ಮೋಹನ್ ಬಾಬು ಮತ್ತು ಮನೋಜ್ ಮಂಚು 
ಸಿನಿಮಾ ಸುದ್ದಿ

ತಂದೆ ಮೋಹನ್ ಬಾಬು ವಿರುದ್ಧವೇ ನಟ ಮಂಚು ಮನೋಜ್ ದೂರು ದಾಖಲು

ಮೋಹನ್ ಬಾಬು ದಾಳಿಯಿಂದ ತಮಗೆ ತಮ್ಮ ಕುಟುಂಬದವರಿಗೆ ಗಾಯಗಳಾಗಿವೆ ಎಂದು ಮಂಚು ಮನೋಜ್ ಆರೋಪ ಮಾಡಿದ್ದಾರೆ

ನಟ ಮಂಜು ಮನೋಜ್, ತಮ್ಮ ತಂದೆ ಮೋಹನ್ ಬಾಬು ವಿರುದ್ಧವೇ ದೂರು ನೀಡಿದ್ದಾರೆ. ಮೋಹನ್ ಬಾಬು ತನ್ನ ಮೇಲೆ ಹಾಗೂ ತನ್ನ ಪತ್ನಿ, ಮಕ್ಕಳ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿ ಮಂಚು ಮನೋಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೋಹನ್ ಬಾಬು ದಾಳಿಯಿಂದ ತಮಗೆ ತಮ್ಮ ಕುಟುಂಬದವರಿಗೆ ಗಾಯಗಳಾಗಿವೆ ಎಂದು ಮಂಚು ಮನೋಜ್ ಆರೋಪ ಮಾಡಿದ್ದಾರೆ. ಗಾಯಗಳೊಂದಿಗೆ ಅವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಮಂಚು ಮನೋಜ್, ತಮ್ಮ ಸಹೋದರ ಮಂಚು ವಿಷ್ಣು ವಿರುದ್ಧವೂ ಇದೇ ರೀತಿ ದೂರು ದಾಖಲಿಸಿದ್ದರು. ಹಿರಿಯ ನಟ ಮೋಹನ್ ಬಾಬು ಸಹ ಪುತ್ರ ಮಂಚು ಮನೋಜ್ ವಿರುದ್ಧ ದೂರು ನೀಡಿದ್ದಾರೆ. ಮನೋಜ್ ನನ್ನ ಮೇಲೆ ದಾಳಿ ಮಾಡಿದ್ದಾನೆ ಹಲ್ಲೆ ಮಾಡಿದ್ದಾನೆ ಎಂದು ಮೋಹನ್ ಬಾಬು ಸಹ ದೂರು ನೀಡಿದ್ದಾರೆ. ಮಂಚು ಕುಟುಂಬಕ್ಕೆ ಸೇರಿದ ಕೋಟ್ಯಂತರ ಮೌಲ್ಯದ ಶಾಲಾ-ಕಾಲೇಜು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ವರ್ಷಗಳಿಂದಲೂ ಕುಟುಂಬದಲ್ಲಿ ವಿವಾದಗಳು ನಡೆಯುತ್ತಿದ್ದು, ಅದೇ ಕಾರಣಕ್ಕೆ ಈಗ ಅಪ್ಪ-ಮಗನ ನಡುವೆ ಜಗಳ ಆಗಿದೆ ಎನ್ನಲಾಗುತ್ತಿದೆ.

ಮಂಚು ಕುಟುಂಬದಲ್ಲಿ ಕಳೆದ ಕೆಲ ವರ್ಷಗಳಿಂದಲೂ ಆಸ್ತಿಗಳಿಗೆ ಸಂಬಂಧಿಸಿದಂತೆ ಸಮಸ್ಯೆ ನಡೆಯುತ್ತಲೇ ಇದೆ. ಕಳೆದ ವರ್ಷ, ಮಂಚು ಮನೋಜ್, ತಮ್ಮ ಸಹೋದರ ಮಂಚು ವಿಷ್ಣು ತಮ್ಮ ಮೇಲೆ ಹಾಗೂ ತಮ್ಮ ನೌಕರನ ಮೇಲೆ ದಾಳಿ ಮಾಡಿ ಹಲ್ಲೆ ಮಾಡಲು ಯತ್ನಿಸಿದ್ದ ಎಂದು ದೂರು ದಾಖಲಿಸಿದ್ದರು. ನೌಕರನ ಮನೆಯೊಂದಕ್ಕೆ ಮಂಚು ವಿಷ್ಣು ಬಂದು ಬೆದರಿಕೆ ಹಾಕುತ್ತಿರುವ ವಿಡಿಯೋವನ್ನು ಮಂಚು ಮನೋಜ್ ಬಿಡುಗಡೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೀತ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

'ಪೋಷಕರು ನನ್ನ ಆ ಖಾಸಗಿ ವಿಡಿಯೋ ನೋಡಿದ್ದರು, ಏರ್‌ಪೋರ್ಟ್‌ನಲ್ಲೇ ಕುಳಿತು ಅತ್ತಿದ್ದೆ: ವೈರಲ್‌ ಪಾರ್ಟಿ ಬಗ್ಗೆ ಅಪೂರ್ವ ಮುಖಿಜಾ! Video

ಪ್ರಜ್ವಲ್​​ ರೇವಣ್ಣಗೆ ಬಿಗ್ ಶಾಕ್; ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಮಾಜಿ ಸಂಸದನ ಶಿಫ್ಟ್!

CJP ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲುಗಳ ರದ್ದತಿ: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!