ಕೃಷ್ಣ ಮತ್ತು ಅಮೃತಾ ಅಯ್ಯಂಗಾರ್ 
ಸಿನಿಮಾ ಸುದ್ದಿ

ಅಪ್ಪ- ಮಗನ ಬಾಂಧವ್ಯದ 'ಫಾದರ್': ಕೃಷ್ಣನಿಗೆ ಅಮೃತಾ ಅಯ್ಯಂಗಾರ್ ಜೋಡಿ

ರಾಜಮೋಹನ್ ಅವರ ಕನ್ನಡದ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ, ಪ್ರಕಾಶ್ ರಾಜ್ ಮತ್ತು ಕೃಷ್ಣ ತಂದೆ-ಮಗ ಜೋಡಿಯಾಗಿ, ತೆಲುಗು ನಟ ಸುನೀಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಆರ್ ಚಂದ್ರು ಒಡೆತನದ ಆರ್ ಸಿ ಸ್ಟುಡಿಯೋಸ್‌ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 'ಫಾದರ್' ಫ್ಯಾನ್ ಇಂಡಿಯಾ ಸಿನಿಮಾವನ್ನು ರಾಜ್ ಮೋಹನ್ ನಿರ್ದೇಶಿಸುತ್ತಿದ್ದಾರೆ.

ರಾಜಮೋಹನ್ ಅವರ ಕನ್ನಡದ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ, ಪ್ರಕಾಶ್ ರಾಜ್ ಮತ್ತು ಕೃಷ್ಣ ತಂದೆ-ಮಗ ಜೋಡಿಯಾಗಿ, ತೆಲುಗು ನಟ ಸುನೀಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣ ಚೊಚ್ಚಲ ನಿರ್ದೇಶನದ 'ಲವ್ ಮಾಕ್‌ಟೇಲ್' ನಲ್ಲಿನ ಜನಪ್ರಿಯ 'ಜೋ' ಪಾತ್ರವು ಅಮೃತಾಗೆ ಭಾರೀ ಹೆಸರು ತಂದು ಕೊಟ್ಟಿತು. ಹೀಗಾಗಿ ಈ ಕಾಂಬಿನೇಷನ್ ಅನ್ನು ಮತ್ತೆ ಬೆಳ್ಳಿತೆರೆಯಲ್ಲಿ ನೋಡಲು ಕುತೂಹಲ ಹೆಚ್ಚಿದೆ. ಚಿತ್ರದ ಮುಹೂರ್ತದ ದಿನದಂದು ಅಮೃತಾ ಚಿತ್ರತಂಡಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು. 'ಹನು-ಮಾನ್' ಚಿತ್ರದ ಸಂಗೀತ ನಿರ್ದೇಶಕ 'ಗೌರ ಹರಿ' ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಇನ್ವೆನಿಯೊ ಒರಿಜಿನ್ ಕಂಪನಿಯ ಆರ್ ಚಂದ್ರು, ಅಲಂಕಾರ್ ಪಾಂಡಿಯನ್ ಮತ್ತು ಉದ್ಯಮಿ ಸೀಕಲ್ ರಾಮಚಂದ್ರ ಗೌಡ ಅವರ ಸಹಯೋಗದೊಂದಿಗೆ, 'ಫಾದರ್' ಸಿನಿಮಾ ಕೃಷ್ಣ ಮತ್ತು ಅಮೃತ ಅಯ್ಯಂಗಾರ್ ಇಬ್ಬರಿಗೂ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.

'ಫಾದರ್' ಹೊರತಾಗಿ, 'ಪಿಒಕೆ', 'ಶ್ರೀ ರಾಮಬಾಣ ಚರಿತ', 'ಡಾಗ್', 'ಕಬ್ಜಾ 2' ಮತ್ತು ಶಿವರಾಜಕುಮಾರ್ ಅವರೊಂದಿಗಿನ ಮತ್ತೊಂದು ಸಿನಿಮಾ ಸೇರಿ ಇನ್ನೂ ಐದು ಪ್ರಾಜೆಕ್ಟ್ ಗಳು ಸಿದ್ಧವಾಗಿವೆ. ಸದ್ಯ ಕೃಷ್ಣ ಅವರು ತಮ್ಮ'ಹಲಗಲಿ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅದರ ಜೊತೆಯಲ್ಲಿ 'ಫಾದರ್' ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ. ಅಮೃತಾ ಅಯ್ಯಂಗಾರ್ ಬಗ್ಗೆ ಹೇಳುವುದಾದರೆ, ನಟ ಕೊನೆಯದಾಗಿ 'ಅಬ್ಬಬ್ಬಾ'ದಲ್ಲಿ ಕಾಣಿಸಿಕೊಂಡಿದ್ದರು. ಅವರು ಧನಂಜಯ್ ಮತ್ತು ಸತ್ಯದೇವ್ ಅಭಿನಯದ ಕನ್ನಡ ಮತ್ತು ತೆಲುಗಿನಲ್ಲಿ ಮಾಡಿದ ದ್ವಿಭಾಷಾ ಯೋಜನೆಯಾದ 'ಜೀಬ್ರಾ' ಚಿತ್ರೀಕರಣವನ್ನು ಸಹ ಪೂರ್ಣಗೊಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್