ಸಪ್ತಮಿಗೌಡ 
ಸಿನಿಮಾ ಸುದ್ದಿ

ಕಾನೂನು ಸಮರಕ್ಕಿಳಿದ ಸಪ್ತಮಿಗೌಡ: ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ವಿರುದ್ಧ ಮಾನನಷ್ಟ ಮೊಕದ್ದಮೆ!

ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ನಟಿ ಸಪ್ತಮಿ ಗೌಡ ಕಾನೂನು ಸಮರಕ್ಕೆ ಇಳಿದಿದ್ದಾರೆ. ಶ್ರೀದೇವಿ ನನ್ನ ಹೆಸರನ್ನು ಹಾಳು ಮಾಡುತ್ತಿದ್ದಾರೆ, ಚಾರಿತ್ರ್ಯವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಟಿ ಸಿವಿಲ್‌ ಕೋರ್ಟ್‌ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಬೆಂಗಳೂರು: ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ನಟಿ ಸಪ್ತಮಿ ಗೌಡ ಕಾನೂನು ಸಮರಕ್ಕೆ ಇಳಿದಿದ್ದಾರೆ. ಶ್ರೀದೇವಿ ನನ್ನ ಹೆಸರನ್ನು ಹಾಳು ಮಾಡುತ್ತಿದ್ದಾರೆ, ಚಾರಿತ್ರ್ಯವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಟಿ ಸಿವಿಲ್‌ ಕೋರ್ಟ್‌ಗೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ವಿಚ್ಛೇದನಕ್ಕೆ ತಮ್ಮ ಹೆಸರನ್ನು ಎಳೆದು ತಂದ ಶ್ರೀದೇವಿ ಭೈರಪ್ಪ ವಿರುದ್ಧ ಸಪ್ತಮಿ ಗೌಡ ಕೋರ್ಟ್‌ ಮೊರೆ ಹೋಗಿದ್ದಾರೆ. ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀದೇವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನು ಪರಿಶೀಲಿಸಿದ ಕೋರ್ಟ್‌ ಮಾನಹಾನಿ ಹೇಳಿಕೆಯನ್ನು ನೀಡದಂತೆ ಆದೇಶದಲ್ಲಿ ತಿಳಿಸಿದೆ. ಸದ್ಯ ಶ್ರೀದೇವಿ ಅಮೆರಿಕಾದಲ್ಲಿದ್ದು, ಇನ್ನೇನು ಇದೇ ಪ್ರಕರಣದ ವಿಚಾರಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಸಪ್ತಮಿ ಗೌಡ ಹಾಗೂ ಯುವ ರಿಲೇಶನ್‌ಶಿಪ್‌ನಲ್ಲಿದ್ದಾರೆ. ವರ್ಷದಿಂದ ಅಫೇರ್ ಹೊಂದಿದ್ದಾರೆ. ಡಿಸೆಂಬರ್‌ 2023ರಲ್ಲಿ ನಾನು ಅಮೇರಿಕಾದಿಂದ ಭಾರತಕ್ಕೆ ವಾಪಸ್ ಆದಾಗ ಶಾಕ್ ಆಯ್ತು. ಖಾಸಗಿ ಹೋಟೆಲ್‌ ರೂಮ್‌ನಲ್ಲಿ ಸಪ್ತಮಿ ಗೌಡ ಜೊತೆ ಯುವ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ಅಫೇರ್ ಮುಂದುವರೆಸುವ ಸಲುವಾಗಿ ಬಲವಂತವಾಗಿ ಓದಿನ ನೆಪವೊಡ್ಡಿ ನನ್ನನ್ನ ಅಮೇರಿಕಾಕ್ಕೆ ಕಳುಹಿಸಲಾಯಿತು ಎಂದು ಲೀಗಲ್ ನೋಟೀಸ್‌ಗೆ ನೀಡುವ ಉತ್ತರದಲ್ಲಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು. ಈ ಕುರಿತಾಗಿ ಎಲ್ಲೆಡೆ ವರದಿ ಪ್ರಸಾರ ಆಯ್ತು. ಇದೀಗ ಸಪ್ತಮಿ ಗೌಡ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರೀದೇವಿ ಭೈರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಶ್ರೀದೇವಿ ಭೈರಪ್ಪ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಸಪ್ತಮಿ ಗೌಡ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದರು. ತಮ್ಮ ವಿರುದ್ಧ ಶ್ರೀದೇವಿ ಭೈರಪ್ಪ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಡಿವೋರ್ಸ್ ವಿಚಾರದಲ್ಲಿ ತಮ್ಮ ಹೆಸರನ್ನ ತಂದು ಚಾರಿತ್ರ್ಯವಧೆ ಮಾಡಲಾಗಿದೆ. ಇದರಿಂದ ತಮಗೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಆಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದ ಸಪ್ತಮಿ ಗೌಡ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಸಲ್ಲಿಸಿದ್ದರು. ಸಪ್ತಮಿ ಗೌಡ ಸಲ್ಲಿಸಿದ ಮನವಿಗೆ ಪುರಸ್ಕರಿಸಿದ ಸಿಟಿ ಸಿವಿಲ್ ಕೋರ್ಟ್ ನಿರ್ಬಂಧಕಾಜ್ಞೆ ಆದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಲ್ಯಾಣ ಕರ್ನಾಟಕ ನೀರಾವರಿಗೆ 70,000 ಕೋಟಿ ರೂ.ಗಳ ಅನುದಾನ: ಸಿಎಂ ಸಿದ್ದರಾಮಯ್ಯ ಪ್ರತಿಜ್ಞೆ

ಹಣ ವರ್ಗಾವಣೆ, ಅಕ್ರಮ ನಿವೇಶನ ಹಂಚಿಕೆ ಆರೋಪ: ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನ

ACCಗೆ ಹೊಸ ತಲೆನೋವು: 'ಪ್ರಶಸ್ತಿ ಪ್ರದಾನ ಗಣ್ಯರ ಪಟ್ಟಿಯಿಂದ ಅವನ ಹೆಸರು ಕೈ ಬಿಡಿ' ಎಂದು Suryakumar Yadav ಖಡಕ್ ಪಟ್ಟು!

ಕಾಂಗ್ರೆಸ್ ಮಾತ್ರ ಭಾರತವನ್ನು ಮುನ್ನಡೆಸಲು ಸಾಧ್ಯ ಎಂಬ ಕಟ್ಟುಕತೆಯನ್ನು ಮೋದಿ ಮುರಿದಿದ್ದಾರೆ: ಎಚ್‌ಡಿ ದೇವೇಗೌಡ

ಓಮನ್ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ ಔಟ್; RCB ಆಟಗಾರನಿಗೆ ಸ್ಥಾನ

SCROLL FOR NEXT