ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ 
ಸಿನಿಮಾ ಸುದ್ದಿ

ನಿತೇಶ್ ತಿವಾರಿ 'ರಾಮಾಯಣ'ದಲ್ಲಿ ಯಶ್; ರಾವಣ ಪಾತ್ರಕ್ಕಾಗಿ ದುಬಾರಿ ಸಂಭಾವನೆ!

ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಯಶಸ್ಸಿನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಖ್ಯಾತಿಗೊಂಡಿರುವ ರಾಕಿಂಗ್ ಸ್ಟಾರ್ ಯಶ್, ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಯಶಸ್ಸಿನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಖ್ಯಾತಿಗೊಂಡಿರುವ ರಾಕಿಂಗ್ ಸ್ಟಾರ್ ಯಶ್, ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೆಜಿಎಫ್ 2 ನಂತರ ಸುಮಾರು ಒಂದೂವರೆ ವರ್ಷಗಳಿಂದ ಯಾವುದೇ ಹೊಸ ಚಿತ್ರ ಘೋಷಿಸದೆ ಕುಟುಂಬಕ್ಕೆ ಟೈಮ್ ಮೀಸಲಿಟ್ಟಿದ್ದ ಯಶ್ ಇದೀಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಹೌದು. ನಿತೇಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷಿಯ ರಾಮಾಯಣ ಸಿನಿಮಾದಲ್ಲಿ ಅಭಿನಯಿಸಲು ಯಶ್ ಸಹಿ ಹಾಕಿದ್ದು, ಬರೋಬ್ಬರಿ ರೂ. 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ರಾಮಾಯಣ ಪ್ಯಾನ್‌ ಇಂಡಿಯಾ ಚಿತ್ರವನ್ನು ನಿತೇಶ್‌ ತಿವಾರಿ ನಿರ್ದೇಶನ ಮಾಡುತ್ತಿದ್ದು ರಾಮನ ಪಾತ್ರದಲ್ಲಿ ರಣಬೀರ್‌ ಕಪೂರ್‌ ಹಾಗೂ ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.

ರಾವಣನ ಪಾತ್ರದಲ್ಲಿ ಯಶ್‌ ಫೈನಲ್‌ ಆಗಿದ್ದು. ಮುಂದಿನ ವರ್ಷದಿಂದ ಫೆಬ್ರವರಿಯಿಂದ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಕೆಜಿಎಫ್‌ ಚಾಪ್ಟರ್ 3 ಬರುವುದು ಈಗಾಗಲೇ ನಿಶ್ಚಿತವಾಗಿದ್ದು, ಸಮಯ ಹೊಂದಿಸಿಕೊಂಡು ಬಾಲಿವುಡ್ ನಲ್ಲಿ ಅಭಿನಯಿಸಲು ಅವರು ನಿರ್ಧರಿಸಿದ್ದು, ಕಾಲ್ ಶೀಟ್ ಅನುಗುಣವಾಗಿ ರಾವಣನ ಪಾತ್ರಕ್ಕಾಗಿ ರೂ. 100 ರಿಂದ 150 ಕೋಟಿಗೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ  ಕೆಜಿಎಫ್ ಚಾಪ್ಟರ್ 3  2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕೆಜಿಎಫ್‌ನಲ್ಲಿನ ಲುಕ್‌ಗೆ ಹೋಲಿಸಿದರೆ ರಾಮಾಯಣದಲ್ಲಿ ಅವರು ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಲುಕ್ ಗೆ ತಕ್ಕಂತೆ ದೇಹವನ್ನು ಹುರಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

Video: 'ನಿಂಗಿದು ಬೇಕಿತ್ತಾ ಮಗನೇ..': ಬಾಲ್ ಕೊಡಲು ಹೋಗಿ ರನೌಟ್ ಆದ ಪಾಕ್ ಮಾಜಿ ನಾಯಕ, ಕೆರಳಿ ಕೆಂಡವಾದ Salman Agha

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

Khamenei ಸತ್ತ... ಉತ್ತರಾಧಿಕಾರಿ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಇದು ಇರಾನ್ ಗೇ ಗೊತ್ತಿಲ್ಲ!

SCROLL FOR NEXT