ಬಾದಲ್' ಮತ್ತು 'ಗುಲಾಬೋ' ನಂತಹ ಜನಪ್ರಿಯ ಹಿಂದಿ ಸಿಂಗಲ್ ಟ್ರ್ಯಾಕ್‌ಗಳಿಗೆ ಹೆಸರುವಾಸಿಯಾದ ಸಂಜಿತ್ ಹೆಗ್ಡೆ, ಅವರ ಇತ್ತೀಚಿನ ಕನ್ನಡ ಹಾಡು 'ನಂಗೆ ಅಲ್ಲವ' ರಿಲೀಸ್ ಮಾಡಿದ್ದಾರೆ.
ಕನ್ನಡದ ರಿಯಾಲಿಟಿ ಶೋ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಗಾಯಕ ಸಂಜಿತ್ ಹೆಗ್ಡೆ. ಚಿಕ್ಕ ವಯಸ್ಸಿನಲ್ಲಿಯೇ ತನ್ನ ವಿಶಿಷ್ಠ ಧ್ವನಿಯಿಂದ ಸಂಗೀತ ಪ್ರಿಯರ ಗಮನ ಸೆಳೆದಿದ್ದಾರೆ. ಸಂಜಿತ್ ಹೆಗ್ಡೆ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ತಾವೇ ಹಾಡಿದ ಹಾಡುಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಈಗ ಕನ್ನಡದಲ್ಲಿ ಹೊಸ ಹಾಡೊಂದನ್ನು ರಿಲೀಸ್ ಮಾಡಿದ್ದಾರೆ.
ನಂಗೆ ಅಲ್ಲವ..." ಅಂತ ಸುಮಧುರವಾಗಿ ಹಾಡಿರುವ ಸಂಚಿತ್ ಹೆಗ್ಡೆಯ ಹಾಡು ಮೋಡಿ ಮಾಡುತ್ತಿದೆ. ಈ ಹಾಡಿನಲ್ಲಿ ಯುವ ನಟಿ ಸಂಜನಾ ದಾಸ್ ಜೊತೆ ಸಂಜಿತ್ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ "ನಂಗೆ ಅಲ್ಲವ.." ತಮ್ಮದೇ ತಂಡದೊಂದಿಗೆ ಸ್ವತಂತ್ರವಾಗಿ ರಚಿಸಿರುವ ಹಾಡು. ಯುವ ಜೋಡಿಯ ಪ್ರೀತಿ, ಸರಸ-ವಿರಸಗಳನ್ನು ಹೇಳುವ ಹಾಡಿದು. ಈಗಾಗಲೇ ಈ ಹಾಡು ಸಂಜಿತ್ ಹೆಗ್ಡೆ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿದೆ.
ಈ ಹಾಡಿಗೆ ನಾಗಾರ್ಜುನ್ ಶರ್ಮಾ ಪದಗಳನ್ನು ಹೆಣೆದಿದ್ದಾರೆ. ವಿಶೇಷ ಅಂದರೆ, ಈ ಹಾಡನ್ನು ಸಂಜಿತ್ ಹೆಗ್ಡೆ ಕಂಪೋಸ್ ಮಾಡಿ, ಹಾಡನ್ನೂ ಹಾಡಿರೋದು ವಿಶೇಷ. ಈ ಅಲ್ಬಮ್ ಸಾಂಗ್ ಅನ್ನು ಬಿಜೋಯ್ ಶೆಟ್ಟಿ ನಿರ್ದೇಶನ ಮಾಡಿದ್ದು, ಸಂಗೀತ ಪ್ರಿಯರಿಗೆ ಇಷ್ಟ ಆಗಿದೆ. ಯುವ ಪ್ರೇಮಿಗಳ ಯುಗಳ ಗೀತೆಯಂತಿರುವ "ನಂಗೆ ಅಲ್ಲವ.." ಹಾಡು ಇಷ್ಟ ಆಗುತ್ತಿದೆ.
ಈ ಹಾಡು ನನ್ನ ಜೀವನವನ್ನು ಬದಲಾಯಿಸಿತು. ಈ ಹಾಡು ರಿಲೀಸ್ ಆದ ಬಳಿಕ ನಾನು ತುಂಬಾ ಆತಂಕಗೊಂಡಿದ್ದು, ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಂಗೆ ಅಲ್ಲವಾ ಹಾಡು ನನ್ನ ಪ್ರೀತಿಯ ಜೀವನದ ಪ್ರಯಣವನ್ನು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು. ಈ ಜರ್ನಿಯ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಹಾಡು ಬಿಡುಗಡೆಯೊಂದಿಗೆ ಹೃದಯ ತುಂಬಾ ಹಗುರ ಎನಿಸುತ್ತದೆ" ಎಂದು ಸಂಜಿತ್ ಹೆಗ್ಡೆ ಹೇಳಿಕೊಂಡಿದ್ದಾರೆ.