ಆನ್‌ಲೈನ್ ಮದುವೆ ಆನ್‌ಲೈನ್ ಶೋಭನ ಚಿತ್ರತಂಡ 
ಸಿನಿಮಾ ಸುದ್ದಿ

ಜಗಪತಿ-ಸುಶ್ಮಿತಾ ಅಭಿನಯದ 'ಆನ್‌ಲೈನ್‌ ಮದುವೆ ಆಫ್‌ಲೈನ್ ಶೋಭ'ನ ಚಿತ್ರಕ್ಕೆ ಯು/ಎ ಪ್ರಮಾಣಪತ್ರ

'ಮಜಾ ಭಾರತ' ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿದ್ದ ಜಗ್ಗಪ್ಪ ಮತ್ತು ಸುಶ್ಮಿತಾ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ರಿಯಲ್ ಲೈಫಿನ ದಂಪತಿ ಇದೀಗ ವೇಂಪಲ್ಲಿ ಬಾವಾಜಿ ನಿರ್ದೇಶನದ 'ಆನ್‌ಲೈನ್ ಮದುವೆ ಆನ್‌ಲೈನ್ ಶೋಭನ' ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

'ಮಜಾ ಭಾರತ' ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿದ್ದ ಜಗ್ಗಪ್ಪ ಮತ್ತು ಸುಶ್ಮಿತಾ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ರಿಯಲ್ ಲೈಫಿನ ದಂಪತಿ ಇದೀಗ ವೇಂಪಲ್ಲಿ ಬಾವಾಜಿ ನಿರ್ದೇಶನದ 'ಆನ್‌ಲೈನ್ ಮದುವೆ ಆನ್‌ಲೈನ್ ಶೋಭನ' ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, ಇದೇ ತಿಂಗಳು ಬಿಡುಗಡೆಯಾಗಲಿದೆ.

ಅಪ್ಸರಾ ಮೂವೀಸ್ ನಿರ್ಮಿಸಿದ ಈ ಸಿನಿಮಾ ಆನ್‌ಲೈನ್ ಅಪ್ಲಿಕೇಶನ್‌ ಮೂಲಕ ಒಂದಾಗುವ ಯುವ ಜೋಡಿಯ ಸುತ್ತ ಸುತ್ತುವ ಹಾಸ್ಯಮಯ ಕಥಾಹಂದರವನ್ನು ಹೊಂದಿದೆ. 

ಚಿತ್ರಕಥೆಯನ್ನೂ ಬರೆದಿರುವ ನಿರ್ದೇಶಕ ವೇಂಪಲ್ಲಿ ಬಾವಾಜಿ ಮಾತನಾಡಿ, ಚಿತ್ರವು ಸಂಪೂರ್ಣ ಮನರಂಜನಾ ಕಥಾಹಂದರವನ್ನು ಹೊಂದಿದೆ. ಈ ಚಿತ್ರಕ್ಕೆ ಪರ್ಫೆಕ್ಟ್ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾಗ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ತಮ್ಮ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಫೇಮಸ್ ಆಗಿದ್ದ ಜಗಪತಿ ಮತ್ತು ಸುಶ್ಮಿತಾ ಸಿಕ್ಕರು. ಇಂದಿನ ಯುವಕರು ಮತ್ತು ಸಾಮಾಜಿಕ ಮಾಧ್ಯಮಗಳ ನಡುವಿನ ಸಂಪರ್ಕವನ್ನು ಈ ಚಿತ್ರದಲ್ಲಿ ಸುದೀರ್ಘವಾಗಿ ಹೈಲೈಟ್ ಮಾಡಲಾಗಿದೆ ಎಂದರು.

ಜಗಪತಿ ಮತ್ತು ಸುಶ್ಮಿತಾ ಜೊತೆಗೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಿರುಂಡೆ ರಘುರಾಮ್, ಗಜೇಂದ್ರ, ರಾಘವಿ ಮತ್ತು ಆ್ಯಂಕರ್ ದಯಾನಂದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಬಾಲು ಅವರ ಛಾಯಾಗ್ರಹಣವಿದ್ದು, ಅಲೆಕ್ಸ್ ಅವರ ಹಿನ್ನೆಲೆ ಸಂಗೀತವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ