ಸೋನಲ್ ಮೊಂಥೆರೋ-ದರ್ಶನ್ 
ಸಿನಿಮಾ ಸುದ್ದಿ

ಅಣ್ಣ... ನೀವಿಲ್ಲದೆ ರಕ್ಷಾ ಬಂಧನ ನನ್ನ ಪಾಲಿಗೆ?: ನಟ ದರ್ಶನ್ ನೆನೆದು ಭಾವುಕರಾದ ನಟಿ ಸೋನಲ್ ಮೊಂಥೆರೋ

ನಟಿ ಸೋನಲ್ ಇತ್ತೀಚೆಗಷ್ಟೆ ನಿರ್ದೇಶಕ ತರುಣ್ ಸುಧೀರ್ ಅವರನ್ನು ವಿವಾಹವಾಗಿದ್ದರು. ಇನ್ನು ತರುಣ್ ಸುಧೀರ್ ಸಹ ಮೊದಲಿನಿಂದಲೂ ದರ್ಶನ್ ಗೆ ಅತ್ಯಾಪ್ತರಾಗಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ್ದಾರೆ. ಇನ್ನು ಅವರ ಅಭಿಮಾನಿಗಳು, ಆಪ್ತರು ಆಗಾಗ್ಗೆ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಇಂದು ರಕ್ಷಾ ಬಂಧನ ಹಿನ್ನೆಲೆಯಲ್ಲಿ ನಟಿ ಸೋನಲ್‌ ಮೊಂಥೆರೋ ದರ್ಶನ್‌ಗೆ ಶುಭಾಶಯ ಕೋರಿದ್ದಾರೆ. ರಕ್ಷಾ ಬಂಧನದ ಸಮಯದಲ್ಲಿ ಅಣ್ಣನ ನೆನೆದು ಭಾವುಕ ಪೋಸ್ಟ್‌ ಬರೆದಿದ್ದಾರೆ.

ನಟಿ ಸೋನಲ್ ಇತ್ತೀಚೆಗಷ್ಟೆ ನಿರ್ದೇಶಕ ತರುಣ್ ಸುಧೀರ್ ಅವರನ್ನು ವಿವಾಹವಾಗಿದ್ದರು. ಇನ್ನು ತರುಣ್ ಸುಧೀರ್ ಸಹ ಮೊದಲಿನಿಂದಲೂ ದರ್ಶನ್ ಗೆ ಅತ್ಯಾಪ್ತರಾಗಿದ್ದಾರೆ. ಕಳೆದ ವರ್ಷದ ದರ್ಶನ್ ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದ ಸೋನಲ್ ಈ ಬಾರಿ ದರ್ಶನ್ ಹೊರಗೆ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ದಿನದಂದು ನಾವು ಜತೆಗೆ ಇಲ್ಲದೆ ಇದ್ದರೂ, ನಮ್ಮಿಬ್ಬರ ಆತ್ಮೀಯತೆ ಎಂದೂ ಮರೆಯಾಗುವುದಿಲ್ಲ. ನಾನು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ನಾನು ನಿಮ್ಮನ್ನು ಪ್ರೀತಿಸುತ್ತೇವೆ Bro ಎಂದು ಸೋನಲ್‌ ಮೊಂಥೆರೋ ಪೋಸ್ಟ್‌ ಮಾಡಿದ್ದಾರೆ.

ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸೋನಲ್ ಸಹ ನಟಿಸಿದ್ದರು. ಅಂದಿನ ಪರಿಚಯ ಈಗಲೂ ಉತ್ತಮವಾಗಿಯೇ ಇದೆ. ಇವರಿಬ್ಬರ ನಡುವೆ ಅಣ್ಣ-ತಂಗಿ ಸಂಬಂಧವಿದೆ. ಇದೀಗ ರಕ್ಷಾ ಬಂಧನದ ಶುಭ ಸಮಯದಲ್ಲಿ ತನ್ನ ಸಹೋದರ ಹೊರಗೆ ಇಲ್ಲದಿರುವುದು ನಟಿಗೆ ನೋವು ತಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT