ಸಿನಿಮಾ ಸುದ್ದಿ

ರಜಿನಿಕಾಂತ್ ಅಭಿನಯದ 171ನೇ ಸಿನಿಮಾದ ಟೈಟಲ್ ಅನಾವರಣ; 'ಕೂಲಿ' ಟೀಸರ್ ಬಿಡುಗಡೆ

ಬಹು ನಿರೀಕ್ಷಿತ ರಜನಿಕಾಂತ್-ಲೋಕೇಶ್ ಕನಕರಾಜ್ ಅವರ ಮುಂಬರುವ ಚಿತ್ರದ ಟೈಟಲ್ ಘೋಷಿಸಲಾಗಿದ್ದು, ತಲೈವರ್ 171 ಈಗ 'ಕೂಲಿ'ಯಾಗಿದೆ. 'ಜೈಲರ್‌' ಸಿನಿಮಾ ನಿರ್ಮಿಸಿದ್ದ ಸನ್‌ ಪಿಕ್ಚರ್ಸ್ ಸಂಸ್ಥೆಯೇ 'ಕೂಲಿ' ಸಿನಿಮಾಕ್ಕೂ ಬಂಡವಾಳ ಹೂಡಿದೆ. ಸೋಮವಾರ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಟೀಸರ್‌ನಲ್ಲಿ ರಜಿನಿಕಾಂತ್ ಅವರ ಹಿಂದಿನ ಸಿನಿಮಾಗಳ ಉಲ್ಲೇಖಗಳಿವೆ.

ಬಹು ನಿರೀಕ್ಷಿತ ರಜನಿಕಾಂತ್-ಲೋಕೇಶ್ ಕನಕರಾಜ್ ಅವರ ಮುಂಬರುವ ಚಿತ್ರದ ಟೈಟಲ್ ಘೋಷಿಸಲಾಗಿದ್ದು, ತಲೈವರ್ 171 ಈಗ 'ಕೂಲಿ'ಯಾಗಿದೆ. 'ಜೈಲರ್‌' ಸಿನಿಮಾ ನಿರ್ಮಿಸಿದ್ದ ಸನ್‌ ಪಿಕ್ಚರ್ಸ್ ಸಂಸ್ಥೆಯೇ 'ಕೂಲಿ' ಸಿನಿಮಾಕ್ಕೂ ಬಂಡವಾಳ ಹೂಡಿದೆ. ಸೋಮವಾರ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಟೀಸರ್‌ನಲ್ಲಿ ರಜಿನಿಕಾಂತ್ ಅವರ ಹಿಂದಿನ ಸಿನಿಮಾಗಳ ಉಲ್ಲೇಖಗಳಿವೆ. ಅವರ 1982ರ ರಂಗ ಚಿತ್ರದ ಡೈಲಾಗ್ ಮತ್ತು 1983ರ ತಂಗ ಮಗನ್ ಚಿತ್ರದ 'ವಾ ವಾ ಪಕ್ಕಂ ವಾ' ಹಾಡಿನ ರೀಮಿಕ್ಸ್ ಆವೃತ್ತಿ ಕೇಳಿಬಂದಿದೆ.

ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿರುವ ಕೂಲಿ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ, ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣ, ಫಿಲೋಮಿನ್ ರಾಜ್ ಅವರ ಸಂಕಲನ, ಅನ್ಬರಿವ್ ಅವರ ಸಾಹಸ ಮತ್ತು ಸತೀಸ್ ಕುಮಾರ್ ಅವರ ನಿರ್ಮಾಣ ವಿನ್ಯಾಸವಿದೆ. ಚಿತ್ರಕ್ಕೆ ಸಂಭಾಷಣೆಯನ್ನು ಲೋಕೇಶ್ ಮತ್ತು ಚಂದ್ರು ಅನ್ಬಳಗನ್ ಬರೆದಿದ್ದಾರೆ. ಅನ್ಬಳಗನ್ ಅವರು ಚಿತ್ರಕಥೆಯನ್ನು ಸಹ ಬರೆದಿದ್ದಾರೆ.

ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೂಲಿ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಉಳಿದ ಪಾತ್ರವರ್ಗ ಮತ್ತು ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಬೇಕಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲು ಸಿದ್ಧರಾಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ವರದಿಗಳ ಪ್ರಕಾರ, ಲೋಕೇಶ್ ಕನಕರಾಜ್ ಕೈದಿ 2 ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಮತ್ತೊಂದೆಡೆ, ರಜನಿಕಾಂತ್ ಅವರು ಜೈ ಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶನದ ವೆಟ್ಟೈಯಾನ್‌ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

'ಹಸಿರು ಲ್ಯಾಂಬೊರ್ಗಿನಿ ಕಾರಲ್ಲಿ ಹೋಗಿ, ರಸ್ತೆ ಕಸ ಗುಡಿಸಿ ಬನ್ನಿ': ಸಂಚಾರ ನಿಯಮ ಉಲ್ಲಂಘಿಸಿ ದರ್ಪ ತೋರಿದ ಚಾಲಕನಿಗೆ ಹೈಕೋರ್ಟ್‌ ಶಿಕ್ಷೆ!

ಉಪಚುನಾವಣೆ ಗೆಲ್ಲುವ ಉಮೇದು: ಪ್ರಚಾರದಲ್ಲಿ ನಿರತರಾದ ಸಿಎಂ -ಡಿಸಿಎಂ; ನಿಯಂತ್ರಣ ಕಳೆದುಕೊಂಡ ಆಡಳಿತ ಯಂತ್ರ!

'ನನ್ನ ಹಣೆಬರಹ ಎಲ್ಲಿದೆಯೋ, ಜನ ಎಲ್ಲಿ ಗೆಲ್ಲಿಸ್ತಾರೋ ನೋಡೋಣ: ನಮ್ಮ ಸಂಖ್ಯೆ ನೋಡಿ ಅಪಹಾಸ್ಯ ಮಾಡಿದ್ದಾರೆ, 2028 ರಲ್ಲಿ ಸರ್ಕಾರ ರಚಿಸ್ತಿವಿ'

SCROLL FOR NEXT