ದಳಪತಿ ವಿಜಯ್ ಮತ್ತು ಲೋಕೇಶ್ ಕನಕರಾಜ್ 
ಸಿನಿಮಾ ಸುದ್ದಿ

ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್ ಅವರನ್ನು ಮಾನಸಿಕ ತಪಾಸಣೆಗೊಳಪಡಿಸಬೇಕು: ಮಧುರೈ ಹೈಕೋರ್ಟ್‌ಗೆ ಅರ್ಜಿ

ಮಧುರೈನ ಓತಕಡೈನ ರಾಜಾ ಮುರುಗನ್ ಅವರು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಲೋಕೇಶ್ ಕನಕರಾಜ್ ಅವರ ಎಲ್ಲಾ ಸಿನಿಮಾಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಕಾರಣಕ್ಕಾಗಿ ಅವರನ್ನು ಮಾನಸಿಕವಾಗಿ ಪರೀಕ್ಷಿಸಬೇಕು ಎಂದು ಕೋರಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಹಲವಾರು ಮಂದಿ ಯುವ, ಸೃಜನಶೀಲ ನಿರ್ದೇಶಕರ ತಂಡವೇ ಇದೆ. ಆ ಪೈಕಿ ನಿರ್ದೇಶಕ ಲೋಕೇಶ್ ಕನಕರಾಜ್ ಕೂಡ ಒಬ್ಬರು. ದಳಪತಿ ವಿಜಯ್ ಅಭಿನಯದ ಅವರ ಇತ್ತೀಚಿನ ಚಿತ್ರ 'ಲಿಯೋ' ಬ್ಲಾಕ್‌ಬಸ್ಟರ್ ಆಗಿತ್ತು.

ಆದಾಗ್ಯೂ, ಸಿನಿಮಾ ತಕ್ಕಮಟ್ಟಿಗೆ ಟೀಕೆಗಳನ್ನು ಎದುರಿಸಿತು. ವಿಶೇಷವಾಗಿ ಚಿತ್ರದ ದ್ವಿತೀಯಾರ್ಧದ ಕುರಿತು ಸಿನಿಪ್ರಿಯರಿಂದ ಟೀಕೆ ವ್ಯಕ್ತವಾಯಿತಾದರೂ, 'ಲಿಯೋ'ನಲ್ಲಿನ ಹಿಂಸಾಚಾರದ ಬಗ್ಗೆ ವ್ಯಾಪಕ ಮಾತುಗಳು ಕೇಳಿಬಂದವು.

ಮಧುರೈನ ಓತಕಡೈನ ರಾಜಾ ಮುರುಗನ್ ಅವರು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಲೋಕೇಶ್ ಕನಕರಾಜ್ ಅವರ ಎಲ್ಲಾ ಸಿನಿಮಾಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಕಾರಣಕ್ಕಾಗಿ ಅವರನ್ನು ಮಾನಸಿಕ ತಪಾಸಣೆಗೆ ಒಳಪಡಿಸಬೇಕು ಎಂದು ಕೋರಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳು, ಮಾದಕ ದ್ರವ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಅತಿಯಾದ ಬಳಕೆ ಮತ್ತು ಪೊಲೀಸರ ಬೆಂಬಲದೊಂದಿಗೆ ಅಪರಾಧಗಳನ್ನು ಮಾಡುವ ಪಾತ್ರಗಳನ್ನು ಚಿತ್ರಿಸುವ ಮೂಲಕ ಚಲನಚಿತ್ರವು ಪ್ರೇಕ್ಷಕರಲ್ಲಿ ಕೆಟ್ಟ ಅಭಿರುಚಿಯನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದ್ದಾರೆ.

ಜೊತೆಗೆ 'ಲಿಯೋ' ಚಿತ್ರವನ್ನು ಸೆನ್ಸಾರ್ ಮಂಡಳಿ ಸರಿಯಾಗಿ ಪರಿಶೀಲಿಸಬೇಕು ಮತ್ತು ಹಿಂಸೆಗೆ ಪ್ರಚೋದನೆ ನೀಡುವ ದೃಶ್ಯಗಳನ್ನು ಚಿತ್ರೀಕರಿಸಿದ್ದಕ್ಕಾಗಿ ಲೋಕೇಶ್ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಜನವರಿ 3 ರಂದು ನ್ಯಾಯಮೂರ್ತಿಗಳಾದ ಕೃಷ್ಣಕುಮಾರ್ ಮತ್ತು ವಿಜಯಕುಮಾರ್ ಅವರು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ, ರಾಜಾ ಮುರುಗನ್ ಅವರು ಹಾಜರಾಗಿರಲಿಲ್ಲ. ಇದೀಗ ಪ್ರಕರಣದ ವಿಚಾರಣೆಯನ್ನು ಮರುದಿನಕ್ಕೆ ಮುಂದೂಡಲಾಗಿದೆ.

'ಲಿಯೋ' ವಿಶ್ವದಾದ್ಯಂತ 600 ಕೋಟಿ ರೂ. ಗಳನ್ನು ಗಳಿಸಿದೆ. ಈ ಚಿತ್ರವು 2021ರ ಆ್ಯಕ್ಷನ್ ಥ್ರಿಲ್ಲರ್ 'ಮಾಸ್ಟರ್' ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ನಡುವಿನ ಎರಡನೇ ಸಹಯೋಗವನ್ನು ಗುರುತಿಸುತ್ತದೆ.

'ಲಿಯೋ' ಚಿತ್ರದಲ್ಲಿ ತ್ರಿಶಾ ಕೃಷ್ಣನ್, ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್ ಮತ್ತು ಮ್ಯಾಥ್ಯೂ ಥಾಮಸ್ ಸೇರಿದಂತೆ ಇತರರು ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT