ಸಿನಿಮಾ ಸುದ್ದಿ

ಕೊಲ್ಕತ್ತಾ ಚಲಚಿತ್ರೋತ್ಸವದಲ್ಲಿ ಕೊಡಗಿನ ಮಹಿಳೆ ನಿರ್ದೇಶನದ 'ಕಂದೀಲು' ಪ್ರದರ್ಶನ

Nagaraja AB

ಮಡಿಕೇರಿ: ಕೊಡಗಿನ ಮಹಿಳೆಯೊಬ್ಬರು ನಿರ್ದೇಶಿಸಿರುವ ಕನ್ನಡ ಚಿತ್ರವೊಂದು ಡಿಸೆಂಬರ್ 5ರಿಂದ 12ರವರೆಗೆ ನಡೆಯಲಿರುವ 29ನೇ ಕೊಲ್ತತ್ತಾ ಚಲನಚಿತ್ರೋತ್ಸದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ. ಮಡಿಕೇರಿಯ ಯಶೋಧ ಪ್ರಕಾಶ್ ನಿರ್ದೇಶಿಸಿರುವ 'ಕಂದೀಲು' ಏಕೈಕ ಕನ್ನಡ ಚಿತ್ರ ಮಾತ್ರ ಈ ವರ್ಷದ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದೆ.

ಮಡಿಕೇರಿ ನಿವಾಸಿಯಾಗಿರುವ ಯಶೋಧ ಜಿಲ್ಲೆಯ ಏಕೈಕ ಮಹಿಳಾ ನಿರ್ದೇಶಕರಾಗಿದ್ದಾರೆ. ಇಲ್ಲಿಯವರೆಗೂ ಅನೇಕ ಸಿನಿಮಾಗಳ ನಿರ್ದೇಶನ ಹಾಗೂ ನಿರ್ಮಾಣವನ್ನು ಅವರು ಮಾಡಿದ್ದಾರೆ. ಇದರಲ್ಲಿ ಮೂರು ಕೊಡವ ಸಿನಿಮಾಗಳಾದರೆ, ಐದು ಕನ್ನಡ ಸಿನಿಮಾಗಳಾಗಿವೆ. ಉದ್ಯಮದಲ್ಲಿ ಸಕ್ರಿಯರಾಗಿರುವ ಅವರು, ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ಆಕೆ ನಿರ್ದೇಶಿಸಿರುವ ಕಂದೀಲು ಕೋಲ್ಕತ್ತಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಅವರ ನಿರ್ದೇಶನಕ್ಕೆ ಮತ್ತೊಂದು ಕಿರೀಟ ಸಿಕ್ಕಿದಂತಾಗಿದ್ದು, ಸ್ಪರ್ಧೆಯಲ್ಲಿ ಗೆಲ್ಲುವ  ಭರವಸೆ ವ್ಯಕ್ತಪಡಿಸಿದ್ದಾರೆ. 

ಕಂದೀಲು ಚಿತ್ರದ ಪೋಸ್ಟರ್

'ಕಂದೀಲು' ಗ್ರಾಮವೊಂದರ ಕಥೆಯಾಗಿದ್ದು, ರೈತ ಹಾಗೂ ಆತನ ಕುಟುಂಬದ ಸುತ್ತ ಸುತ್ತುತ್ತದೆ. ಈ ಸಿನಿಮಾ ಹಲವರ ಜೀವನಾಧಾರಿತ ಕಥೆಯಿಂದ ಪ್ರೇರಣೆ ಪಡೆದಿದೆ. ಅನೇಕ ಸವಾಲುಗಳ ನಡುವೆ ಬದುಕು ಎಷ್ಟು ಮಹತ್ವದ್ದು ಎಂಬುದನ್ನು ಅನೇಕ ಅಯಾಮಾಗಳಲ್ಲಿ ಚಿತ್ರ ವಿವರಿಸಲಿದೆ. ಚಿತ್ರೋತ್ಸವದಲ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ. 

SCROLL FOR NEXT