ಥಗ್‌ ಲೈಫ್‌ 
ಸಿನಿಮಾ ಸುದ್ದಿ

ಮಣಿರತ್ನಂ-ಕಮಲ್ ಹಾಸನ್ ಜೋಡಿಯ ಹೊಸ ಚಿತ್ರ 'ಥಗ್‌ ಲೈಫ್‌' ಟೈಟಲ್‌ ಬಿಡುಗಡೆ

ಖ್ಯಾತ ತಮಿಳು ನಿರ್ದೇಶಕ ಮಣಿರತ್ನಂ ಹಾಗೂ ಖ್ಯಾತ ನಟ ಕಮಲ್ ಹಾಸನ್ ಅವರು ಮತ್ತೆ ಒಂದಾಗಿದ್ದು, ಈ ಜೋಡಿಯ ಬಹು ನಿರೀಕ್ಷಿತ ಹೊಸ ಆಕ್ಷನ್ ಚಿತ್ರಕ್ಕೆ ಥಗ್ ಲೈಫ್ ಎಂದು ಹೆಸರಿಡಲಾಗಿದೆ.

ನವದೆಹಲಿ: ಖ್ಯಾತ ತಮಿಳು ನಿರ್ದೇಶಕ ಮಣಿರತ್ನಂ ಹಾಗೂ ಖ್ಯಾತ ನಟ ಕಮಲ್ ಹಾಸನ್ ಅವರು ಮತ್ತೆ ಒಂದಾಗಿದ್ದು, ಈ ಜೋಡಿಯ ಬಹು ನಿರೀಕ್ಷಿತ ಹೊಸ ಆಕ್ಷನ್ ಚಿತ್ರಕ್ಕೆ ಥಗ್ ಲೈಫ್ ಎಂದು ಹೆಸರಿಡಲಾಗಿದೆ.

1987ರ ನಾಯಕನ್‌ ಚಿತ್ರದ ಬಳಿಕ ಈ ಚಿತ್ರದಲ್ಲಿ ಕಮಲ್‌ ಹಾಸನ್‌ ಮತ್ತು ಮಣಿರತ್ನಂ ಒಂದಾಗುತ್ತಿದ್ದಾರೆ. ಅಂದರೆ 33 ವರ್ಷಗಳ ಬಳಿಕ ಇವರಿಬ್ಬರು ಜತೆಯಾಗಿ ಸಿನಿಮಾ ಮಾಡುತ್ತಿದ್ದಾರೆ.

ಈ ಚಿತ್ರದ ನಿರ್ಮಾಪಕರಲ್ಲಿಒಬ್ಬರಾದ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಚಿತ್ರದ ಟೈಟಲ್ ಮತ್ತು ಟೀಸರ್ ಅನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಥಗ್‌ ಲೈಫ್‌' ಚಿತ್ರದಲ್ಲಿ ಜಯಂ ರವಿ, ದುಲ್ಕರ್ ಸಲ್ಮಾನ್ ಮತ್ತು ನಟಿ ತ್ರಿಶಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಥಗ್‌ ಲೈಫ್ ಚಿತ್ರವನ್ನು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್, ರಾಜ್ ಕಮಲ್ ಫಿಲಂಸ್ ಇಂಟರ್ನ್ಯಾಷನಲ್ ಮತ್ತು ರತ್ನಂ ಅವರ ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಲಿವೆ.

ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಕಳೆದ ವರ್ಷ ಈ ಯೋಜನೆಯನ್ನು ಅಧಿಕೃತವಾಗಿ ಘೋಷಿಸಲಾಗಿತ್ತು ಮತ್ತು ಅದಕ್ಕೆ ಕೆಎಚ್‌ 234 ಎಂಬ ತಾತ್ಕಾಲಿಕ ಶೀರ್ಷಿಕೆಯಿಡಲಾಗಿತ್ತು.

ಈ ಥಗ್‌ ಲೈಫ್‌ ಟೈಟಲ್ ಜೊತೆಗೆ ಟೀಸರ್ ಅನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿದ್ದು. ಇದರಲ್ಲಿ ಕಮಲ್‌ ಹಾಸನ್‌ ಅವರು ರಂಗರಾಯ ಶಕ್ತಿವೇಲು ನೈಚರ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

SCROLL FOR NEXT