ಸಿನಿಮಾ ಸುದ್ದಿ

ಸಂಗೀತದಲ್ಲಿ ಕನ್ನಡಿಗರಿಗೆ ಒಳ್ಳೆಯ ಅಭಿರುಚಿ ಇದೆ: ಸಂಗೀತಗಾರ ಕಬೀರ್ ರಫಿ

Srinivas Rao BV

ಮನಸೋಲಜಿ (2011) ರಲ್ಲಿ ತೆರಕಂಡ ಸಿನಿಮಾದ ನಂತರ ನಿರ್ದೇಶಕ ದೀಪಕ್ ಅರಸ್ ಮತ್ತೊಂದು ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಮರುಪ್ರವೇಶಿಸುತ್ತಿದ್ದಾರೆ. 

ದೀಪಕ್ ಅರಸ್ ಈಗ ಶುಗರ್ ಫ್ಯಾಕ್ಟರಿ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದು, ನ.24 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಕೃಷ್ಣ, ಸೋನಾಲ್ ಮಾಂತೇರೊ, ಅದ್ವಿತಿ ಶೆಟ್ಟಿ ಮತ್ತು ರುಹಾನಿ ಶೆಟ್ಟಿ ನಟಿಸಿದ್ದು, ಸಂಯೋಜಕ ಕಬೀರ್ ರಫಿ ಅವರ ಕನ್ನಡದ ಚೊಚ್ಚಲ ಚಿತ್ರಣವನ್ನು ಒಳಗೊಂಡ ಪ್ರೇಮ ಕಥೆ ಇದಾಗಿದೆ. 
 
ಕಬೀರ್ ರಫಿ ಸಂಗೀತ ಸಂಯೋಜನೆಯ ಕ್ಷೇತ್ರದಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಮುಖವಾಗಿ ತೆಲುಗು ಹಾಗೂ ತಮಿಳು ಚಿತ್ರಗಳು, ವೆಬ್ ಸೀರೀಸ್, ಶಾರ್ಟ್ ಫಿಲ್ಮ್ಗಳಿಗೆ ಕಲಸ ಮಾಡಿದ್ದಾರೆ.

ತಮ್ಮ ಮಾರ್ಗದರ್ಶಕ ಜೀವನ್ ಥಾಮಸ್ ಹಾಗೂ ಎಆರ್ ರೆಹಮಾನ್ ಅವರೊಂದಿಗೂ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ರಫಿ, ಈಗ ದೀಪಕ್ ಅರಸ್ ಅವರ ಶುಗರ್ ಫ್ಯಾಕ್ಟರಿ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 

ಪ್ರಸ್ತುತ ಜಗತ್ತಿನ ಪಬ್ ಸಂಸ್ಕೃತಿಯ ಸುತ್ತ ಹೆಣೆದುಕೊಂಡಿರುವ ಚಿತ್ರ ಕಥೆ ಇದಾಗಿದ್ದು, ಮೆಲೋಡಿಗಳಿಗಾಗಿಯೆ ಖ್ಯಾತಿ ಗಳಿಸಿರುವ ರಫಿ ಅವರಿಗೆ ಇದು ಹೊಸತನದ ಸಿನಿಮಾ ಆಗಿದೆ. 

ಶುಗರ್ ಫ್ಯಾಕ್ಟರ್ ಆಲ್ಬಮ್ ನಲ್ಲಿ ಒಟ್ಟು 7 ಹಾಡುಗಳಿದ್ದು, ರೊಮ್ಯಾಂಟಿಕ್ ಹಾಡು ಶೋಕಗೀತೆ, ಡಿಜಿಂಗ್, ಟ್ರಾನ್ಸ್, ಇಡಿಎಂ ಗಳನ್ನು ಸೃಷ್ಟಿ ಮಾಡಬೇಕಾಯಿತು ಎನ್ನುತ್ತಾರೆ ರಫಿ 

ಒಂದು ಹಾಡನ್ನು ಬಾಬಾ ಸೆಹ್ಗಲ್ ಹಾಡಿದ್ದು, ಅಮ್ರಾನ್ ಮಲೀಕ್, ಅಮೃತಾ ನಾಯ್ಕ್, ವಿಜಯ ಪ್ರಕಾಶ್ ಹಾಗೂ ಕಲಿಮುಲ್ಲಾ ಸಹ ಹಾಡಿದ್ದಾರೆ ಒಟ್ಟಾರೆ ಇದು ಅತ್ಯುತ್ತಮ ಆಲ್ಬಮ್ ಆಗಲಿದೆ ಎಂದು ಕಬೀರ್ ಹೇಳಿದ್ದಾರೆ.

ಕಬೀರ್ ಶುಗರ್ ಫ್ಯಾಕ್ಟರಿ ಸಿನಿಮಾಗಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಕೋವಿಡ್ ಸಂದರ್ಭದಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಕನ್ನಡಿಗರು ಸಂಗೀತದೆಡೆಗೆ ಅತ್ಯುತ್ತಮ ಅಭಿರುಚಿ ಹೊಂದಿದ್ದಾರೆ. ಅವರು ಪ್ರತಿಯೊಬ್ಬ ಸಂಗೀತ ಸಂಯೋಜಕ, ಹಾಡುಗಾರನನ್ನು ಭಾಷೆಯ ಭೇದವಿಲ್ಲದೇ ಸ್ವಾಗತಿಸುತ್ತಿದ್ದಾರೆ ಹಾಗೂ ನಮ್ಮ ಕೌಶಲ್ಯಗಳನ್ನು ಅನ್ವೇಷಿಸಲು ನಮಗೆ ಅವಕಾಶ ಸಿಗಲಿದೆ, ಕನ್ನಡದಿಂದ ಇನ್ನಷ್ಟು ಸಿನಿಮಾ ಅವಕಾಶಗಳು ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

SCROLL FOR NEXT