ಅಭಿಷೇಕ್ ಬಸಂತ್, ಸಂಯುಕ್ತಾ ಹೆಗ್ಡೆ 
ಸಿನಿಮಾ ಸುದ್ದಿ

'ಕ್ರೀಂ' ಮಹಿಳಾ ಪ್ರಧಾನ ಚಿತ್ರವಾಗಿ ನೋಡಿಲ್ಲ: ನಿರ್ದೇಶಕ ಅಭಿಷೇಕ್ ಬಸಂತ್

ಕ್ರೀಂ ಚಿತ್ರ ಮಾಡಬೇಕು ಅಂದುಕೊಂಡಾಗ ಅದನ್ನು ಮಹಿಳಾ ಕೇಂದ್ರಿತ ಚಿತ್ರವಾಗಿ ನೋಡಲಿಲ್ಲ. ನಾವು ಕಥೆಯೊಂದಿಗೆ ಹೋದೆವು. ಆದಾಗ್ಯೂ, ಸಂಯುಕ್ತಾ ಹೆಗ್ದೆ ಅವರೊಂದಿಗೆ ಇದು ಸಾಕಾರಗೊಂಡಿತು.

ಜನರಲ್ ಮ್ಯಾನೇಜ್ ಮೆಂಟ್ ನಲ್ಲಿ ಎಂಬಿಎ ಮತ್ತು ಸಾರ್ವಜನಿಕ ನೀತಿ, ಮಾನವ ಸಂಪನ್ಮೂಲ ವಿಷಯದಲ್ಲಿ ಎಂಎಸ್ ಪದವೀಧರರಾಗಿರುವ ಅಭಿಷೇಕ್ ಬಸಂತ್, ಎರಡು ವಿಷಯಗಳತ್ತ ಗಮನಹರಿಸಬೇಕಿದೆ. ಇವುಗಳಲ್ಲಿ ಒಂದು ಮಾರ್ಷಲ್ ಆರ್ಟ್ಸ್ ಗೆ ಸಂಬಂಧಿಸಿದ ಫೈಟ್‌ಗಳನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದರೆ, ಮತ್ತೊಂದು ಚಲನಚಿತ್ರ ನಿರ್ದೇಶನ ಮತ್ತು ಬರವಣಿಗೆ ಆಗಿತ್ತು.

ಆ ಸಮಯದಲ್ಲಿ ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕ ಅಗ್ನಿ ಶ್ರೀಧರ್ ಅವರ ದಿ ಗ್ಯಾಂಗ್‌ಸ್ಟರ್ಸ್ ಗೀತಾ ಪುಸ್ತಕ ಬಿಡುಗಡೆಯಾಗಿ, ನಿರ್ದೇಶಕ ಗೋವಿಂದ್ ನಿಹಲಾನಿ ಅಗ್ನಿ ಅವರನ್ನು ಭೇಟಿ ಮಾಡಲು ಮನೆಗೆ ಬಂದರು. ಅವರು ಗ್ಯಾಂಗ್‌ಸ್ಟರ್ಸ್ ಗೀತಾವನ್ನು ಓದಿ, ಲೇಖಕರು ಮತ್ತು ವಿಶೇಷವಾಗಿ ಕೊನೆಯ ಅಧ್ಯಾಯದ ಬಗ್ಗೆ ತಿಳಿದುಕೊಳ್ಳಲು ಬಯಸಿದರು. ಆ ಹೊತ್ತಿಗೆ ಚಲನಚಿತ್ರಗಳ ಬಗ್ಗೆ ಅವರ ಆಳವಾದ ಸಂಭಾಷಣೆಗಳಿಂದ ಆಸಕ್ತಿ ಹೊಂದಿದ್ದೆ. ಹೀಗೆ ತನ್ನ ಸಿನಿ ಜರ್ನಿ ಆರಂಭವಾಯಿತು ಎಂದು ಅಭಿಷೇಕ್ ಬಸಂತ್ ತಿಳಿಸಿದರು.

ನಂತರ ಹೆಡ್ ಬುಷ್‌ನಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಕ್ರೀಂ‌ನೊಂದಿಗೆ ಚೊಚ್ಚಲ ನಿರ್ದೇಶನ ಕೆಲಸ ಆರಂಭವಾಯಿತು ಎಂದು ಅವರು ತಿಳಿಸಿದರು. ಮಾರ್ಚ್ 1 ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಅವರು, ನರಬಲಿ ಕುರಿತಾದ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ,ಅಚ್ಯುತ್ ಕುಮಾರ್, ಅರುಣ್ ಸಾಗರ್, ಅಶ್ವಿನ್ ಹಾಸನ್, ಮತ್ತು ಇಮ್ರಾನ್ ಪಾಶಾ ಮುಂತಾದವರು ನಟಿಸಿದ್ದಾರೆ. ರೋಹಿತ್ ಸೋವರ್ ಸಂಗೀತ ನೀಡಿದ್ದು, ಸುನೋಜ್ ವೇಲಾಯುಧನ್ ಛಾಯಾಗ್ರಹಣ ಮಾಡಿದ್ದಾರೆ.

ತನ್ನ ಮೊದಲ ಚಿತ್ರ ಸಾಧ್ಯವಾದಷ್ಟು ಸಮಗ್ರವಾಗಿರಬೇಕು ಎಂದು ನಿರ್ದೇಶಕರು ಬಯಸಿದ್ದರಂತೆ. “ಶ್ರೀಧರ್ ಅವರಿಂದ ಒಂದು ಕಥೆ ಬಂದಾಗ, ಅದು ಸಾಮಾನ್ಯವಾಗಿ ವಾಸ್ತವಿಕ ಮತ್ತು ಸತ್ಯಗಳನ್ನು ಆಧರಿಸಿದ್ದು, ಹಿಡಿತದಿಂದ ಕೂಡಿರುತ್ತದೆ. ಕ್ರೀಂ ಚಿತ್ರ ಮಾಡಬೇಕು ಅಂದುಕೊಂಡಾಗ ಅದನ್ನು ಮಹಿಳಾ ಕೇಂದ್ರಿತ ಚಿತ್ರವಾಗಿ ನೋಡಲಿಲ್ಲ. ನಾವು ಕಥೆಯೊಂದಿಗೆ ಹೋದೆವು. ಆದಾಗ್ಯೂ, ಸಂಯುಕ್ತಾ ಹೆಗ್ದೆ ಅವರೊಂದಿಗೆ ಇದು ಸಾಕಾರಗೊಂಡಿತು. ಹದಿಹರೆಯದವನಾಗಿದ್ದಾಗ ಪುಟ್ಟಣ ಕಣಗಾಲ್ ಅವರ ಚಿತ್ರಗಳಿಂದ ಸ್ಪೂರ್ತಿ ಪಡೆದಿದ್ದೆ. ಭಯಾನಕ ಮತ್ತು ಅಲೌಕಿಕ ಅಂಶಗಳಿಗಾಗಿ ಕ್ರೀಂ ಚಿತ್ರವನ್ನು ಆರಿಸಿದೆ. ಎರಡನೆಯದಾಗಿ, ಇವು ಪ್ರಪಂಚದಾದ್ಯಂತ ನಡೆಯುತ್ತಿರುವ ಘಟನೆಗಳು, ಮತ್ತು ಕೊನೆಯದಾಗಿ, ನಾವು ಅದರ ಸುತ್ತಲೂ ತರಬಹುದಾದ ತಾಂತ್ರಿಕ ಅಂಶಗಳನ್ನು, ನನ್ನ ಮೊದಲ ಚಿತ್ರದಲ್ಲಿ ನಾನು ಅನ್ವೇಷಿಸಲು ಬಯಸುತ್ತೇನೆ ಎಂದು ಅವರು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT