ಆ್ಯಪಲ್ ಕಟ್ ಟೀಸರ್ ಬಿಡುಗಡೆ 
ಸಿನಿಮಾ ಸುದ್ದಿ

ಸಿಂಧೂಗೌಡ ನಿರ್ದೇಶನದ 'ಆ್ಯಪಲ್ ಕಟ್' ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಯೋಗರಾಜ್ ಭಟ್!

ದಿವಂಗತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ ಸಿಂಧು ಗೌಡ ಆ್ಯಪಲ್ ಕಟ್ ಚಿತ್ರದ ಮೂಲಕ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಭವ್ಯ ಸಮಾರಂಭದಲ್ಲಿ ಯೋಗರಾಜ್ ಭಟ್ ಮತ್ತು ರಾಗಿಣಿ ಚಿತ್ರದ ಟೀಸರ್ ಅನಾವರಣಗೊಳಿಸಿದರು.

ದಿವಂಗತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ ಸಿಂಧು ಗೌಡ ಆ್ಯಪಲ್ ಕಟ್ ಚಿತ್ರದ ಮೂಲಕ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಭವ್ಯ ಸಮಾರಂಭದಲ್ಲಿ ಯೋಗರಾಜ್ ಭಟ್ ಮತ್ತು ರಾಗಿಣಿ ಚಿತ್ರದ ಟೀಸರ್ ಅನಾವರಣಗೊಳಿಸಿದರು.

ಮತ್ತೊಂದು ವಿಶೇಷ ಏನೆಂದರೆ ಯೋಗರಾಜ್ ಭಟ್ ಟೀಸರ್‌ಗೆ ನಿರೂಪಣೆಗೆ ಧ್ವನಿ ನೀಡಿದ್ದಾರೆ ಮತ್ತು ಚಿತ್ರಕ್ಕೆ ಹಾಡನ್ನೂ ಬರೆದಿದ್ದಾರೆ. ಆಪಲ್ ಕಟ್‌ಗೆ ಕಥೆ ಮತ್ತು ಚಿತ್ರಕಥೆಯನ್ನು ಸಹ ರಚಿಸಿರುವ ಸಿಂಧು, ಇದನ್ನು ರಹಸ್ಯ ಎಂದು ಲೇಬಲ್ ಮಾಡಿದ್ದಾರೆ.

ಸಾನ್ವಿ ಪ್ರೊಡಕ್ಷನ್ ಅಡಿಯಲ್ಲಿ ಶಿಲ್ಪಾ ಪ್ರಸನ್ನ ನಿರ್ಮಿಸಿರುವ ಈ ಚಿತ್ರವು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್‌ನಲ್ಲಿದ್ದು, ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ. ಆಪಲ್ ಕಟ್ ನಲ್ಲಿ, ಸೂರ್ಯ ಗೌಡ ಮತ್ತು ನಟಿ ಅಶ್ವಿನಿ ಪೋಲೆಪಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ರಾಜೇಶ್ ಗೌಡ ಅವರ ಛಾಯಾಗ್ರಹಣವಿದೆ.

ಸತ್ಯ ಪ್ರಕಾಶ್ ಅವರ ಸಾಹಿತ್ಯ ಮತ್ತು ವೀರ್ ಸಮರ್ಥ್ ಅವರ ಸಂಗೀತ ಮತ್ತು ಸುಚೇಂದ್ರ ಎನ್ ಮೂರ್ತಿ ಸಂಕಲನಕಾರರಾಗಿದ್ದಾರೆ. ಚಿತ್ರವು ಒಂದು ಹೊಸ ಪ್ರಕಾರವನ್ನು ಪರಿಶೋಧಿಸುತ್ತದೆ, ಪರಸ್ಪರ ಸಂಬಂಧಿತ ಕೊಲೆಗಳ ಸರಣಿಯೊಂದಿಗೆ ಹೆಣೆದುಕೊಂಡಿರುವ ಸಿನಿಮಾದಲ್ಲಿ ಮಾನವ ತಲೆಬುರುಡೆಯ ಅಧ್ಯಯನವನ್ನು ಕೇಂದ್ರೀಕರಿಸುತ್ತದೆ.

ಸಿಂಧು ಆರಂಭದಲ್ಲಿ ಸ್ಮಶಾನದಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ನಿರ್ಧರಿಸಿದ್ದರು.  ಆದರೆ ಎದುರಾದ ತೊಡಕುಗಳಿಂದಾಗಿ ತನ್ನ ಪ್ಲಾನ್ ಬದಲಾಯಿಸಿದರು. 29 ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ ತನ್ನ ದಿವಂಗತ ತಂದೆ  ರಾಜ್ ಕಿಶೋರ್ ಪರಂಪರೆಯ ಬಗ್ಗೆ ಅವರು ಚರ್ಚಿಸಿದರು .‘ಆಪಲ್ ಕಟ್’, ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ಜೊತೆಗೆ ನಾನು ಮಾನವಶಾಸ್ತ್ರ ಓದಿದ್ದು, ಚಿತ್ರದಲ್ಲಿ ಮಾನವಶಾಸ್ತ್ರದ ಒಂದು ಅಂಶ ಸೇರಿಸಲಾಗಿದೆ. ಶವವೊಂದನ್ನು ಸಹ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು. ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT