ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ಬಿಗ್ ಬಾಸ್ ಒಂದು ಸೈಡ್ ಪ್ರಾಜೆಕ್ಟ್‌ ಅಲ್ಲ, ನನ್ನ ಎರಡನೇ ಮನೆ: ಕಿಚ್ಚ ಸುದೀಪ್

ಪ್ರಸ್ತುತ ಬಹುಭಾಷಾ ಚಿತ್ರ ಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡದ 10ನೇ ಸೀಸನ್‌ನ ನಿರೂಪಕರಾಗಲು ಸಿದ್ಧರಾಗಿದ್ದಾರೆ ಮತ್ತು ಇದು ಅವರ ಕಿರುತೆರೆ ವೃತ್ತಿಜೀವನದ ಮಹತ್ವದ ಮೈಲುಗಲ್ಲು. 

ಪ್ರಸ್ತುತ ಬಹುಭಾಷಾ ಚಿತ್ರ ಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡದ 10ನೇ ಸೀಸನ್‌ನ ನಿರೂಪಕರಾಗಲು ಸಿದ್ಧರಾಗಿದ್ದಾರೆ ಮತ್ತು ಇದು ಅವರ ಕಿರುತೆರೆ ವೃತ್ತಿಜೀವನದ ಮಹತ್ವದ ಮೈಲುಗಲ್ಲು. 

ಅಕ್ಟೋಬರ್ 8 ರಿಂದ ಪ್ರಾರಂಭವಾಗುವ ಈ ಸೀಸನ್ 'ಹ್ಯಾಪಿ ಬಿಗ್ ಬಾಸ್' ಎಂಬ ಆಕರ್ಷಕ ಥೀಮ್ ಅನ್ನು ಹೊಂದಿದೆ.

ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಮತನಾಡಿರುವ ನಟ ಸುದೀಪ್ ಅವರು, “ನಾನು ಬಿಗ್ ಬಾಸ್ ಕನ್ನಡ ಸೀಸನ್ 1ರಿಂದ ನನ್ನ ಪ್ರಯಾಣ ಆರಂಭವಾಯಿತು ಮತ್ತು ಈಗ, ಇದು ಅದ್ಭುತ ದಶಕದ ಸಂಭ್ರಮದಲ್ಲಿದೆ. ಈ ಪ್ರದರ್ಶನವು ನನಗೆ ಕೇವಲ ಒಂದು ಸೈಡ್ ಪ್ರಾಜೆಕ್ಟ್‌ ಅಲ್ಲ. ಇದು ನನ್ನ ಎರಡನೇ ಮನೆ! ಹೊಸ ವ್ಯಕ್ತಿಗಳನ್ನು ಭೇಟಿಯಾಗುವುದು ಮತ್ತು ಮನೆಯಲ್ಲಿ ಅವರ ವೈವಿಧ್ಯಮಯ ಪಾತ್ರಗಳನ್ನು ನೋಡುವುದು ನಿಜಕ್ಕೂ ಸಂತೋಷವಾಗುತ್ತದೆ. ಬಿಗ್ ಬಾಸ್ ಮನೆಯು ಎಂದೆಂದಿಗೂ ಅದ್ದೂರಿಯಾಗಿ, ವಿಶಿಷ್ಟವಾದ ಥೀಮ್ ಮತ್ತು ಅತ್ಯಾಕರ್ಷಕ ಸರ್ಪ್ರೈಸಸ್ ಗಳನ್ನ ಹೊಂದಿರುತ್ತದೆ. ಈ ಸೀಸನ್ ಇನ್ನೂ ಹೆಚ್ಚಿನ ಮನರಂಜನೆ ನೀಡಲಿದೆ ಎಂಬ ಭರವಸೆ ಇದೆ ಎಂದಿದ್ದಾರೆ.

ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ವಿವಿಧ ಹಿನ್ನೆಲೆಯ 16 ವೈವಿಧ್ಯಮಯ ಸ್ಪರ್ಧಿಗಳನ್ನು ಸ್ವಾಗತಿಸುತ್ತಿದೆ. ಈ ಬಾರಿ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಚಿತ್ರದ ಖ್ಯಾತಿಯ ಚಾರ್ಲಿ ನಾಯಿಯು ಬಿಗ್ ಬಾಸ್ ಮನೆ ಸೇರುತ್ತಿದ್ದು, ಹೆಚ್ಚು ಕುತೂಹಲ ಮೂಡಿಸಿದೆ.

ಸಾಕುಪ್ರಾಣಿಗಳ ಭಾಗವಹಿಸುವಿಕೆಗಾಗಿ ಪ್ರಾಣಿ ಮಂಡಳಿಯಿಂದ ಎಲ್ಲಾ ಅಗತ್ಯ ಅನುಮತಿಗಳೊಂದಿಗೆ ಚಾರ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT