ರಜಿನಿಕಾಂತ್ 
ಸಿನಿಮಾ ಸುದ್ದಿ

'ಸಂಘಿ' ಎಂದರೆ ಕೆಟ್ಟ ಪದ ಎಂದು ಮಗಳು ಹೇಳಿಲ್ಲ: ರಜನಿಕಾಂತ್ ಸ್ಪಷ್ಟನೆ

'ಸಂಘಿ' ಎಂದರೆ ಕೆಟ್ಟ ಪದ ಎಂದು ಮಗಳು ಹೇಳಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದು, ಮಗಳು ಐಶ್ವರ್ಯಾ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಚೆನ್ನೈ: 'ಸಂಘಿ' ಎಂದರೆ ಕೆಟ್ಟ ಪದ ಎಂದು ಮಗಳು ಹೇಳಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದು, ಮಗಳು ಐಶ್ವರ್ಯಾ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ 'ಲಾಲ್ ಸಲಾಂ' ಚಿತ್ರದ ಆಡಿಯೋ ಬಿಡುಗಡೆ ವೇಳೆ ಮಾತನಾಡಿದ್ದ ಐಶ್ವರ್ಯಾ ರಜನಿಕಾಂತ್, ನನ್ನ ತಂದೆಯನ್ನು ಸಂಘಿ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆದರೆ ಅವರು ಸಂಘಿಯಲ್ಲ. ಅಪ್ಪ ಎಲ್ಲಾ ಧರ್ಮಗಳನ್ನು ಪ್ರೀತಿಸುವ ಆಧ್ಯಾತ್ಮಿಕ ವ್ಯಕ್ತಿ ಮತ್ತು ಹೀಗಿರುವಾಗ ತಂದೆಯನ್ನು ಏಕೆ (ಸಂಘಿ ಎಂದು) ವಿವರಿಸಬೇಕು ಎಂದು ಭಾವನಾತ್ಮಕವಾಗಿ ಹೇಳಿದ್ದರು. 

ಆದರೆ ಅವರ ಹೇಳಿಕೆಯನ್ನು ಮತ್ತೆ ಕೆಲವರು ಟೀಕೆ ಮಾಡಿ ಸಂಘಿ ಎಂಬುದು ಕೆಟ್ಟಪದವೇ ಎಂದು ಕಿಡಿಕಾರಿದ್ದರು. ಈ ಟೀಕೆಗಳಿಗೆ ಇದೀಗ ಸ್ವತಃ ರಜನಿಕಾಂತ್ ಸ್ಪಷ್ಟನೆ ನೀಡಿದ್ದು, 'ತಮ್ಮ ಪುತ್ರಿ ಐಶ್ವರ್ಯಾ 'ಸಂಘಿ' ಅನ್ನು 'ಕೆಟ್ಟ ಪದ' ಎಂದು ಹೇಳಿಲ್ಲ. ಆಧ್ಯಾತ್ಮಿಕ ವ್ಯಕ್ತಿ ಎಂದು ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.

'ಸಂಘಿ' ಎಂಬುದು ಬಲಪಂಥೀಯ ಬೆಂಬಲಿಗ ಅಥವಾ ಕಾರ್ಯಕರ್ತನನ್ನು ವಿವರಿಸಲು ಬಳಸುವ ಆಡುಮಾತಿನ ಪದವಾಗಿದೆ. ಅಂದಹಾಗೆ ಲಾಲ್ ಸಲಾಂ ಚಿತ್ರವು ಐಶ್ವರ್ಯಾ ನಿರ್ದೇಶನದ ಚಿತ್ರವಾಗಿದ್ದು, ಇದೇ ಫೆಬ್ರವರಿ 9 ರಂದು ಬಿಡುಗಡೆಯಾಗಲಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT