ಅಶ್ವಿನಿ ಅಂಬರೀಷ್ 
ಸಿನಿಮಾ ಸುದ್ದಿ

'ಭೀಮಾ' ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ವಿಜಯ್ ಕುಮಾರ್ ಗೆ ಚಿರಋಣಿ: ಅಶ್ವಿನಿ ಅಂಬರೀಷ್

ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣದ ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಮತ್ತು ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ವಿಜಯ್ ತನ್ನ ಎರಡನೆ ಸಿನಿಮಾ ನಿರ್ದೇಶನದಲ್ಲಿ ಹೊಸ ಕಲಾವಿದರನ್ನು ಆರಿಸಿಕೊಂಡಿದ್ದು, ಅದರಲ್ಲಿ ಅಶ್ವಿನಿ ಕೂಡ ಒಬ್ಬರು.

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅಶ್ವಿನಿ ಅಂಬರೀಶ್ ಅವರಿಗೆ, ಭೀಮಾ ನಿರ್ದೇಶಕ ವಿಜಯ್ ಕುಮಾರ್ ಅವರ ಪ್ರತಿಭೆಯನ್ನು ಗುರುತಿಸಿ ಚಿತ್ರದಲ್ಲಿ ತಮ್ಮ ನಾಯಕಿಯಾಗಿ ನಟಿಸಲು ಅವಕಾಶ ನೀಡಿದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣದ ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಮತ್ತು ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ವಿಜಯ್ ತನ್ನ ಎರಡನೆ ಸಿನಿಮಾ ನಿರ್ದೇಶನದಲ್ಲಿ ಹೊಸ ಕಲಾವಿದರನ್ನು ಆರಿಸಿಕೊಂಡಿದ್ದು, ಅದರಲ್ಲಿ ಅಶ್ವಿನಿ ಕೂಡ ಒಬ್ಬರು. ಸಿನಿಮಾ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅಶ್ವಿನಿ, ನನ್ನಂತಹ ಹೊಸಬರಿಗೆ, ವಿಜಯ್ ಅವರ ನಿರೀಕ್ಷೆ ಮಟ್ಟಕ್ಕೆ ಕೊಡುಗೆ ನೀಡುವುದು ತುಂಬಾ ಸುಲಭ. ಏಕೆಂದರೆ ಅವರು ಶೂಟಿಂಗ್ ಮುಂಚಿತವಾಗಿಯೇ ನಟರೊಂದಿಗೆ ಚರ್ಚೆ ಮಾಡಿ ಸಾಕಷ್ಟು ಮಾರ್ಗದರ್ಶನ ನೀಡುತ್ತಾರೆ. ಹೀಗಾಗಿ ಅವರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿದರು ಎಂದು ಹೇಳಿದ್ದಾರೆ.

ಭೀಮ ಕೇವಲ ಭೂಗತ ಜಗತ್ತಿಗೆ ಸಂಬಂಧಿಸಿದ್ದಲ್ಲ, ಇದು ರೋಮಾಂಚಕ, ಸಾಮಾಜಿಕವಾಗಿ ಸಂಬಂಧಿತ ಕಥೆಯಾಗಿದ್ದು, ವಾಣಿಜ್ಯ ಮನರಂಜನೆಯಾಗಿ ಪ್ಯಾಕ್ ಮಾಡಲಾಗಿದೆ ಎಂದು ಅವರು ಹೇಳುತ್ತಾರೆ. ಸಾಮಾಜಿಕ ಸವಾಲುಗಳನ್ನು ನ್ಯಾವಿಗೇಟ್ ಮಾಡುವ ಚಿಕ್ಕ ಹುಡುಗಿಯ ಪಾತ್ರ ತಮ್ಮದು ಎಂದು ವಿವರಿಸುತ್ತಾರೆ. ವಿಜಯ್ ಅವರು ಈ ವಿಷಯವನ್ನು ಏಕೆ ಆರಿಸಿಕೊಂಡರು ಮತ್ತು ಅವರು ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಹಲವಾರು ವೀಡಿಯೊಗಳನ್ನು ತೋರಿಸಿದರು.

ನನ್ನ ಪಾತ್ರವು ಕೊಳೆಗೇರಿ ಪ್ರದೇಶದಲ್ಲಿ ಬೇರೂರಿದೆ, ಮತ್ತು ಫೋಟೋಶೂಟ್‌ಗಾಗಿ ಸ್ಥಳಕ್ಕೆ ಭೇಟಿ ನೀಡುವುದರಿಂದ ನಿವಾಸಿಗಳ ಜೀವನಶೈಲಿ ಮತ್ತು ಹೋರಾಟಗಳನ್ನು ನೋಡಲು ನನಗೆ ಅವಕಾಶ ಮಾಡಿಕೊಟ್ಟಿತು, ಅದನ್ನು ನಾನು ನನ್ನ ಚಿತ್ರದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದಿದ್ದಾರೆ.

ಕೊಳೆಗೇರಿ ನಿವಾಸಿಗಳೊಂದಿಗಿನ ತನ್ನ ಸಂವಾದವನ್ನು ನೆನಪಿಸಿಕೊಂಡ ಅಶ್ವಿನಿ ಒಂದು ಸಮಸ್ಯೆಯನ್ನು ಹಂಚಿಕೊಳ್ಳುತ್ತಾರೆ, ಅವರ ಜೊತೆ ತೊಡಗಿಕೊಳ್ಳುವುದರಿಂದ ಅವರ ಸರಳ ಜೀವನದ ಸೌಂದರ್ಯವನ್ನು ನಾನು ಅರಿತುಕೊಂಡೆ. ಅವರ ಸೀಮಿತ ಸಂಪನ್ಮೂಲಗಳ ಹೊರತಾಗಿಯೂ, ಅವರು ಸಂತೋಷವಾಗಿ ಬದುಕುತ್ತಾರೆ. ನಮ್ಮ ಸ್ನಾನಗೃಹ ಅವರ ವಾಸಸ್ಥಳಕ್ಕಿಂತ ದೊಡ್ಡದಾಗಿವೆ, ನಮ್ಮ ಒತ್ತಡದ ಜೀವನಕ್ಕಿಂತ ಅವರ ಲೈಫ್ ವ್ಯತಿರಿಕ್ತವಾಗಿವೆ ಎಂದ ಅಶ್ವಿನಿ ಅವರ ಪ್ರೀತಿ ಮತ್ತು ಆತಿಥ್ಯವನ್ನು ನೆನಪಿಸಿಕೊಂಡಿದ್ದಾರೆ, ಅವರ ನಡವಳಿಕೆ ತನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿತು ಎಂದಿದ್ದಾರೆ ಅಶ್ವಿನಿ.

ನಿರ್ದೇಶಕ ವಿಜಯ್ ಕುಮಾರ್ ನಟನಾಗಿ ಉತ್ತಮ ಅನುಭವದ ಹಿನ್ನೆಲೆಯಿಂದ ಬಂದವರು ಮತ್ತು ಸಲಗ ನಂತರ ಭೀಮಾ ನಿರ್ದೇಶಕರಾಗಿ ಅವರ ಎರಡನೇ ಚಿತ್ರವಾಗಿದೆ ಎಂದಿರುವ ಅಶ್ವಿನಿ ಅವರನ್ನು ಹೊಗಳಿದ್ದಾರೆ. ಅವರೊಬ್ಬ ಉತ್ತಮ ಚಲನಚಿತ್ರ ನಿರ್ದೇಶಕ ಎಂದಿದ್ದಾರೆ, ಆದರೆ ಥಿಯೇಟರ್‌ನಿಂದ ಹಿರಿತೆರೆಗೆ ಶಿಫ್ಟ್ ಆಗುವುದು ಸುಲಭವಾಗಿರಲಿಲ್ಲ ಎಂಬುದನ್ನು ಆಕೆ ಒಪ್ಪಿಕೊಳ್ಳುತ್ತಾರೆ. ಮೊದಲ ಬಾರಿಗೆ ಕ್ಯಾಮೆರಾವನ್ನು ಎದುರಿಸುವುದು ಭಯವಾಗುತ್ತಿತ್ತು. ನಟರು ತಮ್ಮದೇ ಆದ ರೀತಿಯಲ್ಲಿಅಭಿನಯಿಸುವ ದೃಶ್ಯಗಳನ್ನು ತೆಗೆದುಕೊಳ್ಳಲು ನಿರ್ದೇಶಕರು ಸಿದ್ಧರಾಗಿದ್ದರು. ಅದಕ್ಕೆ ತಕ್ಕಂತ ವಾತಾವರಣವನ್ನು ಕಲ್ಪಿಸಿದ್ದರು ಎಂದು ಅಶ್ವಿನಿ ಹೇಳುತ್ತಾರೆ. "ವಿಜಯ್ ಕುಮಾರ್ ಅವರ ವಿಶಿಷ್ಟವಾದ ಕಥೆ ಹೇಳುವ ಶೈಲಿ ಮತ್ತು ಅವರ ಪ್ರೇಕ್ಷಕರು ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ತಲುಪಿಸುವ ಬದ್ಧತೆ ಮತ್ತು ನಿರೂಪಣೆಯು ನನ್ನನ್ನು ಈ ಯೋಜನೆಗೆ ಆಕರ್ಷಿಸಿತು. “ನಾನು ಚಿತ್ರರಂಗಕ್ಕೆ ಪ್ರವೇಶಿಸಿದಾಗ, ನಾನು ಕೆಲವು ಪಾತ್ರಗಳಲ್ಲಿ ನಟಿಸಲು ಬಯಸಲಿಲ್ಲ. ವಿಜಯ್ ಅವರ ಪ್ರಸ್ತಾಪವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದಾಗಿತ್ತು. ಉದ್ಯಮದ ಅನಿರೀಕ್ಷಿತತೆಯನ್ನು ಒಪ್ಪಿಕೊಳ್ಳುತ್ತಾ, "ನಾನು ಯಶಸ್ಸಿನ ಸೂತ್ರವನ್ನು ಬೆನ್ನಟ್ಟುವ ಬದಲು ಪ್ರತಿ ಪಾತ್ರವನ್ನು ಮೆಟ್ಟಿಲು ಎಂದು ತೆಗೆದುಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT