ವಿಜಯ ರಾಘವೇಂದ್ರ - ಸರಿ ರಾಜು 
ಸಿನಿಮಾ ಸುದ್ದಿ

ಥ್ರಿಲ್ಲರ್ 'FIR 6to6' ಚಿತ್ರದಲ್ಲಿ ವಿಜಯ ರಾಘವೇಂದ್ರ: ಸಂಪೂರ್ಣವಾಗಿ ರಾತ್ರಿಯಲ್ಲೇ ಚಿತ್ರೀಕರಣ

2024 ರಲ್ಲಿ ಕೇಸ್ ಆಫ್ ಕೊಂಡಾಣ ಮತ್ತು ಗ್ರೇ ಗೇಮ್ಸ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ವಿಜಯ ರಾಘವೇಂದ್ರ ಇದೀಗ ಎಫ್‌ಐಆರ್ 6 to 6 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಆಡಿಯೋ ಮತ್ತು ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.

2024 ರಲ್ಲಿ ಕೇಸ್ ಆಫ್ ಕೊಂಡಾಣ ಮತ್ತು ಗ್ರೇ ಗೇಮ್ಸ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ವಿಜಯ ರಾಘವೇಂದ್ರ ಇದೀಗ ಎಫ್‌ಐಆರ್ 6to6 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಆಡಿಯೋ ಮತ್ತು ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಪಟ್ಟಾಭಿಷೇಕ ಖ್ಯಾತಿಯ ಭಾಗ್ಯ ರಮೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆವಿ ರಮಣರಾಜ್ ನಿರ್ದೇಶನದ ಎಫ್‌ಐಆರ್ 6 to 6ಕ್ಕೆ ಒಂಗಿ ಅವರ ಛಾಯಾಗ್ರಹಣವಿದೆ. ಚಿತ್ರಕ್ಕೆ ಸತೀಶ್ ಬಾಬು ಮತ್ತು ಎಂಎಸ್ ತ್ಯಾಗರಾಜ್ ಅವರ ಸಂಗೀತ ಸಂಯೋಜನೆಯಿದೆ.

'ಇದೊಂದು ಆ್ಯಕ್ಷನ್, ಥ್ರಿಲ್ಲರ್ ಸಿನಿಮಾ ಆಗಿದ್ದು, ಇಡೀ ಚಿತ್ರವನ್ನು ನಾವು ರಾತ್ರಿ ವೇಳೆಯಲ್ಲಿಯೇ ಚಿತ್ರೀಕರಿಸಿದ್ದೇವೆ. ಈ ಸಿನಿಮಾಗಾಗಿ ಹಲವಾರು ರಾತ್ರಿಗಳನ್ನು ಮೀಸಲಿಟ್ಟಿದ್ದೇವೆ. ಸಾಕಷ್ಟು ರಾತ್ರಿ ನಿದ್ದೆ ಬಿಟ್ಟು ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ನಿರ್ದೇಶಕರು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಇದೊಂದು ಆ್ಯಕ್ಷನ್ ಚಿತ್ರವಾಗಿದ್ದು, ಕೆಲವೊಮ್ಮೆ ನಾವು ಬೆಳಿಗ್ಗೆ 4 ಗಂಟೆವರೆಗೆ ಚಿತ್ರೀಕರಿಸಿದ್ದೇವೆ. ಥ್ರಿಲ್ಲರ್ ಸ್ಪೆಷಲಿಸ್ಟ್ ಮಂಜು ಅವರೊಂದಿಗಿನ ಸಾಹಸ ದೃಶ್ಯಗಳು ಉತ್ತಮವಾಗಿವೆ' ಎನ್ನುತ್ತಾರೆ.

ನಿರ್ಮಾಪಕಿ ಭಾಗ್ಯ ರಮೇಶ್ ಮಾತನಾಡಿ, 'ಈ ಹಿಂದೆ ನಾವು ಪಟ್ಟಾಭಿಷೇಕ ಚಿತ್ರವನ್ನು ಮಾಡಿದ್ದೇವೆ. ರಮಣರಾಜ್ ಅವರುಈ ಕಥೆಯನ್ನು ನಮ್ಮ ಬಳಿಗೆ ತಂದಾಗ, ಅದು ತುಂಬಾ ಆಸಕ್ತಿದಾಯಕವಾಗಿದ್ದರಿಂದ ಈ ಚಿತ್ರವನ್ನು ಮಾಡಲು ನಿರ್ಧರಿಸಿದೆವು' ಎಂದು ಹೇಳಿದರು.

ಚಿತ್ರದಲ್ಲಿ ಸಿರಿ ರಾಜ್, ಸ್ವಾತಿ ಮತ್ತು ಯಶ ಶೆಟ್ಟಿ ಸೇರಿ ಮೂವರು ನಾಯಕಿಯರು ಇದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಸಿರಿ ರಾಜ್, 'ನಾನು ಭಯದಿಂದ ಬದುಕುವ ಹುಡುಗಿಯಾಗಿ ನಟಿಸಿದ್ದೇನೆ ಮತ್ತು ಪಾತ್ರವನ್ನು ತುಂಬಾ ಚೆನ್ನಾಗಿ ಹೆಣೆಯಲಾಗಿದೆ' ಎಂದು ಹೇಳುತ್ತಾರೆ.

ಈ ಹಿಂದೆ ತೆಲುಗು ನಿರ್ದೇಶಕ ಜೆಡಿ ಚಕ್ರವರ್ತಿ ಅವರೊಂದಿಗೆ ಬಿಡುಗಡೆಯಾಗದ ಚಿತ್ರವೊಂದರಲ್ಲಿ ಕೆಲಸ ಮಾಡಿದ್ದ ನಿರ್ದೇಶಕ ರಮಣರಾಜ್, ಎಫ್‌ಐಆರ್ 6to6 ಮೂಲಕ ಎರಡನೇ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. 'ಈ ಚಿತ್ರದ ಪರಿಕಲ್ಪನೆಯು ನಾವು ಜೆಡಿ ಚಕ್ರವರ್ತಿ ಅವರೊಂದಿಗೆ ಕೆಲಸ ಮಾಡಿದಂತೆಯೇ ಇದೆ. ಇದು ಘಟನೆಯೊಂದರಲ್ಲಿ ಸಿಕ್ಕಿಬಿದ್ದ ಯುವಕ ಮತ್ತು ಆತ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಾನೆ ಎಂಬುದರ ಕುರಿತಾಗಿದೆ. ಕಥೆಯು ಸಂಜೆಯಿಂದ ಮುಂಜಾನೆಯವರೆಗೆ ನಡೆಯುತ್ತದೆ. ವಿಜಯ್ ರಾಘವೇಂದ್ರ ಅವರೊಂದಿಗೆ ಕೆಲಸ ಮಾಡಿದ್ದು ಉತ್ತಮ ಅನುಭವ. 35 ದಿನ ಇಡೀ ಚಿತ್ರವನ್ನು ರಾತ್ರಿ ವೇಳೆಯಲ್ಲಿಯೇ ಚಿತ್ರೀಕರಿಸಿದ್ದೇವೆ ಮತ್ತು ಚಿತ್ರವು ನಿಜವಾಗಿಯೂ ಚೆನ್ನಾಗಿ ಮೂಡಿಬಂದಿದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

MUDA ಕೇಸ್: ಸಿಎಂಗೆ ಕ್ಲೀನ್ ಚಿಟ್ ನೀಡಿದ್ದ ದೇಸಾಯಿ ಆಯೋಗ ವರದಿಗೆ ಸಂಪುಟ ಅನುಮೋದನೆ, ಅಧಿಕಾರಿಗಳು-ಅಕ್ರಮ ಫಲಾನುಭವಿಗಳಿಂದ ನಷ್ಟ ವಸೂಲಿಗೆ ನಿರ್ಧಾರ

ಬೆಂಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮ; ನಗರದ ಹಲವಡೆ ಸಂಚಾರ ಬದಲಾವಣೆ, ಪರ್ಯಾಯ ಮಾರ್ಗಗಳು ಹೀಗಿವೆ...

ಡಿನೋಟಿಫೈ ಮಾಡಿ ಯಡಿಯೂರಪ್ಪ ರೀತಿ ಜೈಲಿಗೆ ಹೋಗಲು ಸಿದ್ದನಿಲ್ಲ: ಕುಮಾರಸ್ವಾಮಿ ಪತ್ನಿ, ‌ಮಗನಿಂದ ಪರಿಹಾರಕ್ಕೆ ಅರ್ಜಿ ಸಲ್ಲಿಕೆ; ಡಿ.ಕೆ.ಶಿವಕುಮಾರ್

CSR ನಿಧಿ ಬಳಕೆಯಲ್ಲಿ ಇಡೀ ದೇಶದಲ್ಲೇ ರಾಜ್ಯಕ್ಕೆ ಮೂರನೇ ಸ್ಥಾನ: ಪರಮೇಶ್ವರ್

GBIT ಯೋಜನೆ ಸಂತ್ರಸ್ತ ರೈತರಿಗೆ ಎಕರೆಗೆ 1.5 ರಿಂದ 2.5 ಕೋಟಿವರೆಗೆ ಪರಿಹಾರ: ಡಿ.ಕೆ ಶಿವಕುಮಾರ್

SCROLL FOR NEXT