ಹರೀಶ್ ರಾಜ್ ನಿರ್ದೇಶಿಸಿ, ನಟಿಸುತ್ತಿರುವ ಹೊಸ ಚಿತ್ರ ವೆಂಕಟೇಶಾಯ ನಮ:ದ ಮುಹೂರ್ತ ನೆರವೇರಿದೆ. ಇದು ರೋಮ್ಯಾಂಟಿಕ್, ಹಾಸ್ಯ ಪ್ರಧಾನವಾಗಿದ್ದು, ಪ್ರೀತಿ ಪ್ರೇಮದ ಜೊತೆಗೆ ಕೌಟುಂಬಿಕ ಅಂಶಗಳನ್ನು ಹೊಂದಿದೆ.
ಜನಾರ್ಧನ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅವರು ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೆ ಜೊತೆಗೆ ಹರೀಶ್ ರಾಜ್ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ.
ಕಿರುತೆರೆ ಹಾಗೂ ಸಿನಿಮಾಗಳಿಂದ ಚಿರಪರಿಚಿತವಾಗಿರುವ ಹರೀಶ್ ರಾಜ್, ಹಲವು ವರ್ಷಗಳ ನಟನೆ ಬಳಿಕ ಇದೀಗ ನಿರ್ದೇಶಕ ಕ್ಯಾಪ್ ಧರಿಸಿದ್ದಾರೆ. ತಮ್ಮ ನಿರ್ದೇಶನದ ವೆಂಕಟೇಶಾಯ ನಮ: ಚಿತ್ರದಲ್ಲಿ ರೋಮ್ಯಾಂಟಿಕ್ ಜೊತೆಗೆ ಕೌಟುಂಬಿಕ ಭಾವಾನಾತ್ಮಕ ಅಂಶಗಳಿದ್ದು, ಪ್ರೇಕ್ಷಕರ ಹೃದಯ ಮಟ್ಟುತ್ತದೆ ಎಂದು ಹರೀಶ್ ರಾಜ್ ಹೇಳಿದ್ದಾರೆ.
ಭರ್ಜರಿ ಚೇತನ್ ಕಥೆ ಬರೆದಿದ್ದು, ಶಿವಶಂಕರ್ ಛಾಯಾಗ್ರಾಹಣ ಹಾಗೂ ಶ್ರೀನಿವಾಸ ಮೂರ್ತಿ ಸಂಗೀತ ಸಂಯೋಜಿಸುತ್ತಿದ್ದಾರೆ. 45 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು, ಹರೀಶ್ ರಾಜ್ ಅವರೊಂದಿಗೆ ಉಮಾಶ್ರೀ, ತಬಲಾ ನಾಣಿ ಮತ್ತಿತರ ಕಲಾವಿದರು ನಟಿಸಲಿದ್ದಾರೆ.