ಕ್ಯಾಪ್ಚರ್ ಸಿನಿಮಾದ ಸ್ಟಿಲ್ 
ಸಿನಿಮಾ ಸುದ್ದಿ

ಪ್ರಿಯಾಂಕಾ ಉಪೇಂದ್ರ-ಮಾನ್ವಿತ ಕಾಮತ್ ಅಭಿನಯದ 'ಕ್ಯಾಪ್ಚರ್' ಸಿನಿಮಾ ಬಿಡುಗಡೆಗೆ ಸಿದ್ಧ

ಪ್ರಿಯಾಂಕಾ ಉಪೇಂದ್ರ ಅವರ ಮುಂಬರುವ 'ಕ್ಯಾಪ್ಚರ್' ಸಿನಿಮಾದ ಚಿತ್ರೀಕರಣ ಗೋವಾದಲ್ಲಿ 30 ದಿನಗಳ ಕಾಲ ನಡೆದಿದ್ದು, ಸಂಪೂರ್ಣ ಚಿತ್ರೀಕರಣ ಮುಗಿದಿದೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸಿನಿಮಾವನ್ನು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.

ಪ್ರಿಯಾಂಕಾ ಉಪೇಂದ್ರ ಅವರ ಮುಂಬರುವ 'ಕ್ಯಾಪ್ಚರ್' ಸಿನಿಮಾ ಇದೀಗ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಸಂಪೂರ್ಣವಾಗಿ ಸಿಸಿಟಿವಿ ದೃಷ್ಟಿಕೋನದಿಂದ ಚಿತ್ರೀಕರಿಸಿದ ಮೊದಲ ಭಾರತೀಯ ಸಿನಿಮಾ ಇದಾಗಿದೆ. ಒಂದೇ ಲೆನ್ಸ್‌ನಲ್ಲಿ ಚಿತ್ರೀಕರಿಸಿದ ವಿಶ್ವದ ಅಪರೂಪದ ಚಲನಚಿತ್ರಗಳಲ್ಲಿ ಕೂಡ ಒಂದಾಗಿದೆ. ಚಿತ್ರವನ್ನು ಲೋಹಿತ್ ಹೆಚ್ ನಿರ್ದೇಶಿಸಿದ್ದಾರೆ. ಮಮ್ಮಿ ಮತ್ತು ದೇವಕಿ ಚಿತ್ರಗಳ ನಂತರ ನಿರ್ದೇಶಕರೊಂದಿಗೆ ಪ್ರಿಯಾಂಕ ಮೂರನೇ ಬಾರಿಗೆ ಕೆಲಸ ಮಾಡಿದ್ದಾರೆ.

ರವಿರಾಜ್ ಅವರು ಶಮಿಕಾ ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ಸ್‌ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

30 ದಿನಗಳ ಕಾಲ ಗೋವಾದಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಸದ್ಯ ಚಿತ್ರೀಕರಣದ ಭಾಗ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸಿನಿಮಾವನ್ನು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.

ಶಿವರಾಜ್‌ಕುಮಾರ್ ಅವರ 'ಟಗರು' ಖ್ಯಾತಿಯ ಮಾನ್ವಿತಾ ಕಾಮತ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದನ್ನು ನಿರ್ವಹಿಸುತ್ತಿದ್ದರೆ, ಮಾಸ್ಟರ್ ಕನಿಶ್‌ರಾಜ್ ಮತ್ತೊಂದು ಪ್ರಮುಖ ಪಾತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪಾಂಡಿಕುಮಾರ್ ಛಾಯಾಗ್ರಹಣ, ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT