ರವಿಚಂದ್ರನ್ 
ಸಿನಿಮಾ ಸುದ್ದಿ

ಪ್ರೇಮಲೋಕ-2: ನನ್ನ ತಂದೆ ಮಾಡಿದಂತೆ ಮಾಡುವುದು ಅಷ್ಟು ಸುಲಭವಲ್ಲ- ಮನೋರಂಜನ್

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 37 ವರ್ಷಗಳ ಹಿಂದೆ ಬಂದ ಪ್ರೇಮಲೋಕ'ದ ಸೀಕ್ವೆಲ್ ಬಗ್ಗೆ ನಿರಂತರವಾಗಿ ಸುದ್ದಿ ಕೇಳಿಬರುತ್ತಿದೆ. ರವಿಚಂದ್ರನ್ 'ಪ್ರೇಮಲೋಕ 2' ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಮತ್ತು ಅದನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಉತ್ತಮಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 37 ವರ್ಷಗಳ ಹಿಂದೆ ಬಂದ ಪ್ರೇಮಲೋಕ'ದ ಸೀಕ್ವೆಲ್ ಬಗ್ಗೆ ನಿರಂತರವಾಗಿ ಸುದ್ದಿ ಕೇಳಿಬರುತ್ತಿದೆ. ರವಿಚಂದ್ರನ್ 'ಪ್ರೇಮಲೋಕ 2' ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಮತ್ತು ಅದನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಉತ್ತಮಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ರವಿಚಂದ್ರನ್ ನಿರ್ದೇಶಿಸಿ, ನಟಿಸಿದ ಮೂಲ ಚಿತ್ರದಲ್ಲಿ ಜೂಹಿ ಚಾವ್ಲಾ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ವಿಷ್ಣುವರ್ಧನ್, ಪ್ರಭಾಕರ್, ಲೋಕೇಶ್ ಸೇರಿದಂತೆ ಆ ಕಾಲದ ಕೆಲ ನಾಯಕರು ಆ ಚಿತ್ರದಲ್ಲಿ ನಟಿಸಿದ್ದರು.

ರೊಮ್ಯಾಂಟಿಕ್ ಕಥಾಹಂದರದ ಚಿತ್ರ ಸಂಗೀತ, ಮನರಂಜನೆಯೂ ಆಗಿತ್ತು. 11 ಹಾಡುಗಳನ್ನು ಹೊಂದಿತ್ತು, ಇದನ್ನು ಈ ಪೀಳಿಗೆಯ ಪ್ರೇಕ್ಷಕರು ಇನ್ನೂ ಆನಂದಿಸುತ್ತಾರೆ. ಈಗ ರವಿಚಂದ್ರನ್ 25 ಹಾಡುಗಳನ್ನು ಸಂಯೋಜಿಸಲು ಯೋಜಿಸಿದ್ದಾರೆ. ಈ ಪ್ರಕ್ರಿಯೆಯು ನಡೆಯುತ್ತಿದೆ. 'ಪ್ರೇಮಲೋಕ 2' ಚಿತ್ರದ ತಯಾರಿ ಜೋರಾಗಿ ನಡೆಯುತ್ತಿರುವಾಗಲೇ ತಮ್ಮ ಹುಟ್ಟುಹಬ್ಬದ ದಿನವಾದ ಮೇ 30 ರಂದು ಪ್ರಾಜೆಕ್ಟ್ ಶುರುವಾಗುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.

ಅದೇ ಸಮಯದಲ್ಲಿ, ತಮ್ಮ ಹಿರಿಯ ಮಗ ಮನೋರಂಜನ್ ನಾಯಕನಾಗಿ ನಟಿಸುತ್ತಿದ್ದು, ಎರಡನೇ ಮಗ ವಿಕ್ರಮ್ ರವಿಚಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ, ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮನೋರಂಜನ್ ರವಿಚಂದ್ರನ್ ಚಿತ್ರಕ್ಕಾಗಿ ತಮ್ಮ ತಯಾರಿ ಮತ್ತು ಅದರ ತಯಾರಿಕೆಯ ಬಗ್ಗೆ ಹಂಚಿಕೊಂಡಿದ್ದಾರೆ.

" ಈಗಷ್ಟೇ ತಯಾರಾಗುತ್ತಿದ್ದೇನೆ ಮತ್ತು ನನ್ನ ತಂದೆಯ ಮಾತಿನಂತೆ ಹೋಗುತ್ತಿದ್ದೇನೆ. ನೃತ್ಯ ಅಭ್ಯಾಸ ಮತ್ತು ಕಠಿಣ ವ್ಯಾಯಾಮ ಮಾಡುತ್ತಿದ್ದೇನೆ" ಎಂದು ಮನೋರಂಜನ್ ಬಹಿರಂಗಪಡಿಸಿದರು.“ನನ್ನ ತಂದೆ ತಯಾರಿಯ ಬಗ್ಗೆ ತುಂಬಾ ಪರ್ಟಿಕ್ಯೂಲರ್.ಮೊದಲನೇಯದಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕಾಗಿದೆ. ಅವರು ಪ್ರತಿದಿನ ಅಥವಾ ಕನಿಷ್ಠ ವಾರಕ್ಕೊಮ್ಮೆ ನನ್ನ ಬಗ್ಗೆ ನಿಗಾ ಇಡುತ್ತಿದ್ದಾರೆ. ವಿಶೇಷವಾಗಿ ನನ್ನ ವ್ಯಾಯಾಮ ಮತ್ತು ನೃತ್ಯ ಪೂರ್ವಾಭ್ಯಾಸಗಳ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರೇಮಲೋಕ 2' ಸುತ್ತಲಿನ ಎಕ್ಸೈಟ್ ಮೆಂಟ್ ಕುರಿತು ಮಾತನಾಡಿದ ಮನೋರಂಜನ್, ಚಿತ್ರೀಕರಣ ಆರಂಭಕ್ಕೂ ಮುನ್ನಾವೇ ಸಾಕಷ್ಟು ನಿರೀಕ್ಷೆಗಳಿವೆ. ಆದರೆ 'ಪ್ರೇಮಲೋಕ'ದಲ್ಲಿ ಅವರು ಮಾಡಿದಂತೆ ನನಗೆ ಅದನ್ನು ಮಾಡುವುದು ಸುಲಭವಲ್ಲ. ಮೂಲ 'ಪ್ರೇಮಲೋಕ' ಬಿಡುಗಡೆಯಾಗಿ 37 ವರ್ಷಗಳು ಕಳೆದಿವೆ. ಜನರು ಅದನ್ನು ಮತ್ತು ಚಿತ್ರದ ಹಾಡುಗಳನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಪ್ರೇಮಲೋಕ 2 ನಲ್ಲಿ ಜನರು ನನ್ನನ್ನು ಇಷ್ಟಪಡಲು ನನ್ನ ಕಠಿಣ ಪರಿಶ್ರಮ ಮತ್ತು ಅಭಿನಯ ಮಾಡಬೇಕಾಗುತ್ತದೆ.

“'ಪ್ರೇಮಲೋಕ' ಮರೆಯುವುದಕ್ಕೆ ಆಗಲ್ಲ. ಅದು ಸಾರ್ವಕಾಲಿಕ ಚಿತ್ರವಾಗಿ ಇರಲಿದೆ. ಆದರೆ ಸೀಕ್ವೆಲ್ ನಲ್ಲಿ ಕಠಿಣ ಶ್ರಮ ಹಾಕಬೇಕು. ಪ್ರೇಮಲೋಕ’ ದೊಡ್ಡ ಟೈಟಲ್ ಆಗಿರುವ ಕಾರಣ ಸಹಜವಾಗಿಯೇ ಸಂಭ್ರಮವಿದೆ. ನಾನು ಇನ್ನೂ ಘೋಷಣೆಯ ದಿನಾಂಕಕ್ಕೆ ಎದುರು ನೋಡುತ್ತಿದ್ದೇನೆ. ಇನ್ನೂ ಸ್ಕ್ರಿಪ್ಟ್ ರಚನೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ ಮನೋ ರಂಜನ್, , 'ಪ್ರೇಮಲೋಕ 2' ಹೊರತಾಗಿ, ಒಂದೆರಡು ಪ್ರಾಜೆಕ್ಟ್‌ಗಳನ್ನು ಅಂತಿಮಗೊಳಿಸುವ ಕೆಲಸವಾಗುತ್ತಿದೆ. ಸರಿಯಾದ ಸಮಯ ಬಂದ ನಂತರ ಹೆಚ್ಚಿನದನ್ನು ಬಹಿರಂಗಪಡಿಸಲಾಗುವುದು ಎಂದರು.

'ಪ್ರೇಮಲೋಕ 2' ಸುತ್ತಲಿನ ಎಕ್ಸೈಟ್ ಮೆಂಟ್ ಕುರಿತು ಮಾತನಾಡಿದ ಮನೋರಂಜನ್, ಚಿತ್ರೀಕರಣ ಆರಂಭಕ್ಕೂ ಮುನ್ನಾವೇ ಸಾಕಷ್ಟು ನಿರೀಕ್ಷೆಗಳಿವೆ. ಆದರೆ 'ಪ್ರೇಮಲೋಕ'ದಲ್ಲಿ ಅವರು ಮಾಡಿದಂತೆ ನನಗೆ ಅದನ್ನು ಮಾಡುವುದು ಸುಲಭವಲ್ಲ. ಮೂಲ 'ಪ್ರೇಮಲೋಕ' ಬಿಡುಗಡೆಯಾಗಿ 37 ವರ್ಷಗಳು ಕಳೆದಿವೆ. ಜನರು ಅದನ್ನು ಮತ್ತು ಚಿತ್ರದ ಹಾಡುಗಳನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಪ್ರೇಮಲೋಕ 2 ನಲ್ಲಿ ಜನರು ನನ್ನನ್ನು ಇಷ್ಟಪಡಲು ನನ್ನ ಕಠಿಣ ಪರಿಶ್ರಮ ಮತ್ತು ಅಭಿನಯ ಮಾಡಬೇಕಾಗುತ್ತದೆ.

“'ಪ್ರೇಮಲೋಕ' ಮರೆಯುವುದಕ್ಕೆ ಆಗಲ್ಲ. ಅದು ಸಾರ್ವಕಾಲಿಕ ಚಿತ್ರವಾಗಿ ಇರಲಿದೆ. ಆದರೆ ಸೀಕ್ವೆಲ್ ನಲ್ಲಿ ಕಠಿಣ ಶ್ರಮ ಹಾಕಬೇಕು. ಪ್ರೇಮಲೋಕ’ ದೊಡ್ಡ ಟೈಟಲ್ ಆಗಿರುವ ಕಾರಣ ಸಹಜವಾಗಿಯೇ ಸಂಭ್ರಮವಿದೆ. ನಾನು ಇನ್ನೂ ಘೋಷಣೆಯ ದಿನಾಂಕಕ್ಕೆ ಎದುರು ನೋಡುತ್ತಿದ್ದೇನೆ. ಇನ್ನೂ ಸ್ಕ್ರಿಪ್ಟ್ ರಚನೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ ಮನೋ ರಂಜನ್, , 'ಪ್ರೇಮಲೋಕ 2' ಹೊರತಾಗಿ, ಒಂದೆರಡು ಪ್ರಾಜೆಕ್ಟ್‌ಗಳನ್ನು ಅಂತಿಮಗೊಳಿಸುವ ಕೆಲಸವಾಗುತ್ತಿದೆ. ಸರಿಯಾದ ಸಮಯ ಬಂದ ನಂತರ ಹೆಚ್ಚಿನದನ್ನು ಬಹಿರಂಗಪಡಿಸಲಾಗುವುದು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT