ವಿವೇಕ್ ರಂಜನ್ ಅಗ್ನಿಹೋತ್ರಿ 
ಸಿನಿಮಾ ಸುದ್ದಿ

ಡಾ. ಎಸ್ಎಲ್ ಭೈರಪ್ಪ ಅವರ 'ಪರ್ವ'ಕ್ಕೆ ನ್ಯಾಯ ಸಲ್ಲಿಸುವ ಗುರಿ ಹೊಂದಿದ್ದೇನೆ: ವಿವೇಕ್ ರಂಜನ್ ಅಗ್ನಿಹೋತ್ರಿ

ದಿ ಕಾಶ್ಮೀರ್ ಫೈಲ್ಸ್, ದಿ ತಾಷ್ಕೆಂಟ್ ಫೈಲ್ಸ್ ಮತ್ತು ದಿ ವ್ಯಾಕ್ಸಿನ್ ವಾರ್‌ನಂತಹ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಕನ್ನಡದ ಪ್ರಸಿದ್ಧ ಲೇಖಕ ಡಾ. ಎಸ್‌ಎಲ್ ಭೈರಪ್ಪ ಅವರ ಪರ್ವ ಕಾದಂಬರಿಯನ್ನು ಸಿನಿಮಾವನ್ನಾಗಿ ತೆರೆಗೆ ತರಲು ಸಿದ್ಧರಾಗಿದ್ದಾರೆ. 

ದಿ ಕಾಶ್ಮೀರ್ ಫೈಲ್ಸ್, ದಿ ತಾಷ್ಕೆಂಟ್ ಫೈಲ್ಸ್ ಮತ್ತು ದಿ ವ್ಯಾಕ್ಸಿನ್ ವಾರ್‌ನಂತಹ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಕನ್ನಡದ ಪ್ರಸಿದ್ಧ ಲೇಖಕ ಡಾ. ಎಸ್‌ಎಲ್ ಭೈರಪ್ಪ ಅವರ ಪರ್ವ ಕಾದಂಬರಿಯನ್ನು ಸಿನಿಮಾವನ್ನಾಗಿ ತೆರೆಗೆ ತರಲು ಸಿದ್ಧರಾಗಿದ್ದಾರೆ. ಕಳೆದ ವರ್ಷದಿಂದ ತಯಾರಿಯಲ್ಲಿರುವ ಈ ಚಿತ್ರಕ್ಕೆ ಪ್ರಕಾಶ್ ಬೆಳವಾಡಿ ಸಹ ಬರಹಗಾರರಾಗಿದ್ದಾರೆ.

ಚಿತ್ರಕ್ಕೆ ಪರ್ವ- ಧರ್ಮದ ಮಹಾಕಾವ್ಯ (Parva - An epic tale of Dharma) ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರವು ಮೂರು ಭಾಗಗಳಲ್ಲಿ ತಯಾರಾಗಲಿದೆ. ಪರ್ವ ಕನ್ನಡ-ಹಿಂದಿ ದ್ವಿಭಾಷಾ ಚಿತ್ರವಾಗಿದ್ದು, ಇದನ್ನು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಕೂಡ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಪಲ್ಲವಿ ಜೋಶಿಯವರ ಐ ಆಮ್ ಬುದ್ಧ ಫಿಲ್ಮ್ಸ್ ಬೆಂಬಲದೊಂದಿಗೆ, ಚಿತ್ರದ ಅಧಿಕೃತ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಡಾ. ಎಸ್ಎಲ್ ಭೈರಪ್ಪ ಅವರು ಭಾಗವಹಿಸಿದ್ದರು.

ಭೈರಪ್ಪನ ಮಹಾಭಾರತದ ದರ್ಶನಕ್ಕೆ ಜೀವ ತುಂಬುವ ಬಗ್ಗೆ ಮಾತನಾಡುವ ವಿವೇಕ್ ಅಗ್ನಿಹೋತ್ರಿ, 'ಮಹಾಕಾವ್ಯಗಳಂತಹ ಶ್ರೇಷ್ಠ ಕಥೆಗಳಿಗೆ ಯಾವುದೇ ಸ್ಫೂರ್ತಿಯ ಅಗತ್ಯವಿಲ್ಲ ಎಂದು ನಾನು ನಂಬುತ್ತೇನೆ. ಈ ಯೋಜನೆಯು ಕಾರ್ಯರೂಪಕ್ಕೆ ಬರುವುದನ್ನು ನೋಡಲು ನಾನು ಯಾವಾಗಲೂ ಬಯಸುತ್ತೇನೆ' ಎನ್ನುತ್ತಾರೆ. 

ಚಿತ್ರ ನಿರ್ಮಾಪಕರು ಪರ್ವ ಚಿತ್ರದಲ್ಲಿ ಕನ್ನಡದ ನಟರನ್ನೇ ನಟಿಸುವ ಗುರಿಯನ್ನು ಹೊಂದಿದ್ದಾರೆ. ವಿಶೇಷವಾಗಿ ನಟ ಯಶ್ ಅವರ ಪ್ರಮುಖ ಆಯ್ಕೆಗಳಲ್ಲಿ ಒಬ್ಬರಾಗಿದ್ದಾರೆ.

'ಪರ್ವವು ಆಧುನಿಕ ಕ್ಲಾಸಿಕ್ ಆಗಿದ್ದು, ಅದು ಇತಿಹಾಸ, ತರ್ಕ ಮತ್ತು ಮಾನವ ನಡವಳಿಕೆಯ ಬಗ್ಗೆ ನಿಜವನ್ನೇ ಹೇಳುತ್ತದೆ. 'ಈ ಸಿನಿಮಾದಲ್ಲಿ ಮಹಾಭಾರತದ ಸಾರವನ್ನು ನಿಷ್ಠೆಯಿಂದ ಸಂರಕ್ಷಿಸಲಾಗಿದೆ. ಇದು ಪ್ರೇಕ್ಷಕರಿಗೆ ಯಾವುದೇ ನಿರಾಸೆ ಉಂಟುಮಾಡುವುದಿಲ್ಲ' ವಿವೇಕ್ ಅಗ್ನಿಹೋತ್ರಿ ಭರವಸೆ ನೀಡಿದ್ದಾರೆ.

'ಕಥೆಗೆ ನ್ಯಾಯ ಒದಗಿಸುವ ಗುರಿಯನ್ನು ನಾನು ಹೊಂದಿದ್ದೇನೆ. ಭಾಷೆ ಮತ್ತು ಸಿದ್ಧಾಂತಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ನಾನು ಬಯಸುತ್ತೇನೆ' ಎನ್ನುತ್ತಾರೆ ನಿರ್ದೇಶಕರು. 

ಈ ಯೋಜನೆಯ ತಯಾರಿ ಕಾರ್ಯವು ಒಂದು ವರ್ಷದ ಹಿಂದೆ ಪ್ರಾರಂಭವಾಯಿತು ಮತ್ತು ಚಿತ್ರ ಸೆಟ್ಟೇರುವ ಮುನ್ನವೇ ವ್ಯಾಪಕ ಸಂಶೋಧನೆ ನಡೆಸಲು ಇನ್ನೊಂದು ವರ್ಷ ತೆಗೆದುಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT