶಂಕರ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಸದ್ಯದ ಹೊಸ ಸಿನಿಮಾ ಪೋಸ್ಟ್-ಪ್ರೊಡಕ್ಷನ್‌ನಲ್ಲಿದೆ. ಈ ಭಕ್ತಿಪ್ರಧಾನ ಯೋಜನೆಯನ್ನು ಓಂಕಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ  ನಿರ್ಮಾಣ ಮಾಡಲಾಗುತ್ತಿದೆ. ಪುರುಷೋತ್ತಮ್ ಓಂಕಾರ್ ನಿರ್ದೇಶಿಸಲಿದ್ದಾರೆ.

ಡಾ ರಾಜ್‌ಕುಮಾರ್, ವಿಷ್ಣುವರ್ಧನ್‌ರಂತಹ ದಿವಂಗತ ಹಿರಿಯ ನಟರು ಅನೇಕ ದೈವಿಕ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ, ಆದರೆ ರವಿಚಂದ್ರನ್, ಕೃಷ್ಣನಾಗಿ ನಟಿಸಿದ ಕುರುಕ್ಷೇತ್ರದಂತಹ ಪೌರಾಣಿಕ ಚಿತ್ರಗಳನ್ನು ಹೊರತುಪಡಿಸಿ, ಹೆಚ್ಚಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಭಕ್ತಿಪ್ರಧಾನ ಚಿತ್ರಗಳ ಲೋಕಕ್ಕೆ ಇದು ಅವರ ಮೊದಲ ಚಿತ್ರವಾಗಿದೆ.. ಕ್ರೇಜಿ ಸ್ಟಾರ್ ಅವರ ಜನ್ಮದಿನದಂದು ನಿರ್ದೇಶಕರು ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ಸಿನಿಮಾ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

20 ವರ್ಷಗಳ ಅನುಭವ ಹೊಂದಿರುವ ನಿರ್ದೇಶಕ ಪುರುಷೋತ್ತಮ್, ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಾತ್ಮೆ, ಜ್ಞಾನ ಜ್ಯೋತಿ ಶ್ರೀ ಸಿದ್ದಗಂಗಾ, ಚಿತ್ರದುರ್ಗದ ಒನಕೆ ಓಬವ್ವ, ಮಹಾಶರಣ ಹರಳಯ್ಯ, ಭಕ್ತ ಶಂಕರ, ಹಾಸನಾಂಬ ಮಹಿಮೆ ಸೇರಿದಂತೆ ಭಕ್ತಿಪ್ರಧಾನ ಚಿತ್ರಗಳಲ್ಲಿ ಕೆಲಸ ಮಾಡಿ ಹೆಸರುವಾಸಿಯಾಗಿದ್ದಾರೆ. ನಿರ್ದೇಶನದ ಜೊತೆಗೆ, ಪುರುಷೋತ್ತಮ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ರಚಿಸುವಂತಹ  ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದಾರೆ.

ಈ ಸುದ್ದಿಯನ್ನು ದೃಢಪಡಿಸಿರುವ ನಿರ್ದೇಶಕರು ರವಿಚಂದ್ರನ್ ಅವರಿಗಾಗಿ ಭಕ್ತಿ ಪ್ರಧಾನ ಚಿತ್ರವೊಂದನ್ನು ನಿರ್ದೇಶಿಸುವ ಬಗ್ಗೆ ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಸ್ಕ್ರಿಪ್ಟ್ ಪೂಜೆಯೊಂದಿಗೆ ಯೋಜನೆಯು ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಅವರು ಈ ಸಿನಿಮಾಗಾಗಿ ಶ್ರದ್ಧೆಯಿಂದ ತಯಾರಿ ನಡೆಸುತ್ತಿದ್ದಾರೆ. ಜೂನ್‌ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಮುಂದಾಗಿದೆ.

ಪುರುಷೋತ್ತಮ್ ಅವರು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸುತ್ತ ಕೇಂದ್ರೀಕೃತವಾಗಿರುವ ವಿಶಿಷ್ಟವಾದ ಭಕ್ತ ಕಥೆಯನ್ನು ಹೆಣೆದಿದ್ದಾರೆ. ರವಿಚಂದ್ರನ್ ವಿಷ್ಣುವಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಶೂಟಿಂಗ್ ಪ್ರಾರಂಭವಾದ ನಂತರ ಯೋಜನೆ ಮತ್ತು ಇದರ ಪಾತ್ರಗಳ ಕುರಿತು ಹೆಚ್ಚಿನ ವಿವರಗಳನ್ನು ಅನಾವರಣಗೊಳಿಸಲಾಗುತ್ತದೆ.

ಈ ಭಕ್ತಿ ಪ್ರಧಾನ ಚಿತ್ರದಲ್ಲಿ ರವಿಚಂದ್ರನ್ ಜೊತೆಗೆ ನಟಿಸಲು  ನಿರ್ದೇಶಕರು ಭಾವನಾ ಮೆನನ್ ಅವರನ್ನು ಸಂಪರ್ಕಿಸಿದ್ದಾರೆ. ಸಿನಿಮಾದಲ್ಲಿ ವಿವಿಧ ಪಾತ್ರಗಳಿಗಾಗಿ ಲಕ್ಷ್ಮಿ ಪೊನ್ನಪ್ಪ ಮತ್ತು ಅರ್ಚನಾ ಕೊಟ್ಟಿಗೆ ಅವರ ಸೇರ್ಪಡೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮಹಿಳಾ ಪಾತ್ರಗಳು ಅಂತಿಮವಾದ ನಂತರ ಅವರ ಡೇಟ್ಸ್ ಅನುಸರಿಸಿ ಉಳಿದ ಮಾಹಿತಿ ನೀಡಲಾಗುತ್ತದೆ.

ಏತನ್ಮಧ್ಯೆ, ಪ್ರೊಡಕ್ಷನ್ ಹೌಸ್ ಈ ಯೋಜನೆಗೆ ತಂತ್ರಜ್ಞರನ್ನು ಅಂತಿಮಗೊಳಿಸಿದೆ. ರಾಜ್ ಭಾಸ್ಕರ್ ಸಂಗೀತ ಸಂಯೋಜಿಸಲು ನಿರ್ಧರಿಸಿದ್ದು, ಡಿಒಪಿ ಮುತ್ತುರಾಜ್ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

SCROLL FOR NEXT