ಕೈವ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ನಟ ಧನ್ವೀರ್, ಮೇಘಾ ಶೆಟ್ಟಿ ನಟನೆಯ ಬಹು ನಿರೀಕ್ಷಿತ 'ಕೈವ' ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧತೆ

ಧನ್ವೀರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಕೈವ' ಚಿತ್ರ ಆರಂಭದಿಂದಲೂ ಗಮನ ಸೆಳೆಯುತ್ತಿದೆ. ಇದೊಂದು ವೈವಿಧ್ಯಮಯ ಪ್ರೇಮಕಥೆಯಾಗಿದ್ದು, ಸಾಹಸಮಯ ನಿರೂಪಣೆಯನ್ನೂ ಹೊಂದಿದೆ ಎನ್ನಲಾಗಿದೆ. ಜಯತೀರ್ಥ ನಿರ್ದೇಶನದಲ್ಲಿ, ನಟ ಧನ್ವೀರ್ ಅವರನ್ನು ಹೊಸ ಅವತಾರದಲ್ಲಿ ತೆರೆ ಮೇಲೆ ತರಲಾಗುತ್ತಿದೆ ಎಂದು ಹೇಳಲಾಗಿದೆ. 

ಧನ್ವೀರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಕೈವ' ಚಿತ್ರ ಆರಂಭದಿಂದಲೂ ಗಮನ ಸೆಳೆಯುತ್ತಿದೆ. ಇದೊಂದು ವೈವಿಧ್ಯಮಯ ಪ್ರೇಮಕಥೆಯಾಗಿದ್ದು, ಸಾಹಸಮಯ ನಿರೂಪಣೆಯನ್ನೂ ಹೊಂದಿದೆ ಎನ್ನಲಾಗಿದೆ. ಜಯತೀರ್ಥ ನಿರ್ದೇಶನದಲ್ಲಿ, ನಟ ಧನ್ವೀರ್ ಅವರನ್ನು ಹೊಸ ಅವತಾರದಲ್ಲಿ ತೆರೆ ಮೇಲೆ ತರಲಾಗುತ್ತಿದೆ ಎಂದು ಹೇಳಲಾಗಿದೆ. 

ಸದ್ಯ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿರುವ ಚಿತ್ರವನ್ನು ಮುಂದಿನ ಡಿಸೆಂಬರ್‌ನಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಚಿತ್ರ ಬಿಡುಗಡೆಗೂ ಮೊದಲು, ನವೆಂಬರ್ 13ರಂದು ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಕೈವಾರ ಭೀಮ ಎಂಬ ಹೆಸರಿನಿಂದ ಸ್ಫೂರ್ತಿ ಪಡೆದ ಈ ಯೋಜನೆಯು ಜಯತೀರ್ಥ ಅವರು ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಆ್ಯಕ್ಷನ್ ಪ್ರಕಾರವಾಗಿದೆ. ಒಲವೇ ಮಂದಾರ, ಬ್ಯೂಟಿಫುಲ್ ಮನಸುಗಳು, ಬೆಲ್ ಬಾಟಮ್ ಮತ್ತು ಬನಾರಸ್ ಚಿತ್ರಗಳ ನಿರ್ದೇಶನಕ್ಕೆ ಹೆಸರುವಾಸಿಯಾದ ಜಯತೀರ್ಥ ಅವರು ಕೈವ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಧನ್ವೀರ್ ಅವರ ಜೊತೆ ಕೆಲಸ ಮಾಡಿದ್ದಾರೆ.

ಕ್ರೈಮ್ ಅಂಶಗಳೊಂದಿಗೆ ಈ ರೋಮ್ಯಾಂಟಿಕ್ ಸಿನಿಮಾವು 1983ರ ನೈಜ ಘಟನೆಗಳನ್ನು ಆಧರಿಸಿದೆ. ಚಿತ್ರದ ಕುರಿತು ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳುವ ನಿರೀಕ್ಷೆಯಿದೆ. ‘ಕೈವ ಸಿನಿಮಾ ಸಂಪೂರ್ಣ ಬೆಂಗಳೂರಿನ ತಿಗಳರ ಪೇಟೆಯಲ್ಲಿ ನಡೆಯುವ ಕಥೆಯಾಗಿದ್ದು, ಅಲ್ಲಿನ ಜನರ ಆಗಿನ ಜೀವನಶೈಲಿ, ಪರಿಸರ ಸೇರಿದಂತೆ ಪ್ರತಿಯೊಂದನ್ನು ಸಿನಿಮಾ ಒಳಗೊಂಡಿರಲಿದೆ. ಆ ಜನರಿಗೆ ಕರಗ ಎಂಬುದು ಜೀವನದ ಒಂದು ಭಾಗ. ಈ ಸಿನಿಮಾಗಾಗಿ ಕರಗವನ್ನು ಮರುಸೃಷ್ಟಿ ಮಾಡಲಾಗಿದೆ. ಕರಗ ಯಾವ ರೀತಿ ನಡೆಯುತ್ತದೆ. ಅದರ ತಯಾರಿ ಹೇಗಿರುತ್ತದೆ ಎಂಬ ಕುರಿತಾದ ಸಂಗತಿಗಳು ಚಿತ್ರದಲ್ಲಿರಲಿವೆ. 

ಅಭುವನಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಧನ್ವೀರ್‌ಗೆ ಜೋಡಿಯಾಗಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಕೈವ ಸಿನಿಮಾ 1983 ಎಂಬ ಅಡಿಬರಹವನ್ನು ಹೊಂದಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಇದ್ದು, ವಿ ನಾಗೇಂದ್ರ ಪ್ರಸಾದ್ ಗೀತರಚನೆಕಾರರಾಗಿ ಮತ್ತು ಕೆಎಂ ಪ್ರಕಾಶ್ ಸಂಕಲನಕಾರರಾಗಿದ್ದಾರೆ. ರಘು ನಿಡುವಳ್ಳಿ ಅವರ ಸಂಭಾಷಣೆ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT