ಶಿವಣ್ಣ ಮತ್ತು ಗಣೇಶ್ 
ಸಿನಿಮಾ ಸುದ್ದಿ

ಶಿವಣ್ಣ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ: 'ಶಿವಗಣ' ಚಿತ್ರಕ್ಕೆ ನಂದ ಕಿಶೋರ್ ಆ್ಯಕ್ಷನ್ ಕಟ್!

ಕೋಟಿಗೊಬ್ಬ 2 ಹಾಗೂ ಕೋಟಿಗೊಬ್ಬ 3 ನಂತಹ ಹಿಟ್‌ಗಳಿಗೆ ಹೆಸರುವಾಸಿಯಾದ ನಿರ್ಮಾಪಕ ಸೂರಪ್ಪ ಬಾಬು ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಶಿವಣ್ಣ ಮತ್ತು ಗಣೇಶ್ ತೆರೆಯ ಮೇಲೆ ಒಂದಾಗಿದ್ದಾರೆ.

ಕೋಟಿಗೊಬ್ಬ 2 ಹಾಗೂ ಕೋಟಿಗೊಬ್ಬ 3 ನಂತಹ ಹಿಟ್‌ಗಳಿಗೆ ಹೆಸರುವಾಸಿಯಾದ ನಿರ್ಮಾಪಕ ಸೂರಪ್ಪ ಬಾಬು ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಶಿವಣ್ಣ ಮತ್ತು ಗಣೇಶ್ ತೆರೆಯ ಮೇಲೆ ಒಂದಾಗಿದ್ದಾರೆ.

ಶಿವಗಣ ಎಂಬ ಟೈಟಲ್ ನ ಸಿನಿಮಾವನ್ನು ನಂದ ಕಿಶೋರ್ ಅವರು ನಿರ್ದೇಶನ ಮಾಡಲಿದ್ದಾರೆ. ಅಧ್ಯಕ್ಷ, ರನ್ನ ವಿಕ್ಟರಿ, ಮುಕುಂದ ಮುರಾರಿ, ಮತ್ತು ಪೊಗರು ನಿರ್ದೇಶಕರು ಪ್ರಸ್ತುತ ಮೋಹನ್ ಲಾಲ್ ಜೊತೆ ಚೊಚ್ಚಲ ಮಲಯಾಳಂ ಸಿನಿಮಾ ವೃಷಭದಲ್ಲಿ ನಿರತರಾಗಿದ್ದಾರೆ .

ಶಿವಣ್ಣ ಮತ್ತು ಗಣೇಶ್ ಅವರೊಂದಿಗಿನ ಹೊಸ ಸಿನಿಮಾ ಆರಂಭಿಸುವ ಮುನ್ನ ಸೆಪ್ಟೆಂಬರ್‌ನಲ್ಲಿ ತಮ್ಮ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಲು ಯೋಜಿಸಿದ್ದಾರೆ. ಈ ಚಿತ್ರವು ನಟರ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿದ್ದು ಕೌಟುಂಬಿಕ-ಕಮರ್ಷಿಯಲ್ ಎಂಟರ್‌ಟೈನರ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಮುಹೂರ್ತ ಸಮಾರಂಭದೊಂದಿಗೆ ಈ ಯೋಜನೆಯು ಅಧಿಕೃತವಾಗಿ ಪ್ರಾರಂಭವಾಗಲಿದೆ.

ಇದಲ್ಲದೇ ಶಿವರಾಜಕುಮಾರ್ ಮತ್ತು ಗಣೇಶ್ ಬೇರೆ ಬೇರೆ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವಣ್ಣ ನಟನೆಯ ಭೈರತಿ ರಣಗಲ್, ಸೆಪ್ಟೆಂಬರ್ ಬಿಡುಗಡೆಗೆ ಸಿದ್ಧವಾಗಿದೆ, ಜೊತೆಗೆ ಅರ್ಜುನ್ ಜನ್ಯ ಅವರ 45, ರೋಹಿತ್ ಪದಕಿ ಅವರ ಉತ್ತರಕಾಂಡ, ಹೇಮಂತ್ ಎಂ ರಾವ್ ಅವರ ಭೈರವನ ಕೊನೆ ಪಾಠ , ಲಕ್ಕಿ ಗೋಪಾಲ್ ಅವರ ಐ ವಿ ರಿಟರ್ನ್ಸ್, ನಿರ್ದೇಶಕ ಕಾರ್ತಿಕ್ ಅದ್ವೈತ್ (ಅವರ 131 ನೇ ಚಿತ್ರ) ಮತ್ತು ಶ್ರೀನಿ ಅವರ ಹೆಸರಿಡದ ಚಿತ್ರಗಳು ಸಾಲಿನಲ್ಲಿವೆ. ಅದರ ಜೊತೆಗೆ ರಾಮ್ ಚರಣ್ ಅವರ ಮುಂಬರುವ ತೆಲುಗು ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಏತನ್ಮಧ್ಯೆ, ಶ್ರೀನಿವಾಸ್ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಬಿಡುಗಡೆಗೆ ಗಣೇಶ್ ಸಜ್ಜಾಗುತ್ತಿದ್ದಾರೆ ಮತ್ತು ರಮೇಶ್ ಅರವಿಂದ್ ಜೊತೆಗೆ ವಿಖ್ಯಾತ್ ಅವರ ನಿರ್ದೇಶನದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಪನ್ನಗಾ ಭರಣ ನಿರ್ದೇಶನದ ಯೋಜನೆಗೂ ಹಸಿರು ನಿಶಾನೆ ತೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ