ಸಿನಿಮಾ ಸುದ್ದಿ

ಹೆಣ್ಣಿನ ಮಾದರಿಯ ಟ್ರೋಫಿ ಪುರುಷರನ್ನು ಪ್ರಚೋದಿಸುತ್ತದೆ: ನಟ ಅಲೆನ್ಸಿಯರ್ ಹೇಳಿಕೆ; ತೀವ್ರ ಟೀಕೆಗೆ ಗುರಿ

Shilpa D

ಮಲಯಾಳಂ ನಟ ಅಲೆನ್ಸಿಯರ್ ಲೋಪೆಜ್ ಅವರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪ್ರತಿಮೆಯ ಬಗ್ಗೆ ಸ್ತ್ರೀದ್ವೇಷದ ಕಾಮೆಂಟ್‌ ಮಾಡಿದ್ದ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಅಪ್ಪನ್' (2022) ಚಿತ್ರದಲ್ಲಿನ ಅಭಿನಯಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಸ್ವೀಕರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಪ್ರಶಸ್ತಿ ಸ್ವೀಕರಿಸಲು ವೇದಿಕೆಯ ಮೇಲೆ ನಟ ಅಲೆನ್ಸಿಯರ್ ಲೋಪೆಜ್, ಹೆಣ್ಣಿನ ಮಾದರಿಯ ಟ್ರೋಫಿ ಬಗ್ಗೆ ಕಾಮೆಂಟ್ ಮಾಡಿದರು. ಇಂತಹ ಟ್ರೋಫಿಗಳು ಪುರುಷರಿಗೆ ಪ್ರಚೋದನೆ ನೀಡುತ್ತದೆ ಎಂದು ಹೇಳಿದರು.

53 ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಗುರುವಾರ, ಸೆಪ್ಟೆಂಬರ್ 14 ರಂದು ತಿರುವನಂತಪುರಂನ ನಿಶಾಗಂಧಿ ಆಡಿಟೋರಿಯಂನಲ್ಲಿ ನಡೆಯಿತು. "ನನ್ನದೊಂದು ವಿನಂತಿ ಇದೆ. ಮಹಿಳೆಯ ಮಾದರಿಯಲ್ಲಿ ಈ ಪ್ರತಿಮೆಯನ್ನು ಪ್ರಸ್ತುತಪಡಿಸುವ ಮೂಲಕ ನಮ್ಮನ್ನು ಪ್ರಚೋದಿಸಬೇಡಿ. ಪುರುಷ ಶಕ್ತಿಯ ಪ್ರತೀಕವಾದ ಮುಖ್ಯಮಂತ್ರಿ ನಮ್ಮಲ್ಲಿದ್ದಾರೆ. ಹಾಗಾಗಿ ಮನುಷ್ಯನ ಶಕ್ತಿಯನ್ನು ಪ್ರತಿಬಿಂಬಿಸುವ ಪ್ರತಿಮೆಯನ್ನು ನಮಗೆ ನೀಡಬೇಕು,'' ಎಂದು ಅಲೆನ್ಸಿಯರ್ ಲೋಪೆಜ್ ಹೇಳಿದರು.

ಅಲೆನ್ಸಿಯರ್ ಲೋಪೆಜ್ ಅವರ ಹೇಳಿಕೆ ಬಗ್ಗೆ ಸಾಮಾಜಿಕ ಮಾಧ್ಯಮ ಮತ್ತು ವಾಹಿನಿಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಅನೇಕರು ಇದನ್ನು ಲೈಂಗಿಕ ದೌರ್ಜನ್ಯ ಎನ್ನುವಂತೆ ಕರೆದಿದ್ದಾರೆ. ಈ ಕೂಡಲೇ ಸರ್ಕಾರ ಅವರಿಗೆ ಕೊಟ್ಟಿರುವ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.

SCROLL FOR NEXT