ಲೀಲಾವತಿ ಮನೆಗೆ ದರ್ಶನ್ ಭೇಟಿ 
ಸಿನಿಮಾ ಸುದ್ದಿ

 ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ದರ್ಶನ್

ಹಿರಿಯ ನಟಿ ಲೀಲಾವತಿ ಬಹುದಿನಗಳಿಂದ ಹಾಸಿಗೆ ಹಿಡಿದಿದ್ದಾರೆ ಹೀಗಾಗಿ ಭಾನುವಾರ (ನವೆಂಬರ್ 26 ರಂದು) ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಹಿರಿಯ ನಟಿ ಆರೋಗ್ಯ ವಿಚಾರಿಸಿದ್ದಾರೆ.

ಬೆಂಗಳೂರು: ಹಿರಿಯ ನಟಿ ಲೀಲಾವತಿ ಬಹುದಿನಗಳಿಂದ ಹಾಸಿಗೆ ಹಿಡಿದಿದ್ದಾರೆ ಹೀಗಾಗಿ ಭಾನುವಾರ (ನವೆಂಬರ್ 26 ರಂದು) ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಹಿರಿಯ ನಟಿ ಆರೋಗ್ಯ ವಿಚಾರಿಸಿದ್ದಾರೆ.

ಕಳೆದ ಹತ್ತು ದಿನಗಳಿಂದ ಹಾಸಿಗೆ ಹಿಡಿದಿರುವ ಲೀಲಾವತಿ, ಆಹಾರವನ್ನೂ ಸೇವಿಸುತ್ತಿಲ್ಲ. ಇತ್ತ ಅಮ್ಮನನ್ನು ಚಿಕ್ಕ ಮಗುವಿನಂತೆ ಆರೈಕೆ ಮಾಡುತ್ತಿದ್ದಾರೆ ಪುತ್ರ ವಿನೋದ್‌ ರಾಜ್.‌ ಹೀಗಿರುವಾಗಲೇ ಇದೇ ಹಿರಿಯ ನಟಿಯನ್ನು ನಟ ದರ್ಶನ್‌ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಲೀಲಾವತಿ ಅವರ ತೋಟದ ಮನೆಗೆ ಆಗಮಿಸಿದ ದರ್ಶನ್‌ ಮತ್ತು ಅವರ ಸಂಗಡಿಗರು, ವಿನೋದ್‌ ರಾಜ್‌ ಅವರನ್ನು ಭೇಟಿಯಾಗಿದ್ದಾರೆ. ಅದಾದ ಬಳಿಕ ಒಂದಷ್ಟು ಹೊತ್ತು ಅವರ ಜತೆಗೆ ಮಾತನಾಡಿದ್ದಾರೆ.

ದರ್ಶನ್‌ ಬರುತ್ತಿದ್ದಂತೆ, ವಿನೋದ್‌ ರಾಜ್‌ ಅಮ್ಮನನ್ನು ಎಬ್ಬಿಸಿ, "ಅಮ್ಮ ನೋಡಿಲ್ಲಿ ನಿನ್ನನ್ನು ನೋಡಲು ಯಾರು ಬಂದಿದ್ದಾರೆ.. ದರ್ಶನ್‌ ಬಂದಿದಾನಮ್ಮ ದರ್ಶನು. ಎದ್ದೇಳು.. ಇಲ್ನೋಡಮ್ಮ ಎಂದಿದ್ದಾರೆ ವಿನೋದ್‌. ಇಲ್ಲ ನಿಮ್ಮನ್ನು ಅಮ್ಮ ಗುರುತಿಸುತ್ತಾರೆ ಎಂದೂ ದರ್ಶನ್‌ ನೋಡಿ ಹೇಳಿದ್ದಾರೆ ವಿನೋದ್.‌ ಕೆಲ ಹೊತ್ತು ಲೀಲಾವತಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ದರ್ಶನ್‌, ತೋಟದ ಮನೆಯನ್ನು ವೀಕ್ಷಿಸಿ ಅಲ್ಲಿಂದ ತೆರಳಿದ್ದಾರೆ.

ಇತ್ತೀಚೆಗೆ ಬಹುಭಾಷಾ ನಟ ಅರ್ಜುನ್ ಸರ್ಜಾ ಹಿರಿಯ ನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ ಅವರ ಯೋಗ ಕ್ಷೇಮ ವಿಚಾರಿಸಿದ್ದರು. ಈ ವೇ ತಾಯಿಯ ಸ್ಥಿತಿ ಕಂಡು ಕಣ್ಣೀರು ಹಾಕಿದ ನಟ ವಿನೋದ್ ರಾಜ್ ಅವರಿಗೆ ಅರ್ಜುನ್ ಸರ್ಜಾ ಧೈರ್ಯ ತುಂಬಿದ್ದರು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.

ಲೀಲಾವತಿ ಒಂದಲ್ಲ ಎರಡಲ್ಲ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಯ ಸಿನಿಮಾಗಳಲ್ಲೂ ತಮ್ಮ ನಟನೆ ಪ್ರದರ್ಶಿಸಿದ್ದಾರೆ. ಕನ್ನಡದಲ್ಲಂತೂ ಬಹುತೇಕ ಎಲ್ಲ ಸ್ಟಾರ್‌ ನಟರ ಜತೆಗೆ ಸಿನಿಮಾ ಮಾಡಿದ್ದಾರೆ. ಹೀಗಿರುವ ಲೀಲಾವತಿಗೀಗ ಬರೋಬ್ಬರಿ 87 ವರ್ಷ ವಯಸ್ಸು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT