ಸಲಗ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟ ದುನಿಯಾ ವಿಜಯ್ ಇದೀಗ ತಮ್ಮ ನಿರ್ದೇಶನದ ಎರಡನೇ ಚಿತ್ರದವಾದ 'ಭೀಮ' ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಆಕ್ಷನ್-ಪ್ಯಾಕ್ಡ್ ಕ್ರೈಮ್ ಡ್ರಾಮಾವನ್ನು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ.
ವದಂತಿಗಳ ಪ್ರಕಾರ, ಶಿವರಾಜ್‌ಕುಮಾರ್ ಅವರ ಭೈರತಿ ರಣಗಲ್ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಯೋಜನೆಯಿಂದ ಹಿಂದೆ ಸರಿಯುವ ಸಾಧ್ಯತೆಯಿದ್ದು, ಆ ವೇಳೆಯಲ್ಲಿ ಭೀಮ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದಲ್ಲದೆ, ಅಲ್ಲು ಅರ್ಜುನ್-ಫಹಾದ್ ಫಾಸಿಲ್ ಅಭಿನಯದ ಪುಷ್ಪ 2 ಚಿತ್ರ ಬಿಡುಗಡೆಯನ್ನು ಆಗಸ್ಟ್ ಮಧ್ಯದಿಂದ ಡಿಸೆಂಬರ್ 6ಕ್ಕೆ ಮುಂದೂಡಿರುವುದರಿಂದ ಸ್ವಾತಂರ್ತ್ಯ ದಿನಾಚರಣೆಯ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಲು ಭೀಮ ಚಿತ್ರತಂಡ ನೋಡುತ್ತಿದೆ ಎನ್ನಲಾಗುತ್ತಿದೆ.
ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣದ ಭೀಮ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ, ಮಾಸ್ತಿ ಅವರ ಸಂಭಾಷಣೆ, ಶಿವಸೇನಾ ಅವರ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ರಂಗಭೂಮಿ ಹಿನ್ನೆಲೆಯ ತಾಜಾ ಮುಖವಾದ ಅಶ್ವಿನಿ ಜೊತೆಗೆ ನಾಯಕನಾಗಿ ದುನಿಯಾ ವಿಜಯ್ ನಟಿಸಿದ್ದಾರೆ. ಚಿತ್ರದಲ್ಲಿ ಬ್ಲಾಕ್ ಡ್ರ್ಯಾಗನ್ ಮಂಜು, ಅಚ್ಯುತ್ ಕುಮಾರ್, ರಂಗಾಯಣ ರಘು, ಗಿರಿಜಾ ಮತ್ತು ಕಲ್ಯಾಣಿ ರಾಜು ಪ್ರಮುಖ ಪಾತ್ರಗಳಲ್ಲಿದ್ದಾರೆ.