ಸಿನಿಮಾ ಸುದ್ದಿ

ದಿವಂಗತ ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ 'ರಾಜಮಾರ್ತಾಂಡ' ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್!

Ramyashree GN

ದಿವಂಗತ ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾವನ್ನು ಅವರ ಸಹೋದರ ಧ್ರುವ ಸರ್ಜಾ ಅವರ ಜನ್ಮದಿನವಾದ ಅಕ್ಟೋಬರ್ 6 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಣ್ಣನ ಅಗಲಿಕೆಯಿಂದ ಕಳೆದ ಮೂರು ವರ್ಷಗಳಿಂದ ಧ್ರುವ ಸರ್ಜಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ, ಈ ಬಾರಿ ಅಣ್ಣನ ಸಿನಿಮಾ 'ರಾಜಮಾರ್ತಾಂಡ'ವನ್ನು ಅಭಿಮಾನಿಗಳೊಂದಿಗೆ ಫಸ್ಟ್​ ಶೋನಲ್ಲಿ ವೀಕ್ಷಿಸುವ ಮೂಲಕ ಆಚರಿಸಲಿದ್ದಾರೆ. 

ನಟನ ಉಪಸ್ಥಿತಿಯಿಲ್ಲದೆಯೇ ಚಿತ್ರ ಬಿಡುಗಡೆಗೆ ಎದುರಾಗುವ ಸವಾಲುಗಳನ್ನು ನಿರ್ದೇಶಕ ನಿರ್ದೇಶಕ ಕೆ ರಾಮ್‌ನಾರಾಯಣ್ ಒಪ್ಪಿಕೊಂಡರು. 'ನಾವು ಈ ಚಿತ್ರದ ಮೂಲಕ ನಟರೊಂದಿಗೆ ಮತ್ತೆ ಸಂಪರ್ಕ ಹೊಂದುತ್ತಿರುವಾಗ, ಜನರು ಕೂಡ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ' ಎಂದರು.

ಚಿತ್ರಕ್ಕೆ ಧ್ರುವ ಸರ್ಜಾ ಅವರೇ ಡಬ್ಬಿಂಗ್ ಮಾಡಿದ್ದಾರೆ. ಚಿರು ಅವರ ಮಾವ ಸುಂದರ್ ರಾಜ್ ಮಾತನಾಡಿ, ರಾಜಮಾರ್ತಾಂಡ ಚಿತ್ರವನ್ನು ಚಿರುಗೆ ಗೌರವಪೂರ್ವಕವಾಗಿ ನೋಡಬೇಕು. ಇದು ಅವರ ಕೊನೆಯ ಚಿತ್ರವಲ್ಲ ಎಂದು ಒತ್ತಿ ಹೇಳಿದ ಅವರು, ಚಿತ್ರವನ್ನು ವೀಕ್ಷಿಸಲು ಎಲ್ಲರೂ ಒಟ್ಟಾಗಿ ಬನ್ನಿ. ಚಿರು ಅವರ ಮಗ ರಾಯನ್ ತನ್ನ ತಂದೆಯ ಕೊನೆಯ ಚಿತ್ರ ಬ್ಲಾಕ್‌ಬಸ್ಟರ್ ಎಂದು ಹೆಮ್ಮೆಯಿಂದ ಹೇಳುವಂತಾಗಬೇಕು ಎಂದು ತಿಳಿಸಿದರು.

ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರಂತಹ ರಾಜಕಾರಣಿಗಳು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. 

'ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಬಾಂಧವ್ಯದಿಂದಾಗಿ ಚಿರು ಅವರನ್ನು 'ಪಾರ್ಟನರ್' ಎಂದು ಸಂಬೋಧಿಸಿದ್ದಾರೆ. ಮೇಲಾಗಿ, ದರ್ಶನ್ ಮತ್ತು ನಿರ್ಮಾಪಕ ಶಿವಕುಮಾರ್ ಅವರ ಬಾಲ್ಯದ ಸ್ನೇಹವು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ' ಎಂದು ನಿರ್ದೇಶಕರು ಹೇಳುತ್ತಾರೆ.

ಚಿರಂಜೀವಿ ಸರ್ಜಾ ಅವರೊಂದಿಗೆ ಈ ಸಿನಿಮಾ 2016ರ ಕೊನೆಯಲ್ಲಿ ಹೇಗೆ ಪ್ರಾರಂಭವಾಯಿತು ಎಂದು ರಾಮ್‌ನಾರಾಯಣ್ ನೆನಪಿಸಿಕೊಳ್ಳುತ್ತಾರೆ. 'ತಮ್ಮ ಸಹೋದರ ಧ್ರುವ ಸರ್ಜಾ ಅಭಿನಯದ ಅದ್ಧೂರಿ, ಭರ್ಜರಿ, ಬಹದ್ದೂರ್ ಚಿತ್ರಗಳಿಂದ ಸ್ಪೂರ್ತಿ ಪಡೆದಿದ್ದ ಚಿರು, ರಾಜಮಾರ್ತಾಂಡ ಸಿನಿಮಾದಲ್ಲಿಯೂ ಪ್ರಭಾವಸಾಲಿ ಡೈಲಾಗ್‌ಗಳು ಇರಬೇಕೆಂದು ಬಯಸಿದ್ದರು. ಸಂಭಾಷಣೆಗಳನ್ನು ಚಿರಂಜೀವಿ ಅವರು ಉತ್ತಮವಾಗಿ ಅಭ್ಯಾಸ ಮಾಡಿದರು ಮತ್ತು ಎರಡು ಪುಟಗಳ ಡೈಲಾಗ್‌ ಅನ್ನು ಸರಾಗವಾಗಿ ಒಂದೇ ಟೇಕ್‌ನಲ್ಲಿ ಹೇಳಿದರು' ಎಂದರು.

ಆದಾಗ್ಯೂ, ಚಿರು ಅವರ ಆಕಾಲಿಕ ನಿಧನದಿಂದಾಗಿ ಈ ಡೈಲಾಗ್‌ಗಳನ್ನು ಮತ್ತೆ ಧ್ರುವ ಸರ್ಜಾ ಅವರೇ ನೀಡುವಂತಾಯಿತು. ಅಂತಿಮವಾಗಿ ಚಿತ್ರಕ್ಕೆ ಮೌಲ್ಯವನ್ನು ಹೆಚ್ಚಿಸಿತು ಎಂದು ಹೇಳುವ ರಾಮ್‌ನಾರಾಯಣ್, ಒಂದು ದೃಶ್ಯದಲ್ಲಿ ಚಿರಂಜೀವಿ ಅವರ ಮೂಲ ಧ್ವನಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಅದನ್ನು ಟೀಸರ್ ಡಬ್ಬಿಂಗ್ ಸಮಯದಲ್ಲಿ ರೆಕಾರ್ಡ್ ಮಾಡಲಾಗಿತ್ತು. ಚಿರಂಜೀವಿ ಅವರ ಮಗ ರಾಯನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ಹೇಳಿದರು.

ಮಾದೇಶ್ವರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶಿವಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ದೀಪ್ತಿ ಸತಿ ನಾಯಕಿಯಾಗಿ ಮತ್ತು ಭಜರಂಗಿ ಲೋಕಿ ಪ್ರತಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಚಿತ್ರದ ತಾರಾಗಣದಲ್ಲಿ ಮೇಘಶ್ರೀ, ತ್ರಿವೇಣಿ, ವಿನೀತ್‌ಕುಮಾರ್, ಚಿಕ್ಕಣ್ಣ, ದೇವರಾಜ್, ಸುಮಿತ್ರಾ, ಶಂಕರ್ ಅಶ್ವತ್ಥ್, ಸಂಗೀತ, ಶಿವರಾಂ ಮತ್ತು ಉಮೇಶ್ ಕಾರಂಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಾಜಮಾರ್ತಾಂಡ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಧರ್ಮ ವಿಶ್ ಅವರ ಹಿನ್ನೆಲೆ ಸಂಗೀತ, ಜಬೇಜ್ ಕೆ ಗಣೇಶ್ ಅವರ ಛಾಯಾಗ್ರಹಣವಿದೆ.

SCROLL FOR NEXT