ಜ್ಯೋತಿ ರೈ 
ಸಿನಿಮಾ ಸುದ್ದಿ

ತೆಲುಗು ನಿರ್ದೇಶಕನ ಜೊತೆ ಎರಡನೇ ವಿವಾಹಕ್ಕೆ ಕನ್ನಡ ನಟಿ ಜ್ಯೋತಿ ರೈ ಸಿದ್ದ: ಎಂಗೇಜ್ ಮೆಂಟ್ ಪೋಸ್ಟ್ ವೈರಲ್

ಕನ್ನಡ ಕಿರುತೆರೆ ನಟಿ ಜ್ಯೋತಿರೈ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಕನ್ನಡ ಕಿರುತೆರೆ ನಟಿ ಜ್ಯೋತಿರೈ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಗುಡ್‌ ನ್ಯೂಸ್ ಕೊಡುವುದಾಗಿ ಹೇಳಿದ್ದ ಚೆಲುವೆ ಇದೀಗ 2ನೇ ಮದುವೆಗೆ ಸಿದ್ಧವಾಗಿದ್ದಾರೆ ಎನ್ನಲಾಗ್ತಿದೆ.

ತೆಲುಗು ನಿರ್ದೇಶಕ ಸುಕು ಪೂರ್ವಜ್‌ ಜೊತೆ ಎಂಗೇಜ್‌ಮೆಂಟ್‌ ಆಗಿದೆ ಎಂದು ಜ್ಯೋತಿ ಬರೆದುಕೊಂಡಿದ್ದಾರೆ. ಆದರೆ ಜ್ಯೋತಿ ರೈ ಕುತ್ತಿಗೆಯಲ್ಲಿ ಕರಿಮಣಿ ಕಾಣಿಸುತ್ತಿದ್ದು ಈಗಾಗಲೇ ಅವರಿಗೆ ಮದುವೆ ಆಗಿದೆ, ಬಹುಶ: ಇದು ಹಳೆಯ ಫೋಟೋಗಳಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಕಿರುತೆರೆ ನಟಿ ಜ್ಯೋತಿ ರೈ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಜ್ಯೋತಿ ರೈ ಈಗ ನಾಯಕಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇನ್ನೆಂದಿಗೂ ನಾನು ಪೋಷಕ ಪಾತ್ರ ಮಾಡುವುದಿಲ್ಲ ಎಂದಿದ್ದಾರೆ. ಜೊತೆಗೆ ಹಾಟ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಕೆಲವು ದಿನಗಳಿಂದ ಸುದ್ದಿಯೇ ಇಲ್ಲದ ಜ್ಯೋತಿ ರೈ ಇದ್ದಕ್ಕಿದ್ದಂತೆ ಹಾಟ್‌ ಫೋಟೋಗಳ ಮೂಲಕ ಬಹಳ ಸುದ್ದಿಯಾಗಿದ್ದರು. ಜ್ಯೋತಿ ರೈ ಇದ್ದಕ್ಕಿದ್ದಂತೆ ಹೀಗೆ ಬದಲಾಗಿದ್ದು ಎಲ್ಲರಿಗೂ ಆಶ್ಚರ್ಯ ಉಂಟಾಗಿತ್ತು. ಅಲ್ಲದೆ ಜ್ಯೋತಿ ರೈ ಪದೇ ಪದೆ ಯುವಕನೊಬ್ಬನೊಂದಿಗೆ ಇರುವ ಫೋಟೋ ನೋಡಿ ಅನುಮಾನ ವ್ಯಕ್ತಪಡಿಸಿದ್ದರು.

ಬಹುತೇಕ ಫೋಟೋಗಳಿಗೆ ಜ್ಯೋತಿ, ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿದ್ದಾರೆ. ಜ್ಯೋತಿ ರೈ ಮದುವೆ ಆಗಿದ್ದು ಒಬ್ಬ ಮಗ ಕೂಡಾ ಇದ್ದಾನೆ. ಆದರೆ ಮೊದಲ ಪತಿಯಿಂದ ಜ್ಯೋತಿ ದೂರಾಗಿದ್ದು ನಿರ್ದೇಶಕ ಸುಕು ಪೂರ್ವಜ್‌ ಜೊತೆ ಡೇಟಿಂಗ್‌ ಮಾಡುತ್ತಿರಬಹುದು ಎನ್ನಲಾಗಿತ್ತು. ಇದೀಗ ಸ್ವತ: ಜ್ಯೋತಿ ತಮ್ಮ ನಡುವಿನ ಸಂಬಂಧವನ್ನು ಕನ್ಫರ್ಮ್‌ ಮಾಡಿದ್ದಾರೆ.

ಸುಕು ಪೂರ್ವಜ್‌ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಜ್ಯೋತಿ ರೈ ತಮ್ಮಿಬ್ಬರ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಪೂರ್ವಜ್‌ ಜೊತೆ ಎಂಗೇಜ್‌ಮೆಂಟ್‌ ಆಗಿದೆ ಎಂದು ಜ್ಯೋತಿ ಬರೆದುಕೊಂಡಿದ್ದಾರೆ. ಆದರೆ ಜ್ಯೋತಿ ರೈ ಕುತ್ತಿಗೆಯಲ್ಲಿ ಕರಿಮಣಿ ಕಾಣಿಸುತ್ತಿದ್ದು ಈಗಾಗಲೇ ಅವರಿಗೆ ಮದುವೆ ಆಗಿದೆ. ಬಹುಶ: ಇದು ಹಳೆಯ ಫೋಟೋಗಳಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಡಿಕೇರಿಯಲ್ಲಿ ಹುಟ್ಟಿದ ಜ್ಯೋತಿ ರೈ ಪುತ್ತೂರಿನಲ್ಲಿ ಓದಿ ಬೆಳೆದರು. ಸದ್ಯ ಈಗ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್