'ಡೆವಿಲ್-ದಿ ಹೀರೋ' ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಡೆವಿಲ್-ದಿ ಹೀರೋ' ಸಂಪೂರ್ಣ ಮಾಸ್ ಎಂಟರ್‌ಟೈನರ್ ಚಿತ್ರ; ಡಿ ಬಾಸ್ ಅಭಿಮಾನಿಗಳಿಗೆ 'ಹಬ್ಬ': ಪ್ರಕಾಶ್ ವೀರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆಗೂ ಮೊದಲೇ ಮತ್ತೊಂದು ಸಿನಿಮಾ ಸೆಟ್ಟೇರಲು ಸಜ್ಜಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆಗೂ ಮೊದಲೇ ಮತ್ತೊಂದು ಸಿನಿಮಾ ಸೆಟ್ಟೇರಲು ಸಜ್ಜಾಗಿದೆ,

ಮಿಲನಾ ಪ್ರಕಾಶ್ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸದ್ದಿಲ್ಲದೇ ನೆರವೇರಿತು.

ಈ ಹಿಂದೆ ದರ್ಶನ್ ಹಾಗೂ ಮಿಲನಾ ಪ್ರಕಾಶ್ ಕಾಂಬಿನೇಷನ್‌ನಲ್ಲಿ 'ತಾರಕ್' ಸಿನಿಮಾ ಬಿಡುಗಡೆಯಾಗಿ, ಹಿಟ್ ಆಗಿತ್ತು. ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಕೊಟ್ಟು ಚಿತ್ರತಂಡ ಗೆದ್ದಿತ್ತು. ಕಾಟೇರ ಸಿನಿಮಾಮದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ.

ಈ ನಡುವಲ್ಲೇ ಮಿಲನಾ ಪ್ರಕಾಶ್ ಹಾಗೂ ದರ್ಶನ್ ಅವರು ಹೊಸ ಚಿತ್ರಕ್ಕೆ ಕೈಜೋಡಿಸಿದ್ದು, ಚಿತ್ರಕ್ಕೆ ಡೆವಿಲ್-ದಿ ಹೀರೋ ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದಾರೆ.

'ಡೆವಿಲ್-ದಿ ಹೀರೋ' ಸಿನಿಮಾದ ಮುಹೂರ್ತದಲ್ಲಿ ದರ್ಶನ್, ಪ್ರಕಾಶ್ ವೀರ್

“ನವೆಂಬರ್ 2 ಅನ್ನು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ, ಆದ್ದರಿಂದ ಚಿತ್ರದ ಮುಹೂರ್ತವನ್ನು ನಡೆಸಲಾಗಿದೆ. ಮುಂದಿನ ಚಿತ್ರದಲ್ಲಿ ಅವರ ಪಾತ್ರದ ಕುರಿತು ಕೆಲಸ ಪ್ರಾರಂಭಿಸುವ ಸಲುವಾಗಿ ಕಾಟೇರ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲು ಕಾತುರದಿಂದ ಕಾಯುತ್ತಿದ್ದೇನೆ. ಚಿತ್ರದಲ್ಲಿ ದರ್ಶನ್ ಅವರು ನಿರ್ಣಾಯತ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಡೆವಿಲ್-ದಿ ಹೀರೋ ಸಂಪೂರ್ಣ ಮಾಸ್ ಎಂಟರ್‌ಟೈನರ್ ಚಿತ್ರವಾಗಿರಲಿದ್ದು, ಪ್ರತೀಯೊಬ್ಬರ ನಿರೀಕ್ಷೆಗಳನ್ನು ಪೂರೈಸುವ ಭರವಸೆಯಿದೆ ಎಂದು ಹೇಳಿದ್ದಾರೆ.

ತಾರಕ್ ಚಿತ್ರದ ಸಮಯದಲ್ಲಿ ನಾನು ವಿಭಿನ್ನ ನಿರ್ದೇಶಕನಾಗಿದ್ದೆ. ಆದರೀಗ ತಂದೆಯ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ನನ್ನ ಮೇಲಿದೆ. ಕಳೆದ ಐದಾರು ವರ್ಷಗಳಿಂದ ಕಲಿತಿದ್ದನ್ನು ಪ್ರಯೋಗಿಸುವ ಸಮಯ ಬಂದಿದೆ. ಡೆವಿಲ್ ಚಿತ್ರವನ್ನು ಚಾಲೆಂಜಿಗ್ ಸ್ಟಾರ್ ಹಾಗೂ ಅವರ ಅಭಿಮಾನಿಗಳಾಗಿ ನಿರ್ಮಿಸಲಾಗುತ್ತಿದೆ. ಚಿತ್ರದ ಕುರಿತು, ಚಿತ್ರೀಕರಣ ಪ್ರಾರಂಭದ ಕುರಿತು ಬಹಳ ಕಾತುರನಾಗಿದ್ದೇನೆಂದು ಹೇಳಿದ್ದಾರೆ.

ಈಗಾಗಲೇ ಚಿತ್ರದ ಕುರಿತು ಪ್ರಕಾಶ್ ಅವರು ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ಚಿತ್ರೀಕರಣಕ್ಕಾಗಿ ಸ್ಥಳಗಳ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ, ಚಿತ್ರಕ್ಕೆ ನಾಯಕ ನಟಿ ಹಾಗೂ ಇನ್ನಿತರೆ ತಾರಾ ಬಳಗಕ್ಕಾಗಿಯೂ ಚಿತ್ರತಂಡ ಹುಡುಕಾಟ ಆರಂಭಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT