ಪುಣೆ: ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್ ಟಿಐಐ )ದ ಅಧ್ಯಕ್ಷರಾಗಿ ಮತ್ತು ಅದರ ಆಡಳಿತ ಮಂಡಳಿಯ ಚೇರಮನ್ ಆಗಿ ನಟ-ನಿರ್ಮಾಪಕ ಆರ್ ಮಾಧವನ್ ಅವರು ಶುಕ್ರವಾರ ನಾಮನಿರ್ದೇಶನಗೊಂಡಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಹಿಂದೆ ಟ್ವೀಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದು, ಮಾಧವನ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಇದನ್ನು ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಲ್ಲು ಅರ್ಜುನ್ ಅತ್ಯುತ್ತಮ ನಟ, ‘ಚಾರ್ಲಿ 777’ ಅತ್ಯುತ್ತಮ ಪ್ರಾದೇಶಿಕ ಚಿತ್ರ
"ಎಫ್ ಟಿಐಐ ಅಧ್ಯಕ್ಷರಾಗಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ಮಾಧವನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅಪಾರ ಅನುಭವ ಮತ್ತು ಬಲವಾದ ನೈತಿಕತೆಯು ಈ ಸಂಸ್ಥೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ಪಾಸಿಟಿವ್ ಬದಲಾವಣೆಗಳನ್ನು ತರುತ್ತದೆ ಮತ್ತು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ನನಗೆ ಖಾತ್ರಿಯಿದೆ. ನಿಮಗೆ ನನ್ನ ಶುಭಾಶಯಗಳು" ಎಂದು ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.
ಇನ್ನು ತಮಗೆ ಶುಭಾಶಯ ಕೋರಿದ ಸಚಿವರಿಗೆ ಧನ್ಯವಾದ ಹೇಳಿದ ಮಾಧವನ್ ಅವರು, "ಅನುರಾಗ್ ಠಾಕೂರ್ ಜೀ ಅವರಿಗೆ ತುಂಬಾ ಧನ್ಯವಾದಗಳು. ಎಲ್ಲಾ ನಿರೀಕ್ಷೆಗಳನ್ನು ಪೂರೈಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.