ನೆಲ್ಸನ್ ಚಿತ್ರದ ಪೋಸ್ಟರ್ - ಲಿಯೋನಿಲ್ಲಾ ಶ್ವೇತಾ ಡಿಸೋಜಾ 
ಸಿನಿಮಾ ಸುದ್ದಿ

ವಿನೋದ್ ಪ್ರಭಾಕರ್ ನಟನೆಯ ನೆಲ್ಸನ್ ಚಿತ್ರಕ್ಕೆ ನಟಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಾಯಕಿ!

ನಟ ವಿನೋದ್ ಪ್ರಭಾಕರ್ ನಟನೆಯ ಗೊಂಬೆಗಳ ಲವ್ ಖ್ಯಾತಿಯ ನಟ ಅರುಣ್ ಕುಮಾರ್ ಇದೀಗ ನಿರ್ದೇಶಕರಾಗಿರುವ ನೆಲ್ಸನ್ ಸಿನಿಮಾ ಸದ್ಯ ನಿರ್ಮಾಣ ಹಂತದಲ್ಲಿದೆ. ವ್ಯಾಪಕ ಹುಡುಕಾಟದ ನಂತರ, ಅವರು ಈಗ ಮಹತ್ವದ ಪಾತ್ರಕ್ಕಾಗಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. 

ನಟ ವಿನೋದ್ ಪ್ರಭಾಕರ್ ನಟನೆಯ ಗೊಂಬೆಗಳ ಲವ್ ಖ್ಯಾತಿಯ ನಟ ಅರುಣ್ ಕುಮಾರ್ ಇದೀಗ ನಿರ್ದೇಶಕರಾಗಿರುವ ನೆಲ್ಸನ್ ಸಿನಿಮಾ ಸದ್ಯ ನಿರ್ಮಾಣ ಹಂತದಲ್ಲಿದೆ. ಚಿತ್ರದ ಶೀರ್ಷಿಕೆ, ಫಸ್ಟ್ ಲುಕ್, ಟೀಸರ್ ಮತ್ತು ಜಾನಪದ ಅಂಶಗಳ ಸೇರ್ಪಡೆಯಿಂದಾಗಿ ತೀವ್ರ ಕುತೂಹಲ ಹುಟ್ಟುಹಾಕಿದೆ. ಕೆಲವು ದಿನಗಳಿಂದ ಚಿತ್ರತಂಡ ನಾಯಕನೊಂದಿಗೆ ಚಿತ್ರೀಕರಣ ನಡೆಸುತ್ತಿದ್ದು, ಇದೇ ವೇಳೆ ಚಿತ್ರದ ಉಳಿದ ತಾರಾಗಣವನ್ನು ಅಂತಿಮಗೊಳಿಸುತ್ತಿದೆ.

ವ್ಯಾಪಕ ಹುಡುಕಾಟದ ನಂತರ, ಚಿತ್ರತಂಡ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಗಿರಿದೇವ್ ಹಾಸನ್ ನಿರ್ದೇಶನದ ವೈ ಎಂಬ ಚಿತ್ರದೊಂದಿಗೆ ಅವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡದ 'ಖಾಸಗಿ ಪುಟಗಳು' ಮತ್ತು ಹೆಜ್ಜಾರು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ನೆಲ್ಸನ್ ಚಿತ್ರತಂಡ ಲಿಯೋನಿಲ್ಲಾ ಶ್ವೇತಾರನ್ನು ಆರಂಭಿಕ ಆಡಿಷನ್ ಮತ್ತು ಲುಕ್ ಟೆಸ್ಟ್ ನಂತರ ತಂಡಕ್ಕೆ ಕರೆತರಲು ನಿರ್ಧರಿಸಿತು. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ. '1960 ರಿಂದ 1990ರ ದಶಕದಲ್ಲಿ ಕಂಡುಬರುವ ಚಾಮರಾಜನಗರ ಜಿಲ್ಲೆಯ ಗ್ಯಾಂಗ್‍‌ಸ್ಟರ್‌ಗಳ ನೈಜ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಇದು ಈ ಪ್ರದೇಶದ ಭಾಷೆ, ಸಂಸ್ಕೃತಿ, ನೆಲ, ಜಲ ಮತ್ತು ಬುಡಕಟ್ಟು ಸಮುದಾಯಗಳ ಹೋರಾಟದ ಸಾರವನ್ನು ಸೆರೆಹಿಡಿಯುತ್ತದೆ. 

ಲಿಯೋನಿಲ್ಲಾ ಶ್ವೇತಾ ಡಿಸೋಜಾ

ಈಗಾಗಲೇ ಕೆಲವು ದಿನಗಳ ಚಿತ್ರೀಕರಣ ನಡೆಸಿರುವ ಚಿತ್ರತಂಡ ನವೆಂಬರ್ 17 ರಂದು ಚಿತ್ರೀಕರಣವನ್ನು ಪುನರಾರಂಭಿಸಲು ಯೋಜಿಸಿದ್ದಾರೆ. ಚಾಮರಾಜನಗರ, ಸಂಗಮ, ಮಾದೇಶ್ವರ ಬೆಟ್ಟ ಮತ್ತು ಸತ್ಯಗಾಲ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಬಿಎಂ ಶ್ರೀರಾಮ್ ನಿರ್ಮಿಸಿರುವ ಈ ಚಿತ್ರದಲ್ಲಿ ಗೋಪಾಲ ಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹರಿ ಮಹದೇವ್ ಸಂಭಾಷಣೆ ಬರೆದರೆ, ಸಾಹಸ ದೃಶ್ಯಗಳಿಗೆ ಸ್ಟಂಟ್ ಮಾಸ್ಟರ್ ರವಿ ವರ್ಮಾ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪ್ರಜ್ವಲ್ ಗೌಡ ಅವರ ಛಾಯಾಗ್ರಹಣ ಮತ್ತು ಭರತ್ ಬಿಜಿ ಅವರ ಸಂಗೀತ ಸಂಯೋಜನೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT