ಡಾರ್ಲಿಂಗ್ ಕೃಷ್ಣ 
ಸಿನಿಮಾ ಸುದ್ದಿ

'ಹಲಗಲಿ' ಮೂಲಕ ಪೌರಾಣಿಕ ಸಿನಿಮಾದತ್ತ ಹೊರಳಿದ ಡಾರ್ಲಿಂಗ್ ಕೃಷ್ಣ

ಲವ್ ಮಾಕ್‌ಟೇಲ್ ಮತ್ತು ಕೌಸಲ್ಯ ಸುಪ್ರಜಾ ರಾಮದಂತಹ ಪ್ರಣಯ ಹಾಗೂ ಕೌಟುಂಬಿಕ ಸಿನಿಮಾಗಳಿಗೆ ಹೆಸರುವಾಸಿಯಾದ ಡಾರ್ಲಿಂಗ್ ಕೃಷ್ಣ, 'ಹಲಗಲಿ' ಎಂಬ ಚಿತ್ರದ ಮೂಲಕ ಪೌರಾಣಿಕ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ಲವ್ ಮಾಕ್‌ಟೇಲ್ ಮತ್ತು ಕೌಸಲ್ಯ ಸುಪ್ರಜಾ ರಾಮದಂತಹ ಪ್ರಣಯ ಹಾಗೂ ಕೌಟುಂಬಿಕ ಸಿನಿಮಾಗಳಿಗೆ ಹೆಸರುವಾಸಿಯಾದ ಡಾರ್ಲಿಂಗ್ ಕೃಷ್ಣ, 'ಹಲಗಲಿ' ಎಂಬ ಚಿತ್ರದ ಮೂಲಕ ಪೌರಾಣಿಕ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ಸುಕೇಶ್ ನಾಯಕ್ ನಿರ್ದೇಶನದ ಚಿತ್ರವು ಐತಿಹಾಸಿಕ ವಿಷಯಗಳ ಬಗ್ಗೆ ಮಾಹಿತಿ ನೀಡಲಿದೆ.  ಸ್ವಾತಂತ್ರ್ಯ ಪೂರ್ವದ ಅವಧಿಯಲ್ಲಿ ಅಂದರೆ ನಿರ್ದಿಷ್ಟವಾಗಿ 1857 ರಲ್ಲಿ ಬ್ರಿಟಿಷರ ಕಾಲದಲ್ಲಿ ನಡೆದ ಕಥೆ ಇದಾಗಲಿದೆ.

2018 ರಲ್ಲಿ ತೆರೆ ಕಂಡ ಕೃಷ್ಣ ತುಳಸಿ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಸುಕೇಶ್ ನಾಯಕ್ ಈಗ ತಮ್ಮ ಎರಡನೇ ಸಿನಿಮಾ ಡೈರೆಕ್ಷನ್ ಗೆ ಮುಂದಾಗಿದ್ದಾರೆ.

1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಸಂದರ್ಭದಲ್ಲಿ, ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಸಣ್ಣ ಹಳ್ಳಿಯಾದ ಹಲಗಲಿಯ ಕೆಚ್ಚೆದೆಯ ನಿವಾಸಿಗಳು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದರು. ಆ ಅವಧಿಯಲ್ಲಿ ನಡೆದ ವಿವಿಧ ಸಾಹಸಗಳ ನಡುವೆ, ಒಂದು ಗಮನಾರ್ಹ ಘಟನೆ ಎದ್ದು ಕಾಣುತ್ತದೆ.

ಬ್ರಿಟಿಷರು ಜಾರಿಗೆ ತಂದಿದ್ದ ನಿಶಸ್ತ್ರೀಕರಣದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಹಲಗಲಿ ಬೇಡರು ಆಂಗ್ಲರ ವಿರುದ್ಧ ನೇರ ಯುದ್ಧಕ್ಕೆ ಇಳಿದಿದ್ದರು. ಹುಟ್ಟು ವೀರರಾಗಿದ್ದ ಹಲಗಲಿ ಬೇಡರನ್ನು ಸೋಲಿಸುವುದು ಬ್ರಿಟಿಷರಿಗೆ ಸುಲಭವಾಗಿರಲಿಲ್ಲ. ಬೇಡ ಸಮುದಾಯವು ಬ್ರಿಟಿಷರನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು ಆಯುಧಗಳಿಗೆ ಹೆಸರುವಾಸಿಯಾಗಿದ್ದರು. ಆಯುಧಗಳು ಅವರಿಗೆ ಪೂಜೆಯ ಸಂಕೇತಗಳಾಗಿದ್ದವು.  ನನ್ನ ಕಥೆಯು ಈ ಬೇಟೆಗಾರ ಸಮುದಾಯವನ್ನು ಆಧರಿಸಿದೆ, ನೈಜ ಘಟನೆಗಳನ್ನು ಕಾಲ್ಪನಿಕ ಅಂಶಗಳೊಂದಿಗೆ ಸಂಯೋಜಿಸಲಾಗಿದೆ ಎಂದು ಸುಕೇಶ್ ಹೇಳಿದ್ದಾರೆ. ಈ ಚಿತ್ರಕಥೆ ಬರೆಯಲು ಎರಡೂವರೆ ವರ್ಷಗಳನ್ನು ತೆಗೆದುಕೊಂಡಿದ್ದಾರೆ.

ನಿರ್ದೇಶಕ ಸುಕೇಶ್ ಸದ್ಯ ಉತ್ತರ ಕರ್ನಾಟಕದ ಲೊಕೇಶನ್ ಗಳನ್ನು ಗುರುತಿಸುತ್ತಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭಿಸುವ ಪ್ಲಾನ್ ಹಾಕಿಕೊಂಡಿದ್ದಾರೆ. "ನಾವು ಬಾಗಲಕೋಟೆ ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ಅಂತಿಮಗೊಳಿಸುತ್ತಿದ್ದೇವೆ, ಅಲ್ಲಿ ನಾವು ವ್ಯಾಪಕವಾದ ಸೆಟ್‌ಗಳನ್ನು ರಚಿಸುತ್ತೇವೆ ಎಂದಿದ್ದಾರೆ.

ಕಲ್ಯಾಣ್ ಚಕ್ರವರ್ತಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತೆಲುಗು ಚಲನಚಿತ್ರ ನಿರ್ಮಿಸಿದ ನಂತರ ಕನ್ನಡ ಚಲನಚಿತ್ರೋದ್ಯಮದಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಐತಿಹಾಸಿಕ ಸಿನಿಮಾಗಳನ್ನು ಎರಡು ಭಾಗಗಳಲ್ಲಿ  ತರಲು  ಯೋಜಿಸಲಾಗಿದೆ, ಇದು ಕೃಷ್ಣ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.

ಈ ಸಿನಿಮಾದ ಪಾತ್ರಕ್ಕಾಗಿ ತಮ್ಮ ದೇಹವನ್ನು ಪರಿವರ್ತಿಸುವತ್ತ ಗಮನಹರಿಸಿದ್ದಾರೆ, ಇದರಲ್ಲಿ ಕುದುರೆ ಸವಾರಿ ಕಲಿಯುವುದು ಮತ್ತು ಬೇಟೆಗಾರಂತೆ ಸ್ಟಂಟ್‌ ಕಲಿಯುತ್ತಿದ್ದಾರೆ, ಕೃಷ್ಣನ ಪಾತ್ರದ ಕುರಿತು ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದಿದ್ದಾರೆ.

ಕಲಾವಿದರ ಆಯ್ಕೆ ನಡೆಯುತ್ತಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರವಿ ಕುಮಾರ್ ಸನಾ ಛಾಯಾಗ್ರಾಹಣವಿದೆ.  ಶುಗರ್ ಫ್ಯಾಕ್ಟರಿ ಬಿಡುಗಡೆಗಾಗಿ ಎದುರು ನೋಡುತ್ತಿರುವ ಕೃಷ್ಣ ಅವರು ತಮ್ಮ ಮುಂದಿನ ನಿರ್ದೇಶನದ ಲವ್ ಮಾಕ್‌ಟೇಲ್ 3 ನಲ್ಲಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರದಿಂದ MGNREGA ಯೋಜನೆ 'ಬುಲ್ಡೋಜ್'; 'ಕರಾಳ ಕಾನೂನಿನ' ವಿರುದ್ಧ ಹೋರಾಡಲು ಸೋನಿಯಾ ಪ್ರತಿಜ್ಞೆ

ಬಾಗಲಕೋಟೆ: ಬುದ್ಧಿಮಾಂದ್ಯ ಮಕ್ಕಳ ಮೇಲೆ ಕ್ರೌರ್ಯ; ಕಣ್ಣಿಗೆ ಖಾರದಪುಡಿ ಎರಚಿ, ಬೆಲ್ಟ್, ಪೈಪ್‌ನಿಂದ ಹೊಡೆದು ಶಿಕ್ಷಕರಿಂದ ಹಿಂಸೆ!

ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ವ್ಯವಸಾಯ: 'ಭೂಮಿ'ಯನ್ನು ಬಂಜೆ ಮಾಡಬಾರದು- ಸಿಎಂ ಸಿದ್ದರಾಮಯ್ಯ

ಅಗಸ್ಟಾವೆಸ್ಟ್‌ಲ್ಯಾಂಡ್: ಇಡಿ ಪ್ರಕರಣದಲ್ಲಿ ಕ್ರಿಶ್ಚಿಯನ್ ಮೈಕೆಲ್ ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ

ಟಿ20 ವಿಶ್ವಕಪ್ 2026 ನಿಂದ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?: ಅಜಿತ್ ಅಗರ್ಕರ್ ಕೊಟ್ರು ಕಾರಣ

SCROLL FOR NEXT