ದಿ ರಾಜಾ ಸಾಬ್ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಸಲಾರ್ ಯಶಸ್ಸಿನ ಬಳಿಕ ಕ್ರೇಜ್ ಹೆಚ್ಚಿಸಿಕೊಂಡ ನಟ ಪ್ರಭಾಸ್; ಮುಂದಿನ ಸಿನಿಮಾ 'ದಿ ರಾಜಾ ಸಾಬ್' ಘೋಷಣೆ

'ಸಲಾರ್' ಯಶಸ್ಸಿನ ನಂತರ ನಟ ಪ್ರಭಾಸ್ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಟ ಪ್ರಭಾಸ್ ಇದೀಗ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ಚಿತ್ರಕ್ಕೆ 'ದಿ ರಾಜಾ ಸಾಬ್' ಎಂದು ಹೆಸರಿಡಲಾಗಿದ್ದು, ನಟನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಹೈದರಾಬಾದ್: 'ಸಲಾರ್' ಯಶಸ್ಸಿನ ನಂತರ ನಟ ಪ್ರಭಾಸ್ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಟ ಪ್ರಭಾಸ್ ಇದೀಗ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ಚಿತ್ರಕ್ಕೆ 'ದಿ ರಾಜಾ ಸಾಬ್' ಎಂದು ಹೆಸರಿಡಲಾಗಿದ್ದು, ನಟನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಚಿತ್ರತಂಡದ ಪ್ರಕಾರ, ಮುಂಬರುವ ಈ ಚಿತ್ರವು ರೊಮ್ಯಾಂಟಿಕ್ ಹಾರರ್ ಎಂಟರ್‌ಟೈನರ್ ಆಗಿದ್ದು, ಇದನ್ನು ಮಾರುತಿ ನಿರ್ದೇಶಿಸಲಿದ್ದಾರೆ. 'ಪ್ರತಿ ರೋಜು ಪಂಡಗೆ' ಮತ್ತು 'ಪ್ರೇಮ ಕಥಾ ಚಿತ್ರಂ' ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಮಾರುತಿ ಅವರು ಪ್ರಭಾಸ್ ಜೊತೆ ಕೆಲಸ ಮಾಡಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ದಿ ರಾಜಾ ಸಾಬ್ ಅನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವ ಪ್ರಸಾದ್ ನಿರ್ಮಿಸಲಿದ್ದಾರೆ.

'ದಿ ರಾಜಾ ಸಾಬ್' ಚಿತ್ರವು ಇಲ್ಲಿಯವರೆಗಿನ ನನ್ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಪ್ರಭಾಸ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯೊಂದಿಗೆ ಕೆಲಸ ಮಾಡುವುದು ಸಿನಿಮಾ ನಿರ್ದೇಶಕನಾಗಿ ನನಗೆ ಗೌರವ ಮತ್ತು ರೋಮಾಂಚನಕಾರಿಯಾಗಿದೆ ಎನ್ನುತ್ತಾರೆ ಮಾರುತಿ.

'ನಮ್ಮ ಪ್ರೇಕ್ಷಕರಿಗೆ ಭವ್ಯವಾದ ಹಾರರ್ ಅನುಭವವನ್ನು ನೀಡಲು ನಾವು ಸಜ್ಜಾಗಿದ್ದೇವೆ. ಪ್ರಭಾಸ್ ಅವರ ಎಲೆಕ್ಟ್ರಿಫೈಯಿಂಗ್ ಸ್ಕ್ರೀನ್ ಲುಕ್ ನಮ್ಮ ಭಯಾನಕ ನಿರೂಪಣೆಯೊಂದಿಗೆ ಪ್ರೇಕ್ಷಕರನ್ನು ಬೆರಗುಗೊಳಿಸುತ್ತದೆ' ಎಂದು ನಿರ್ದೇಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಕಾರ್ತಿಕೇಯ 2' ಮತ್ತು 'ಧಮಾಕಾ'ದಂತಹ ಸಿನಿಮಾಗಳನ್ನು ನಿರ್ಮಿಸಿರುವ ವಿಶ್ವ ಪ್ರಸಾದ್, ಮುಂಬರುವ ರೊಮ್ಯಾಂಟಿಕ್ ಹಾರರ್ ಎಂಟರ್‌ಟೈನರ್‌ಗಾಗಿ ಪ್ರಭಾಸ್ ಅವರೊಂದಿಗೆ ಕೆಲಸ ಮಾಡಲು ಬ್ಯಾನರ್ ಥ್ರಿಲ್ ಆಗಿದೆ. ಅವರು ನಿಜವಾಗಿಯೂ ಪ್ಯಾನ್-ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರು ನಟನಾಗಿ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಅವರು ಈ ಪಾತ್ರಕ್ಕೆ ಹೆಚ್ಚು ಸೂಕ್ತರು ಎಂದು ನಾವು ನಿಜವಾಗಿಯೂ ನಂಬುತ್ತೇವೆ ಎಂದು ಹೇಳಿದರು.

ಚಿತ್ರದಲ್ಲಿ ಪ್ರಭಾಸ್ ಅವರನ್ನು ಪ್ರೇಕ್ಷಕರು ಮಾಸ್ ಮತ್ತು ವಿಂಟೇಜ್ ಲುಕ್‌ನಲ್ಲಿ ಕಾಣಬಹುದು. ಮಾರುತಿ ಅವರ ನಿರ್ದೇಶನದೊಂದಿಗೆ, ಈ ಪ್ರಯಾಣವನ್ನು ಪ್ರಾರಂಭಿಸಲು ನಾವು ನಿಜವಾಗಿಯೂ ಎದುರುನೋಡುತ್ತಿದ್ದೇವೆ ಎಂದು ನಿರ್ಮಾಪಕರು ಹೇಳುತ್ತಾರೆ.

ಅಲಾ ವೈಕುಂಠಪುರಮುಲೊ ಖ್ಯಾತಿಯ ಸಂಗೀತ ಸಂಯೋಜಕ ಥಮನ್ ಎಸ್ 'ದಿ ರಾಜಾ ಸಾಬ್'ಗೆ ಸಂಗೀತ ನೀಡಲಿದ್ದಾರೆ. ಚಿತ್ರವು ತಮಿಳು, ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತಬ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ

Video: ಬಿಡದಿ ಟೌನ್‌ಶಿಪ್ ಪಿಸುಮಾತು ವಿವಾದ: ಮಧು ಬಂಗಾರಪ್ಪ ಜೊತೆಗಿನ ಮಾತುಕತೆ ಬಗ್ಗೆ ಬಿ.ವೈ. ವಿಜಯೇಂದ್ರ ಸ್ಪಷ್ಟನೆ

'ಬೇಡ ಬ್ರೋ': ಬೆಂಗಳೂರು ಪೊಲೀಸರ ಭರ್ಜರಿ ಬೇಟೆ; 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 39 ಡ್ರಗ್ ಪೆಡ್ಲರ್‌ಗಳ ಬಂಧನ!

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!