ಜಾಕಿ ಚಿತ್ರ ಮರು ಬಿಡುಗಡೆ 
ಸಿನಿಮಾ ಸುದ್ದಿ

ಅಪ್ಪು ಬರ್ತ್‍ಡೇಗೆ ಅಭಿಮಾನಿಗಳಿಗೆ ಗಿಫ್ಟ್; 'ಜಾಕಿ' ಚಿತ್ರ ಮರು ಬಿಡುಗಡೆ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನಕ್ಕೆ ಅವರ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ದೊರೆತಿದ್ದು, ಪುನೀತ್ ಅಭಿನಯದ ಜಾಕಿ ಚಿತ್ರ ಮರು ಬಿಡುಗಡೆ ಮಾಡಲಾಗುತ್ತಿದೆ.

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನಕ್ಕೆ ಅವರ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ದೊರೆತಿದ್ದು, ಪುನೀತ್ ಅಭಿನಯದ ಜಾಕಿ ಚಿತ್ರ ಮರು ಬಿಡುಗಡೆ ಮಾಡಲಾಗುತ್ತಿದೆ.

ಅಪ್ಪು ಹುಟ್ಟಿದ ಹಬ್ಬ ಬರುತ್ತಿದ್ದಂತೆಯೇ ಅದರ ಆಚರಣೆಗೆ ಸಾಕಷ್ಟು ಯೋಜನೆಗಳು ಸಿದ್ಧವಾಗುತ್ತಿವೆ. ಪವರ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಂದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಆಗಮಿಸಿ ನಮಿಸಲಿದ್ದಾರೆ. ಅಪ್ಪು ಜಯಂತೋತ್ಸವಕ್ಕೆ ಅಭಿಮಾನಿಗಳು ಅನ್ನದಾನ, ರಕ್ತದಾನ ಸೇರಿದಂತೆ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.

ಜಾಕಿ ಮರು ಬಿಡುಗಡೆ

ಈ ಮಧ್ಯೆ ಅಪ್ಪುವಿನ ಮೇಲಿನ ಈ ಅಭಿಮಾನಿಗಳ ಪ್ರೀತಿಗೆ ಪ್ರತಿಯಾಗಿ ದೊಡ್ಮನೆ ಕುಟುಂಬ ಕೂಡಾ ಅಂದು ಅವರಿಗಾಗಿ ವಿಶೇಷ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಪುನೀತ್ ನಟನೆಯ ದೊಡ್ಡ ಹಿಟ್ ಚಿತ್ರ 'ಜಾಕಿ'ಯನ್ನು ಥಿಯೇಟರ್‌ಗಳಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದೆ.

ಈ ಬಗ್ಗೆ ಸ್ವತಃ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾಹಿತಿ ನೀಡಿದ್ದು, 'ಪ್ರೇಕ್ಷಕರ ನೆಚ್ಚಿನ 'ಜಾಕಿ' ಮಾರ್ಚ್ 15 ರಂದು ಮತ್ತೊಮ್ಮೆ ನಿಮ್ಮೆಲ್ಲರನ್ನು ರಂಜಿಸಲು ಸಿದ್ಧವಾಗಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಬಾರಿ ಸೂರಿ ನಿರ್ದೇಶನದ ಈ ಚಿತ್ರವನ್ನು 4K ವರ್ಷನ್‌ನಲ್ಲಿ ರೀ ರಿಲೀಸ್ ಮಾಡಲಾಗುತ್ತಿದೆ.

ಬ್ಲಾಕ್ ಬಸ್ಟರ್ ಆಗಿದ್ದ ಜಾಕಿ

14 ವರ್ಷಗಳ ಹಿಂದೆ ತೆರೆ ಕಂಡಿದ್ದ 'ಜಾಕಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದರಲ್ಲಿ ಅಪ್ಪುವಿನ ಜೊತೆ ನಾಯಕಿ ಪಾತ್ರದಲ್ಲಿ ಭಾವನಾ ಮೆನನ್ ಕಾಣಿಸಿಕೊಂಡಿದ್ದರು. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದ ಸಿನಿಮಾಕ್ಕೆ ವಿ. ಹರಿಕೃಷ್ಣ ಸಂಗೀತ ಮ್ಯಾಜಿಕ್ ಮಾಡಿತ್ತು. ಅಪ್ಪು ಪರ್ಫಾರ್ಮೆನ್ಸ್, ಡ್ಯಾನ್ಸ್, ಫೈಟ್ಸ್ ಎಲ್ಲಾ ಸೇರಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಗಳಿಕೆ ಕಂಡಿತ್ತು. ಆಗಿನ ಕಾಲಕ್ಕೆ 7 ಕೋಟಿಗೆ ನಿರ್ಮಾಣವಾಗಿದ್ದ ಚಿತ್ರ 30 ಕೋಟಿ ರೂ. ಗಳಿಸಿತ್ತು. ಇದೀಗ ಸಧ್ಯದ ಟ್ರೆಂಡ್ ಆಗಿರುವ, ಹಿಟ್ ಸಿನಿಮಾಗಳನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮತ್ತೊಮ್ಮೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ