ವರಲಕ್ಷ್ಮಿ ಶರತ್ ಕುಮಾರ್, ಸುದೀಪ್ 
ಸಿನಿಮಾ ಸುದ್ದಿ

ಸುದೀಪ್ ನಟನೆಯ 'ಮ್ಯಾಕ್ಸ್' ನಲ್ಲಿ 'ಮಾಣಿಕ್ಯ' ನಟಿ ವರಲಕ್ಷ್ಮಿ ಶರತ್‌ಕುಮಾರ್?

ಕಿಚ್ಚ ಸುದೀಪ್ ಪ್ರಸ್ತುತ ವಿಜಯ್ ಕಾರ್ತಿಕೇಯನ್ ಚೊಚ್ಚಲ ನಿರ್ದೇಶನದ ಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ, ಮತ್ತು ಅನಿರುದ್ಧ್ ಭಟ್ ಸೇರಿದಂತೆ ಹಲವು ಕಲಾವಿದರ ಬಗ್ಗೆ ಮಾಹಿತಿ ದೊರೆತಿದೆ.

ಕಿಚ್ಚ ಸುದೀಪ್ ಪ್ರಸ್ತುತ ವಿಜಯ್ ಕಾರ್ತಿಕೇಯನ್ ಚೊಚ್ಚಲ ನಿರ್ದೇಶನದ ಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ, ಮತ್ತು ಅನಿರುದ್ಧ್ ಭಟ್ ಸೇರಿದಂತೆ ಹಲವು ಕಲಾವಿದರ ಬಗ್ಗೆ ಮಾಹಿತಿ ದೊರೆತಿದೆ.

ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ವರಲಕ್ಷ್ಮಿ ಶರತ್‌ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈಗಾಗಲೇ ನಿರ್ಣಾಯಕ ದೃಶ್ಯಗಳ ಚಿತ್ರೀಕರಣವನ್ನು ಮುಗಿಸಿದ್ದಾರೆ, ಆದರೆ ಅವರು ನಟಿಸುತ್ತಿರುವ ಬಗ್ಗೆ ಕೆಲ ದಿನಗಳ ನಂತರ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಸುದೀಪ್ ಮತ್ತು ವರಲಕ್ಷ್ಮಿ ಈ ಹಿಂದೆ ಮಾಣಿಕ್ಯದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು, ಕನ್ನಡದ  ಮೊದಲ ಚಿತ್ರದಲ್ಲಿ ವರಲಕ್ಷ್ಮಿ ನಟಿಸಿದ್ದರು. ಮ್ಯಾಕ್ಸ್ ನಲ್ಲಿಸುದೀಪ್ ಜೊತೆ ಎರಡನೇ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ಹುಟ್ಟುಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ಮೂಲಕ ಮ್ಯಾಕ್ಸ್ ನಿರ್ದೇಶಕರು ಕುತೂಹಲ ಕೆರಳಿಸಿದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್

ವಿ ಕ್ರಿಯೇಷನ್ಸ್ ನಿರ್ಮಾಣದ ಮ್ಯಾಕ್ಸ್ ಚಿತ್ರಕ್ಕೆ ಶಿವಕುಮಾರ್ ಕಲಾ ನಿರ್ದೇಶಕರಾಗಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನವಿದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಸುದೀಪ್, ಮ್ಯಾಕ್ಸ್‌ ಸಿನಿಮಾ ಜೊತೆಗೆ, ಬಿಗ್ ಬಾಸ್ ಸೀಸನ್ 10  ಕನ್ನಡದಲ್ಲಿ ಹೋಸ್ಟ್ ಮಾಡಲು ತಯಾರಿ ನಡೆಸುತ್ತಿದ್ದು, ತಂಡವು ಇತ್ತೀಚೆಗೆ ಪ್ರೋಮೋವನ್ನು ಬಹಿರಂಗಪಡಿಸಿದೆ.

ಇದರ ಹೊರತಾಗಿ, ಬಹುಭಾಷಾ ನಟ ನಿರ್ದೇಶಕ ಚೇರನ್ ಅವರೊಂದಿಗೆ, ನಿರ್ದೇಶಕ ಅನುಪ್ ಭಂಡಾರಿ ಅವರೊಂದಿಗೆ  ಬಿಲ್ಲಾ ರಂಗ ಬಾಷಾ ಸಿನಿಮಾ ಸಹ ಮಾಡುತ್ತಿದ್ದಾರೆ, ಇದರ ಜೊತೆಗೆ KRG ಸ್ಟುಡಿಯೋಸ್‌ ನಿರ್ಮಾಣದ ಸಿನಿಮಾಗೆ ಕಿಚ್ಚ ನಿರ್ದೇಶನ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT